ಆರ್ ವಿ ದೇವರಾಜ್ ಮತ್ತು ಆರ್ ವಿ ಯುವರಾಜ್ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಸುಧಾಮನಗರದಲ್ಲಿ ಆರ್ ವಿ ಯುವರಾಜ್ ಗೆಲುವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಸುಧಾಮ ನಗರ ವಾರ್ಡ್ ನಿಂದ ಸ್ಪರ್ಧಿಸಿದ್ದ ಆರ್ ವಿ ಯುವರಾಜ್ ಗೆಲುವು ಸಾಧಿಸಿದ್ದಾರೆ...

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಸುಧಾಮ ನಗರ ವಾರ್ಡ್ ನಿಂದ ಸ್ಪರ್ಧಿಸಿದ್ದ ಆರ್ ವಿ ಯುವರಾಜ್ ಗೆಲುವು  ಸಾಧಿಸಿದ್ದಾರೆ.

ಆರ್ ವಿ ಯುವರಾಜ್ ಚಿಕ್ಕಪೇಟೆ ಕಾಂಗ್ರೆಸ್ ಶಾಸಕ ಆರ್ ವಿ ದೇವರಾಜ್ ಅವರ ಮಗನಾಗಿದ್ದು, ಸುಧಾಮನಗರ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಇದಲ್ಲದೆ ಹಲವು ವಾರ್ಡ್  ಗಳ ಫಲಿತಾಂಶ ಪ್ರಕಟಗೊಂಡಿದ್ದು, ಉಲ್ಲಾಳು ನಲ್ಲಿ ಬಿಜೆಪಿಯ ಶಾರದಾ ಮುನಿರಾಜು ಗೆಲುವು ಸಾಧಿಸಿದ್ದರೆ, ಅತ್ತಿಗುಪ್ಪೆ ಕ್ಷೇತ್ರದಲ್ಲಿ ಡಾ.ಎಸ್ ರಾಜು ಬಿಜೆಪಿ ಸಾಧಿಸಿದ್ದಾರೆ. ಕೆಂಪೇಗೌಡ ವಾರ್ಡ್  ನಲ್ಲಿ ಬಿಜೆಪಿ ಚಂದ್ರಮ್ಮ ಮತ್ತು ಅಟ್ಟೂರು ವಾರ್ಡ್ ನಲ್ಲಿ ಬಿಜೆಪಿ ನೇತ್ರ ಪಲ್ಲವಿ ಅವರು ಗೆಲುವು ಸಾಧಿಸಿದ್ದಾರೆ. ಚೌಡೇಶ್ವರಿ ವಾರ್ಡ್ ನಲ್ಲಿ ಕಾಂಗ್ರೆಸ್ ನ ಪದ್ಮಾವತಿ ಅಮರನಾಥ್ ಕಾಂಗ್ರೆಸ್  ಗೆಲುವು ಸಾಧಿಸಿದ್ದಾರೆ.

ಹೂಡಿ ವಾರ್ಡ್ ನಲ್ಲಿ ಕಾಂಗ್ರೆಸ್ ನ ಎ.ಸಿ.ಹರಿ ಪ್ರಸಾದ್ ಅವರು ಗೆಲುವು ಸಾಧಿಸಿದ್ದಾರೆ. ಸಿವಿ ರಾಮನಗರದಲ್ಲಿ ಬಿಜೆಪಿಯ ಅರುಣಾ ರವಿ ಬಿಜೆಪಿ ಗೆಲುವು ಸಾಧಿಸಿದೆ. ದೊಮ್ಮಲೂರು ವಾರ್ಡ್ ನಲ್ಲಿ  ಪಕ್ಷೇತರ ಅಭ್ಯರ್ಥಿ ಲಕ್ಷ್ಮೀನಾರಾಯಣ ಅವರು ಗೆಲುವು ಸಾಧಿಸಿದ್ದಾರೆ. ರಾಮಸ್ವಾಮಿ ಪಾಳ್ಯ ವಾರ್ಡ್ ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನ ನೇತ್ರಾವತಿ ಗಣೇಶ್ ಅವರು ಮತ್ತು ಜಯಮಹಲ್  ಕ್ಷೇತ್ರದಿಂದ ಕಾಂಗ್ರೆಸ್ ಎಂಕೆ ಗುಣಶೇಖರ್ ಅವರು ಗೆಲುವು ಸಾಧಿಸಿದ್ದಾರೆ.

ವಿಜಯನಗರ ವಾರ್ಡ್ ನಿಂದ ಬಿಜೆಪಿಯ ಶ್ರೀಲತಾ ಗೋಪಿನಾಥ್ ರಾಜು ಅವರು ಮತ್ತು ಹೊಸಹಳ್ಳಿ ವಾರ್ಡ್ ನಲ್ಲಿ ಬಿಜೆಪಿಯ ಆರ್ ಮಹಾಲಕ್ಷ್ಮಿ ಗೆಲುವು ಸಾಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ