ಬೆಂಗಳೂರು: ಮುಂದಿನ ತಿಂಗಳು ನಡೆಯಲಿದೆ ಎನ್ನಲಾದ ಬಹುನಿರೀಕ್ಷಿತ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಆವರ್ತನೆಯ ಆಧಾರದ ಮೀಸಲು ನಿಯಮಗಳ ಆಧಾರದ ಮೇಲೆ ಈ ಮೀಸಲಾತಿ ನಿಗದಿ ಮಾಡಲಾಗಿದೆ. ರಾಜ್ಯದ 1083 ಜಿಪಂ ಹಾಗೂ 3902 ತಾಪಂ ಮತಕ್ಷೇತ್ರಗಳಿಗೆ ಜನವರಿ ಮೊದಲ ಅಥವಾ ಎರಡನೇ ವಾರ ಚುನಾವಣೆ ನಡೆಸಲಾಗುವುದು ಎಂದು ಹೇಳಲಾಗುತ್ತಿದ್ದು, ಚುನಾವಣಾ ಆಯೋಗ ಈಗಾಗಲೇ ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಶನಿವಾರ ರಾತ್ರಿ 10 ಗಂಟೆ ವೇಳೆಗೆ ಸರ್ಕಾರದ ಅಧಿಕೃತ ವೆಬ್‍ಸೈಟ್‍ನಲ್ಲಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರ ಜಿಪಂ ಮೀಸಲು ಪಟ್ಟಿ ಮಾಚೋಹಳ್ಳಿ ಸಾಮಾನ್ಯ, ದಾಸನಪುರ ಹಿಂದುಳಿದ `ಅ' ವರ್ಗ(ಮಹಿಳೆ), ಮಾದಾವರ ಸಾಮಾನ್ಯ, ಗೋಪಾಲಪುರ ಅನುಸೂಚಿತ ಜಾತಿ, ಸೋಮಶೆಟ್ಟಿಹಳ್ಳಿ ಸಾಮಾನ್ಯ, ಕೊಡಿಗೇಹಳ್ಳಿ ಸಾಮಾನ್ಯ, ಚಿಕ್ಕಬಿದರಕಲ್ಲು ಸಾಮಾನ್ಯ (ಮಹಿಳೆ), ಮಾದನಾಯಕನಹಳ್ಳಿ ಸಾಮಾನ್ಯ(ಮಹಿಳೆ), ಸೊಂಡೆಕೊಪ್ಪ ಸಾಮಾನ್ಯ (ಮಹಿಳೆ), ಹೆಸರಘಟ್ಟ ಹಿಂದುಳಿದ `ಅ' ವರ್ಗ(ಮಹಿಳೆ), ಸೊಣ್ಣೇನಹಳ್ಳಿ ಸಾಮಾನ್ಯ, ಸಿಂಗನಾಯಕನಹಳ್ಳಿ ಸಾಮಾನ್ಯ, ಬೆಟ್ಟಹಲಸೂರು ಅನುಸೂಚಿತ ಪಂಗಡ, ಬಾಗಲೂರು ಹಿಂದುಳಿದ `ಅ' ವರ್ಗ(ಮಹಿಳೆ),ಹುಣಸಮಾರನಹಳ್ಳಿ ಸಾಮಾನ್ಯ(ಮಹಿಳೆ),ವಡೇರಹಳ್ಳಿ ಸಾಮಾನ್ಯ (ಮಹಿಳೆ), ಮಾರೇನಹಳ್ಳಿ ಅನುಸೂಚಿತ ಜಾತಿ (ಮಹಿಳೆ), ಕಾಡಿಗಾನಹಳ್ಳಿ ಅನುಸೂಚಿತ ಜಾತಿ(ಮಹಿಳೆ), ಬಿದರಹಳ್ಳಿಸಾಮಾನ್ಯ, ಮಂಡೂರು ಹಿಂದುಳಿದ`ಅ' ವರ್ಗ(ಮಹಿಳೆ), ಆವಲಹಳ್ಳಿ ಸಾಮಾನ್ಯ, ಕಣ್ಣೂರು ಅನುಸೂಚಿತ ಜಾತಿ (ಮಹಿಳೆ), ಕನ್ನಮಂಗಲ ಹಿಂದುಳಿದ `ಬ' ವರ್ಗ (ಮಹಿಳೆ), ಹಾಲನಾಯಕನಹಳ್ಳಿ ಅನುಸೂಚಿತ ಜಾತಿ, ತಾವರೆಕೆರೆಸಾಮಾನ್ಯ, ಚೋಳ ನಾಯಕನಹಳ್ಳಿ ಸಾಮಾನ್ಯ, ಕುಂಬಳಗೋಡು ಸಾಮಾನ್ಯ, ಅಗರ ಹಿಂದುಳಿದ `ಅ' ವರ್ಗ(ಮಹಿಳೆ), ಕಗ್ಗಲೀಪುರ ಹಿಂದುಳಿದ `ಅ' ವರ್ಗ, ಕೋನಪ್ಪನ ಅಗ್ರಹಾರ ಹಿಂದುಳಿದ `ಅ' ವರ್ಗ(ಮಹಿಳೆ), ದೊಡ್ಡೇರಿ ಅನುಸೂಚಿತ ಜಾತಿ (ಮಹಿಳೆ), ರಾಮಸಂದ್ರ ಸಾಮಾನ್ಯ (ಮಹಿಳೆ), ದೊಡ್ಡಬೆಲೆ ಸಾಮಾನ್ಯ (ಮಹಿಳೆ), ಸೋಮನಹಳ್ಳಿ ಅನುಸೂಚಿತ ಜಾತಿ (ಮಹಿಳೆ), ದೊಡ್ಡತೋಗೂರು ಅನುಸೂಚಿತ ಜಾತಿ, ಸರ್ಜಾಪುರ ಸಾಮಾನ್ಯ, ದೊಮ್ಮಸಂದ್ರಸಾಮಾನ್ಯ (ಮಹಿಳೆ), ನೆರಳೂರು ಹಿಂದುಳಿದ `ಬ' ವರ್ಗ, ಸಮಂದೂರು ಅನುಸೂಚಿತ ಜಾತಿ, ಮರಸೂರು ಅನುಸೂಚಿತ ಜಾತಿ, ಹುಲಿಮಂಗಲ ಸಾಮಾನ್ಯ(ಮಹಿಳೆ), ಬನ್ನೇರುಘಟ್ಟ ಹಿಂದುಳಿದ `ಅ' ವರ್ಗ (ಮಹಿಳೆ), ಹಾರಗದ್ದೆ ಸಾಮಾನ್ಯ, ಯಮರೆ ಸಾಮಾನ್ಯ (ಮಹಿಳೆ), ಶಾಂತಿಪುರ ಸಾಮಾನ್ಯ (ಮಹಿಳೆ), ಬಿದರಗುಪ್ಪೆಹಿಂದುಳಿದ `ಅ' ವರ್ಗ (ಮಹಿಳೆ), ಸುರಗಜಕ್ಕನಹಳ್ಳಿ ಅನುಸೂಚಿತ ಜಾತಿ (ಮಹಿಳೆ), ಹೆನ್ನಾಗರ ಹಿಂದುಳಿದ `ಅ' ವರ್ಗ, ಕಲ್ಲುಬಾಳು ಅನುಸೂಚಿತ ಪಂಗಡ (ಮಹಿಳೆ), ಮಂಟಪಸಾಮಾನ್ಯ (ಮಹಿಳೆ).