ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚೆನ್ನೈ- ಬೆಂಗಳೂರು ಪ್ರಯಾಣ ಉಚಿತ

ಪ್ರಕೃತಿ ವಿಕೋಪದಿಂದ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಚೆನ್ನೈದಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ...

ಕೆಎಸ್ ಆರ್ ಟಿಸಿ ಬಸ್ ಗಳು (ಸಂಗ್ರಹ ಚಿತ್ರ)
Srinivasa Murthy VN
Updated On : 6 Dec 2015, 12:12 pm

ಬೆಂಗಳೂರು: ಪ್ರಕೃತಿ ವಿಕೋಪದಿಂದ ಅನಾಹುತ ಉಂಟಾಗಿರುವ ಹಿನ್ನೆಲೆಯಲ್ಲಿ ಚೆನ್ನೈದಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆ ಉಚಿತ ಬಸ್ ವ್ಯವಸ್ಥೆ  ಕಲ್ಪಿಸಿದೆ.

ಡಿ. 12ರವರೆಗೆ ಈ ಉಚಿತ ಬಸ್ ಸೇವೆ ಲಭ್ಯವಿದೆ. ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆತರಲು ಸಾಧ್ಯವಿದ್ದು ಮತ್ತು ಈ ಸಾರಿಗೆಗಳಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ಇರುವ ಕಾರಣ 2 ಸಾಮಾನ್ಯ ಸಾರಿಗೆ ಮತ್ತು 1 ಐರಾವತ ಕ್ಲಬ್ ಕ್ಲಾಸ್‍ನ್ನು ಬೆಳಿಗ್ಗೆ 10 ಗಂಟೆಗೆ, ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 5 ಗಂಟೆಗೆ ಕಾರ್ಯಚರಣೆ ಮಾಡಲಾಗುತ್ತದೆ.  ಮತ್ತೊಂದೆಡೆ ಬೆಂಗಳೂರಿನಿಂದ ಚೆನ್ನೈಗೆ ಹಾಗೂ ಇತರೇ ನಗರಗಳಿಂದ ಚೆನ್ನೈಗೆ ಸಂಚರಿಸುವ ಎಲ್ಲಾ ಬಸ್ಸುಗಳಲ್ಲಿಯೂ ಪರಿಹಾರ ಸಾಮಾಗ್ರಿಗಳನ್ನು ಉಚಿತವಾಗಿ ಸಾಗಿಸುವ ವ್ಯವಸ್ಥೆ  ಕಲ್ಪಿಸಲಾಗಿದೆ. ಉಚಿತ ಬಸ್ ಕಾರ್ಯಚರಣೆ ಮಾಡುವ ಬಗ್ಗೆ ಚೆನ್ನೈ ಬಸ್ ನಿಲ್ದಾಣದಲ್ಲಿ ಬ್ಯಾನರ್‍ಗಳನ್ನು ಅಳವಡಿಸಲಾಗಿದೆ. ಸಂತ್ರಸ್ತರು ಇದನ್ನು ಸದುಪಯೋಗಪಡಿಸಿಕೊಳ್ಳಲು ಇಲಾಖೆ ಮನವಿ  ಮಾಡಿದೆ.

ಕೋರಿಕೆ ಮೇರೆಗೆ ಬಸ್:
ವಾರದ ದಿನಗಳಲ್ಲಿ 43 ಮತ್ತು ವಾರಾತ್ಯಂದಲ್ಲಿ 48 ಸೇವೆಗಳನ್ನು ಕಾರ್ಯಚರಣೆ ಮಾಡಲಾಗುತ್ತಿದೆ. ಆದರೆ, ಕಳೆದ 3 ದಿನಗಳಿಂದ ಪ್ರತಿದಿನ ಸರಾಸರಿ 55 ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement