ಪ್ರಧಾನ ಸುದ್ದಿ

ಯೋಗ ಗುರು ಬಿ ಕೆ ಎಸ್ ಅಯ್ಯಂಗಾರ್ ಜಯಂತಿಗೆ ಗೂಗಲ್ ಡೂಡಲ್

Guruprasad Narayana

ನವದೆಹಲಿ: ಭಾರತದ ಪ್ರಾಚಿನ ಅರೋಗ್ಯ-ಅಧ್ಯಾತ್ಮಿಕ ವ್ಯಾಯಾಮವಾದ ಯೋಗವನ್ನು ಪಶ್ಚಿಮ ದೇಶಗಳಿಗೆ ಪಸರಿಸಿದ ಖ್ಯಾತಿಯ ಯೋಗ ಗುರು ಬಿ ಕೆ ಎಸ್ ಅಯ್ಯಂಗಾರ್ ಅವರ ೯೭ನೆ ಜಯಂತಿಯ ನೆನಪಿನಲ್ಲಿ ಅವರ ವಿವಿಧ ಭಂಗಿಗಳ ಡೂಡಲ್ ಅನ್ನು ಮುಖಪುಟದಲ್ಲಿ ಬಿಡಿಸುವ ಮೂಲಕ ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಗೌರವ ಸೂಚಿಸಿದೆ.

ಅಯ್ಯಂಗಾರ್ ತಮ್ಮ ೮೦ ನೆ ವಯಸ್ಸಿನಲ್ಲಿಯೂ ಅರ್ಧ ಘಂಟೆ ಶಿರಾಸನವನ್ನು ಪ್ರದರ್ಶಿಸುತ್ತಿದ್ದರು ಎಂದು ಹೇಳಲಾಗುತ್ತದೆ - ಅಯ್ಯಂಗಾರ್ ಯೋಗ- ಎಂದೇ ಪ್ರಖ್ಯಾತವಾಗಿದ್ದ ವಿಶವಾದಾದ್ಯಂತ ಅತಿ ಪ್ರಸಿದ್ಧವಾಗಿತ್ತು.

"ಆಧ್ಯಾತ್ಮಿಕ ಗುರು-ಯೋಗಿ ಅವರ ೯೭ ವರ್ಷದ ಜಯಂತಿಯ ನೆನಪಿನಲ್ಲಿ ಕೆವಿನ್ ಲಾಫ್ಲಿನ್ ಅವರು ಗುರುವಿನ ಹಲವಾರು ಭಂಗಿಗಳನ್ನು ಚಿತ್ರಿಸಿ ಮುಖಪುಟದ ಮೇಲೆ ಡುಡಲ್ ಬಿಡಿಸಿದ್ದಾರೆ" ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ.

ಬಿಕೆಎಸ್ ಅಯ್ಯಂಗಾರ್ ಎಂದೇ ಪ್ರಖ್ಯಾತರಾದ ಬೇಲೂರು ಕೃಷ್ಣಮಚಾರ್ ಸುಂದರರಾಜ ಅಯ್ಯಂಗಾರ್ ಅವರು ಡಿಸೆಂಬರ್ ೧೪ ೧೯೧೮ರಲ್ಲಿ ಕರ್ನಾಟಕದ ಬೇಲೂರಿನಲ್ಲಿ ಜನಿಸಿದ್ದರು.

ಖ್ಯಾತ ಲೇಖಕ ಆಲ್ಡಸ್ ಹಕ್ಸ್ಲಿ, ಕ್ರಿಕೆಟ್ ಪಟು ಸಚಿನ್ ತೆಂಡುಲ್ಕರ್ ಮತ್ತು ಬೆಲ್ಜಿಯಮ್ ನ ರಾಣಿ ಎಲಿಜಬೆತ್ ಅಯ್ಯಂಗಾರ್ ಅಯ್ಯಂಗಾರ್ ಅವರ ತಾರೆ ಶಿಷ್ಯಂದಿರು.

'ಲೈಟ್ ಆನ್ ಯೋಗ', 'ಲೈಟ್ ಆನ್ ಪ್ರಾಣಾಯಾಮ', 'ಲೈಟ್ ಆನ್ ದ ಯೋಗ ಸೂತ್ರಾಸ್ ಆಫ್ ಪತಂಜಲಿ' ಮತ್ತು 'ಲೈಟ್ ಆನ್ ಲೈಫ್' ಅಯ್ಯಂಗಾರ್ ಅವರ ಪ್ರಮುಖ ಪುಸ್ತಕಗಳು.

SCROLL FOR NEXT