ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ದೆಹಲಿಯಲ್ಲಿ ಇನ್ಮುಂದೆ ಡೀಸೆಲ್ ವಾಹನ ಖರೀದಿಸುವಂತಿಲ್ಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಇನ್ಮುಂದೆ ಯಾವುದೇ ಹೊಸ ಡೀಸೆಲ್ ವಾಹನಗಳನ್ನು ಖರೀದಿಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಇನ್ಮುಂದೆ ಯಾವುದೇ ಹೊಸ ಡೀಸೆಲ್ ವಾಹನಗಳನ್ನು ಖರೀದಿಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಪೀಠ ಶುಕ್ರವಾರ ಆದೇಶಿಸಿದೆ.

ಹೊಸ ಡೀಸೆಲ್ ಕಾರುಗಳ ನೋಂದಣಿ ನಿಷೇಧಿಸವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿರುವ ಎನ್ ಜಿಟಿ. 10 ವರ್ಷಗಳ ಹಳೆಯ ಡೀಸೆಲ್ ಕಾರುಗಳನ್ನು ನಿಷೇಧಿಸುವಂತೆಯೂ ಆದೇಶಿಸಿದೆ.

ಸರ್ಕಾರ ಕೂಡ ತಮ್ಮ ಇಲಾಖೆಗಳಿಗಾಗಿ ಡೀಸೆಲ್ ವಾಹನಗಳನ್ನು ಖರೀದಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನ ನೀಡಿದೆ. ಹೊಸ ಡೀಸೆಲ್ ವಾಹನಗಳನ್ನು ಖರೀದಿಸಬಾರದು. ಹೊಸ ಡೀಸೆಲ್ ಕಾರುಗಳ ನೋಂದಣಿಯೂ ಬೇಡ ಎಂದು ಸ್ಪಷ್ಟವಾಗಿ ಹೇಳಿದೆ.

ಮತ್ತೊಂದು ಕಡೆ ದೆಹಲಿಯಲ್ಲಿ ಡೀಸೆಲ್ ಕಾರುಗಳನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದ್ದು, ಡಿಸೆಂಬರ್ 15ರಂದು ವಿಚಾರಣೆ ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು- ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

ಉತ್ತರ ಪ್ರದೇಶ: CJP ಪ್ರತಿಭಟನಾಕಾರರ ತಂದೆಯ ಮೇಲೆ ಹಲ್ಲೆ; ಹಿಂದುತ್ವ influencer ಸ್ವತಂತ್ರ ಭಾರಧ್ವಾಜ್ ಬಂಧನ

ಸಚಿವರಿಗೆ ಸ್ವಾಗತ, ಹೂಮಳೆಯಲ್ಲಿ JDU ನಾಯಕ ತಲ್ಲೀನ; ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳ! Video

ನೇಪಾಳದಲ್ಲಿ 'ಕೃಷ್ಣಜನ್ಮಾಷ್ಟಮಿಯಂದು ದೊಡ್ಡ ಪವಾಡ! ಅನ್ನ, ನೀರು, ಇಲ್ಲದೆ 9 ದಿನಗಳಿಂದ 'ಹರೇ ಕೃಷ್ಣ' ಮಂತ್ರ ಪಠಿಸುತ್ತಲೇ ಬದುಕುಳಿದ ಕಾರ್ಮಿಕನ ರಕ್ಷಣೆ