ಶ್ರೀನಗರ: ಕಾಶ್ಮೀರ ವಿವಾದವನ್ನು ಬಗೆಹರಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಕೊಂದು ಹಾಕಿದ್ದಾರೆ ಎಂದು ಆರೋಪಿಸಿರುವ ಪ್ರತ್ಯೇಕವಾದಿ ಮುಖಂಡ ಶಬೀರ್ ಅಹ್ಮದ್ ಷಾ, ಭಾರತಕ್ಕೆ ಭಗತ್ ಸಿಂಗ್ ಹೇಗೆ ಹೀರೋ ಆಗಿದ್ದಾರೋ ಹಾಗೆಯೇ ಭಯೋತ್ಪಾದಕರು ಕಾಶ್ಮೀರಿಗಳಿಗೆ ಹೀರೋಗಳು" ಎಂದು ಸೋಮವಾರ ಹೇಳಿದ್ದಾರೆ.
"ಭಾರತ ಭಗತ್ ಸಿಂಗ್ ಅವರನ್ನು ಸಂಭ್ರಮಿಸುವ ಹಾಗೆ, ಭಯೋತ್ಪಾದಕರು ನಮ್ಮ ಹೀರೋಗಳು" ಎಂದು ಪಾಕಿಸ್ತಾನದ ರಕ್ಷಣಾ ಸಲಹೆಗಾರ ಸತ್ರಾಜ್ ಅಜೀಜ್ ಅವರನ್ನು ಭೇಟಿಮಾಡಲು ದೆಹಲಿಗೆ ತೆರಳಿದ್ದಾಗ ಎರಡು ದಿನಗಳವರೆಗೆ ಬಂಧನಕ್ಕೆ ಒಳಗಾಗಿದ್ದ ಶಬೀರ್ ಕಾಶ್ಮೀರಕ್ಕೆ ಹಿಂದಿರುಗಿ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಮಾತುಕತೆ ಮುರಿಯುವುದಕ್ಕೆ ನೀವು ಕಾರಣ ಎಂದದ್ದಕೆ " ನೀವು ನನ್ನನು ದೂರುತ್ತಿರುವುದು ಆಶ್ಚರ್ಯಕರವಾಗಿದೆ" ಎಂದಿದ್ದಾರೆ.
ವಾಜಪೇಯಿ ಅವರ ಕಾಶ್ಮೀರಿ ನೀತಿ 'ಗತಕಾಲದ ಸಂಗತಿ' ಎಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೇಳಿಕೆಯನ್ನು ದುರದೃಷ್ಟಕರ ಎಂದಿರುವ ಅವರು ಮಾಜಿ ಪ್ರಧಾನಿಯವರ ಆಡಳಿತದ ಸಮಯದಲ್ಲಿ ಕಾಶ್ಮೀರ ವಿವಾದ ಮಾತುಕತೆಯಲ್ಲಿ ಪ್ರತ್ಯೇಕವಾದಿಗಳು ಭಾಗವಾಗಿದ್ದರು ಎಂದಿದ್ದಾರೆ.
ಕಾಶ್ಮೀರ ವಿವಾದದ ಬಗ್ಗೆ ಪಾಕಿಸ್ತಾನದ ನಿಲುವನ್ನು ಪ್ರಶಂಸಿಸಿರುವ ಅವರು, ಭಾರತ ನಿರಾಕರಿಸುವ ಮನಸ್ಥಿತಿಯಿಂದ ಹೊರಬರಬೇಕು ಎಂದಿದ್ದಾರೆ.