ಪೋಷಕರೊಂದಿಗೆ ಪ್ರಶಸ್ತಿ ವಿಜೇತ ರಶ್ಮಿ ಸುಂದರೇಶ್ ಔರಸಂಗ (ಚಿತ್ರಕೃಪೆ: ಫೇಸ್ ಬುಕ್) 
ಪ್ರಧಾನ ಸುದ್ದಿ

ರಶ್ಮಿ ಸುಂದರೇಶ ಔರಸಂಗ್ ಗೆ ರಾಜ್ಯ ಪ್ರಶಸ್ತಿ

ವಿಶ್ವವಿಕಲಚೇತನರ ಕಲ್ಯಾಣಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳು, ವಿಶೇಷ ವ್ಯಕ್ತಿಗಳು, ಶಿಕ್ಷಕರಿಗೆ ರಾಜ್ಯದ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲಿಕರಣ ಇಲಾಖೆಯು ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕಲಬುರ್ಗಿ ಮೂಲದ ರಶ್ಮಿ ಸುಂದರೇಶ ಔರಸಂಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರು: ವಿಶ್ವವಿಕಲಚೇತನರ ಕಲ್ಯಾಣಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳು, ವಿಶೇಷ ವ್ಯಕ್ತಿಗಳು, ಶಿಕ್ಷಕರಿಗೆ ರಾಜ್ಯದ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕ  ಸಬಲಿಕರಣ ಇಲಾಖೆಯು ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕಲಬುರ್ಗಿ ಮೂಲದ ರಶ್ಮಿ ಸುಂದರೇಶ ಔರಸಂಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶ್ವ ವಿಕಲಚೇತನರ ದಿನದ ಅಂಗವಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.  ಹುಬ್ಬಳ್ಳಿಯ ಆಲ್ ಇಂಡಿಯಾ ಯೂತ್ ಫೆಡರೇಷನ್ಸ್, ಬೆಂಗಳೂರಿನ ಎನೆಬಲ್ ಇಂಡಿಯಾ ಈ ಎರಡು  ಸಂಸ್ಥೆಗಳನ್ನು ವಿಶೇಷ ಸಾಧನೆಗೈದ ಸಂಸ್ಥೆಗಳೆಂದು ಆಯ್ಕೆ ಮಾಡಿದ್ದು ತಲಾ 50 ಸಾವಿರ ನಗದು ನೀಡಿ ಸನ್ಮಾನಿಸಲಾಗುತ್ತಿದೆ. ಬೆಂಗಳೂರಿನ ಪ್ರೇರಣಾ ರಿಸೋರ್ಸ್ ಸೆಂಟರ್, ಧರಿತ್ರಿ ಟ್ರಸ್ಟ, ಸ್ನೇಹ ದೀಪ ಅಂಗವಿಕಲರ ಸಂಸ್ಥೆ, ಮಾತೃ ಶ್ರವಣದೋಷ ಮಕ್ಕಳ ಉಚಿತ ವಸತಿ ಶಾಲೆ ಹಾಗೂ ಮೈಸೂರಿನ ಸ್ನೇಹಕಿರಣ ಆಫ್  ಮೈಸೂರು ಸ್ಪಾಸ್ಟಿಕ್ ಸೊಸೈಟಿ ಮತ್ತು ಅಸೋಸಿಯೇಷನ್ ಫಾರ್ ದಿ ವೆಲ್ಫೇರ್ ಆಫ್  ದಿ ಮೆಂಟಲಿ ಡಿಸೇಬಲ್ಡ್ ಸಂಸ್ಥೆಗಳು ಸೇರಿದಂತೆ ಬಳ್ಳಾರಿಯ ನವಜೀವನ ಪುನಃಶ್ಚೇತನ ಕೇಂದ್ರ ಹಾಗೂ ಉಕ ಆಶಾನಿಕೇತನ ಕಿವುಡ ಮಕ್ಕಳ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿವೆ. ಈ ಸಂಸ್ಥೆಗಳಿಗೆ ತಲಾ 25 ಸಾವಿರ ನಗದು ಮತ್ತು ಪ್ರಶಸ್ತಿ  ಫಲಕ ಪುರಸ್ಕಾರ ದೊರೆಯಲಿದೆ.

ಶಿಕ್ಷಕರು ಯಾರ್ಯಾರು?: ವಿಕಲಚೇತನ ಮಕ್ಕಳ ಶೇಯೋಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರನ್ನು ಗುರುತಿಸಿ ತಲಾ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತಿದೆ. ಮಂಜುನಾಥ ದುಸಂಗಪ್ಪ ಹದ್ದಣ್ಣವರ ಗದಗ, ನಿಂಗಪ್ಪ ಬ ಹೋಗಾರ ಬೆಳಗಾವಿ, ಹರಿಣಾಕ್ಷಿ ಕುಲಾಲ ಮಂಗಳೂರು, ಸುಶೀಲ ಮೈಸೂರು ಹಾಗೂ ಬೆಂಗಳೂರಿನ ಎಸ್ ಮಂಜುಳಾ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಲಾ 15 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ.  ಬೆಂಗಳೂರಿನ ಎಸ್ ಅಮರನಾಥ್, ಎಂ.ಕೃಷ್ಣಪ್ಪ, ಡಾ. ಎಂ. ಎಸ್. ವೆಂಕಟೇಶ್, ಕೆ ಎಸ್ ವಿಶ್ವಾಸ್, ರುಕ್ಮಿಣಿ ಕೃಷ್ಣಸ್ವಾಮಿ, ಅಂಜನಾಮೂರ್ತಿ ತುಮಕೂರು, ಎಂ ಜೆ ಅರ್ಚನಾ ಉಡುಪಿ, ವಿಜಯಾ ಮೈಲಾರ ಕಳ್ಳಿಮಠ ಹಾವೇರಿ, ಮೋಯಿನ್ ಜುನೇದಿ ಬೆಳಗಾವಿ,  ಮೌಲಪ್ಪಾಬೀದರ್, ರಶ್ಮಿ ಸುಂದರೇಶ ಔರಸಂಗ ಕಲಬುರ್ಗಿ ಹಾಗೂ ಕೆ ನಾಗರಾಜಕೊಪ್ಪಳ ಅವರು ವೈಯಕ್ತಿಕ ಪ್ರಶಸ್ತಿ ಸ್ವಿಕರಿಸಲಿದ್ದಾರೆ.

ವಿಕಲಚೇತನರಾಗಿದ್ದರೂ ಸಹ  ಅಂಗವಿಲತೆ ಮೆಟ್ಟಿನಿಂತೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸಹ ಇಲಾಖೆ ಸನ್ಮಾನಿಸುತ್ತಿದೆ. ಬೆಂಗಳೂರಿನ ವಿ.ಎ.ಎ. ರಾಮಚಂದ್ರರಾವ್, ರೇಣುಕಾರಾಧ್ಯ, ರಾಜ ದೀಪ್, ಕುಮಾರಿ ಸಿಲ್ಪಾ ಎಂ, ದೀಪಾ ನರಸಿಂಹನ್, ರುಚಿರಾಫೆ.ಲೋದಿಯಾ, ಮತ್ತು ಸುಬ್ರಮಣಿ ಎಲ್. ಅವರು ವಿಶೇಷ ಸನ್ಮಾನಿತರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT