ಮಾಜಿ ಮೇಯರ್ ಶಾಂತಾಕುಮಾರಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಮಾಜಿ ಮೇಯರ್ ಶಾಂತಾಕುಮಾರಿಗೆ ಗೆಲುವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮೇಯರ್ ಎನ್ ಶಾಂತಾಕುಮಾರಿ ಅವರು ಗೆಲುವು ಸಾಧಿಸಿದ್ದಾರೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮೇಯರ್ ಎನ್  ಶಾಂತಾಕುಮಾರಿ ಅವರು ಗೆಲುವು ಸಾಧಿಸಿದ್ದಾರೆ.

ಇನ್ನು ದತ್ತಾತ್ರೆಯ ದೇವಾಸ್ಥಾನ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷದ ಸತ್ಯನಾರಾಯಣ ಅವರು ಗೆಲುವು ಸಾಧಿಸಿದ್ದು, ಯಲಂಹಕದ ಚೌಡೇಶ್ವರಿ ವಾರ್ಡ್ ನಿಂದ ಸ್ಪರ್ಧಿಸಿದ್ದ ಯಲಹಂಕ ಶಾಸಕ  ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ಅವರು ಸೋಲು ಕಂಡಿದ್ದಾರೆ. ಮಲ್ಲಸಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಎನ್ ಲೋಕೇಶ್ ಅವರು ಮುನ್ನಡೆ ಕಾಯ್ದುಕೊಂಡಿದ್ದರೆ, ಜಾಲಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಜೆಎನ್ ಶ್ರೀನಿವಾಸ ಮೂರ್ತಿ ಅವರು ಗೆಲುವು ಸಾಧಿಸಿದ್ದಾರೆ. ಜೆಪಿ ಪಾರ್ಕ್ ವಾರ್ಡ್ ನಲ್ಲಿ  ಬಿಜೆಪಿಯ ಮಮತಾ ಅವರು ಗೆಲುವು ಸಾಧಿಸಿದ್ದಾರೆ.ವಿಜಯನಗರದ ಕೆಂಪಾಪುರ ಅಗ್ರಹಾರದಿಂದ  ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಗಾಯತ್ರಿ ಅವರು ಗೆಲುವು ಸಾಧಿಸಿದ್ದಾರೆ.

ಇನ್ನು ಕೆಆರ್ ಮಾರುಕಟ್ಟೆಯಲ್ಲಿ ಜೆಡಿಎಸ್ ನಜೀಮಾ ಖಾನಂ ಅವರು ಗೆಲುವು ಸಾಧಿಸಿದ್ದರೆ, ಸಿದ್ಧಾಪುರದಲ್ಲಿ ಕಾಂಗ್ರೆಸ್ ನ ಎಂ. ಉದಯ್ ಶಂಕರ್ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.  ಜಕ್ಕೂರು ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಕೆವಿ ಮುನೀಂದ್ರ ಕುಮಾರ್ ಅವರು ಗೆಲುವು ಸಾಧಿಸಿದ್ದರೆ, ವಿದ್ಯಾರಣ್ಯ ಪುರ ವಾರ್ಡ್ ನಲ್ಲಿ ಬಿಜೆಪಿಯ ಕುಸುಮಾ ಹೆಚ್ ಅವರು ಗೆಲುವು ಸಾಧಿಸಿದ್ದಾರೆ.  ಶೆಟ್ಟಿಹಳ್ಳಿಯಲ್ಲಿ ಕೆನಾಗಭೂಷಣ್ ಅವರು ಗೆಲುವು ಸಾಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!