ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 
ಪ್ರಧಾನ ಸುದ್ದಿ

ಮಾತುಕತೆ ನಡೆಸುವ ಉದ್ದೇಶವಿದ್ದರೆ ಬನ್ನಿ: ಭಾರತದ ಖಡಕ್ ಎಚ್ಚರಿಕೆ

ಶಿಮ್ಲಾ ಒಪ್ಪಂದದಂತೆ ಎರಡೂ ದೇಶಗಳ ನಡುವಿನ ಮಾತುಕತೆಯಲ್ಲಿ 3ನೇ ವ್ಯಕ್ತಿಗೆ ಅವಕಾಶ ಇಲ್ಲ. ಉಫಾ ಹೇಳಿಕೆ ಪ್ರಕಾರ ಎನ್‍ಎಸ್‍ಎ ಹಂತದ ಮಾತುಕತೆ ಕೇವಲ ಭಯೋತ್ಪಾದನೆಗಷ್ಟೇ ಸೀಮಿತ...

ನವದೆಹಲಿ: ಶಿಮ್ಲಾ ಒಪ್ಪಂದದಂತೆ ಎರಡೂ ದೇಶಗಳ ನಡುವಿನ ಮಾತುಕತೆಯಲ್ಲಿ 3ನೇ ವ್ಯಕ್ತಿಗೆ ಅವಕಾಶ ಇಲ್ಲ. ಉಫಾ ಹೇಳಿಕೆ ಪ್ರಕಾರ ಎನ್‍ಎಸ್‍ಎ ಹಂತದ ಮಾತುಕತೆ ಕೇವಲ  ಭಯೋತ್ಪಾದನೆಗಷ್ಟೇ ಸೀಮಿತ. ಹಾಗಾಗಿ ಮೂರನೇ ವ್ಯಕ್ತಿಯಾಗಿ ಹುರಿಯತ್ ಕಾನ್ಫರೆನ್ಸ್ ಅನ್ನು ಎಳೆತರುವ, ಮಾತುಕತೆಯನ್ನು ಭಯೋತ್ಪಾದನೆ ಯಾಚೆ ವಿಸ್ತರಿಸುವ ಕೆಲಸ ಮಾಡಬೇಡಿ  ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ಭದ್ರತಾ ಸಲಹೆಗಾರರ ಮಾತುಕತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಉಫಾದಲ್ಲಿ ಹೊರಡಿಸಲಾದ ಹೇಳಿಕೆಯಂತೆ ಎನ್‍ಎಸ್‍ಎ ಹಂತದ  ಮಾತುಕತೆಗೆ ಭಯೋತ್ಪಾದನೆಯೇ ಮೂಲ ತಿರುಳು. ಇಲ್ಲಿ ಮೂರನೇ ವ್ಯಕ್ತಿಗಳನ್ನು ಎಳೆತರುವ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ಮಧ್ಯರಾತ್ರಿವರೆಗೆ ಗಡುವು ಕೊಡುತ್ತೇವೆ. ಮಾತುಕತೆ  ಬೇಕೋ, ಬೇಡವೋ ಎನ್ನುವ ಅಂತಿಮ ನಿರ್ಧಾರ ನೀವೇ ತೆಗೆದುಕೊಳ್ಳಿ ಎಂಬ ಸಂದೇಶ ರವಾನಿಸಿದ್ದಾರೆ.

ಇದರಿಂದ ಇಕ್ಕಟ್ಟಿಗೆ ಸಿಲುಕಿದ ಪಾಕ್, ಸುಷ್ಮಾ ಮಾತು ನೋಡಿದರೆ ಭಾರತಕ್ಕೆ ಮಾತುಕತೆ ಇಷ್ಟವಿದ್ದಂತೆ ಕಾಣುತ್ತಿಲ್ಲ. ನಾವು ಷರತ್ತುಬದ್ಧ ಮಾತುಕತೆಗೆ ಸಿದ್ಧವಿಲ್ಲ. ಕಾಶ್ಮೀರ ವಿಚಾರ ಬದಿಗಿಟ್ಟು ಮಾತುಕತೆ ಸಾಧ್ಯವಿಲ್ಲ ಎಂದು ಆರೋಪಿಸಿ ಮಾತುಕತೆಯನ್ನು ರದ್ದು ಮಾಡಿದೆ.

ಸುಷ್ಮಾ ಮಾತಿನೇಟು
-ಶಿಮ್ಲಾ ಒಪ್ಪಂದದಂತೆ ಎರಡೂ ದೇಶಗಳ ನಡುವಿನ ಮಾತುಕತೆಯಲ್ಲಿ 3ನೇ ವ್ಯಕ್ತಿಗೆ ಅವಕಾಶ ಇಲ್ಲ. ಉಫಾ ಹೇಳಿಕೆ ಪ್ರಕಾರ ಎನ್‍ಎಸ್‍ಎ ಹಂತದ ಮಾತುಕತೆ ಕೇವಲ ಭಯೋತ್ಪಾದನೆಗಷ್ಟೇ  ಸೀಮಿತ. ಹಾಗಾಗಿ ಮೂರನೇ ವ್ಯಕ್ತಿಯಾಗಿ ಹುರಿಯತ್ ಕಾನ್ಫರೆನ್ಸ್ ಅನ್ನು ಎಳೆತರುವ, ಮಾತುಕತೆಯನ್ನು ಭಯೋತ್ಪಾದನೆ ಯಾಚೆ ವಿಸ್ತರಿಸುವ ಕೆಲಸ ಮಾಡಬೇಡಿ.
-ಮಾತುಕತೆಯಲ್ಲಿ ಕಾಶ್ಮೀರವೇ ಮುಖ್ಯ ವಿಚಾರ ವಿಚಾರ ಎನ್ನುವುದಾದರೆ ಉಫಾ ಹೇಳಿಕೆಯಲ್ಲಿ ಅದರ ಪ್ರಸ್ತಾಪವೇ ಯಾಕಿಲ್ಲ. ಮೊದಲು ಭಯೋತ್ಪಾದನೆ ಕುರಿತು ಮಾತನಾಡೋಣ. ನಂತರ ಕಾಶ್ಮೀರ ವಿಚಾರ ಚರ್ಚಿಸೋಣ.
-ಪಾಕ್ ಎರಡು ಡಿಜಿಎಂಒಗಳ ನಡುವಿನ ಮಾತುಕತೆ ದಿನಾಂಕವನ್ನು ಈವರೆಗೆ ಕೊಟ್ಟೇ ಇಲ್ಲ. ಇದು ಅವರ ಉದ್ದೇಶವೇನು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಎನ್‍ಎಸ್‍ಎ ಸಭೆಗೂ ಮೊದಲೇ ಡಿಜಿಎಂಒ ಸಭೆ ನಡೆದರೆ ಮಾತುಕತೆಗೆ ವೇದಿಕೆಯಾಗುತ್ತದೆ. ಹಾಗಾಗಿ ಈ ಮೂರೂ ಸಭೆ ನಡೆಯಬಾರದು ಎನ್ನುವುದೇ ಅದರ ಉದ್ದೇಶ.
-ಸರ್ತಾರ್ ಅಜೀಜ್ ಭಾರತವು ಮಾತುಕತೆಯಿಂದ ದೂರ ಓಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಭಾರತ ಯಾವತ್ತೂ ಮಾತುಕತೆಯಿಂದ ದೂರ ಉಳಿದಿಲ್ಲ. ಆದರೆ, ನಾವು ಮಾತುಕತೆಗೆ  ಪೂರಕವಾದ ವಾತಾವರಣ ನಿರ್ಮಾಣ ವಾಗಬೇಕೆಂದು ಬಯಸುತ್ತೇವೆ.
-ಸರ್ತಾಜ್ ಭಾರತಕ್ಕೆ ಬಂದರೆ ನಮ್ಮ ಮೇಲಿನ ಆರೋಪಕ್ಕೆ ದಾಖಲೆಪತ್ರಗಳನ್ನಷ್ಟೇ ಮುಂದಿಡಬಹುದು. ಆದರೆ, ನಾವು ಸಾಕ್ಷಿಯಾಗಿ ಜೀವಂತ ಉಗ್ರ (ನಾವೆದ್)ನನ್ನೇ ಮುಂದಿಡುತ್ತಿದ್ದೆವು.

ತಡವಾಗಿ ಉತ್ತರಿಸಿದರು
ಎನ್‍ಎಸ್‍ಎ ಹಂತದ ಮಾತುಕತೆಗೆ ಸಂಬಂಧಿಸಿ ಭಾರತವೇ ಆಸಕ್ತಿ ತೋರುತ್ತಿಲ್ಲ ಎಂದು ಪಾಕ್ ಶುಕ್ರವಾರ ಮಾಡಿದ್ದ ಆರೋಪಕ್ಕೂ ಸುಷ್ಮಾ ಖಾರ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಮಾತುಕತೆಗೆ  ಸಂಬಂಧಿಸಿ ಜು.23ರಂದೇ ಪತ್ರ ಬರೆದಿದ್ದೆವು. ಆ.23ರ ದಿನವನ್ನೂ ನಿಗದಿ ಮಾಡಿದ್ದೆವು. ಆದರೆ, ಇದಕ್ಕೆ ಪಾಕಿಸ್ತಾನದಿಂದ ಉತ್ತರ ಬಂದದ್ದು ಆ.14ರಂದು ಎಂದಿದ್ದಾರೆ.

ಶಬೀರ್‍ಗೆ ಗೃಹ ಬಂಧನ
ಭಾರತ ಪಾಕ್ ಮಾತುಕತೆಗೂ ಮುನ್ನ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರಾದ ಶಬೀರ್ ಷಾ ಹಾಗೂ ರಾತ್ರಿ ಗನಿಲೋನ್ ರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ. ಇವರಿಬ್ಬರಿಗೂ ಗೃಹ ಬಂಧನ ವಿಧಿಸಲಾಗಿದೆ.

ಸುಷ್ಮಾ ಅವರು ಮುಂದಿಟ್ಟ ಷರತ್ತುಗಳನ್ನು ಒಪ್ಪಿಕೊಂಡರೆ ಎರಡೂ ದೇಶಗಳ ನಡುವಿನ ಎನ್‍ಎಸ್‍ಎ ಹಂತದ ಮಾತುಕತೆಯಿಂದ ಯಾವುದೇ ಉದ್ದೇಶ ಸಾಧನೆಯಾಗುತ್ತದೆಂದು  ನಮಗನ್ನಿಸುವುದಿಲ್ಲ.
-ಪಾಕ್ ವಿದೇಶಾಂಗ ಸಚಿವಾಲಯ

ನೀವು ಮಾತುಕತೆಗೆ ಬರಲು ಸಿದ್ಧರಿದ್ದರೆ ಬನ್ನಿ. ನಾವು ನಿಮ್ಮನ್ನು ಸ್ವಾಗತಿಸಲು ಸಿದ್ಧರಿದ್ದೇವೆ. ಹೀಗೆ ಬರುವಾಗ ಶಿಮ್ಲಾ ಮತ್ತು ಉಫಾ ಒಪ್ಪಂದಗಳನ್ನು ನೀವು ಗೌರವಿಸಬೇಕು ಎನ್ನುವುದಷ್ಟೇ  ನಮ್ಮ ಬಯಕೆ.
-ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ: ವಿಂಡೀಸ್ ವಿರುದ್ಧ ಗೆಲುವು; T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್