ವೋಲ್ವೊ ಇಂಡಿಯಾ ಆಡಳಿತ ನಿರ್ದೇಶಕ ಕಮಲ್ ಬಾಲಿ 
ಪ್ರಧಾನ ಸುದ್ದಿ

ಹೊಸದಿಕ್ಕಿನತ್ತ ದೇಶದ ಉತ್ಪಾದನೆ

ಮುಂದುವರಿದ ದೇಶಗಳೂ ಸಹ ಭಾರತದಲ್ಲಿ ತಯಾರಾಗುವ ಉತ್ಪನ್ನಗಳನ್ನು ಬಳಸುವ ಕಾಲ ದೂರವಿಲ್ಲ. ಇಷ್ಟು ದಿನ ಭಾರತ ಬೇರೆ ದೇಶಗಳತ್ತ ನೋಡುತ್ತಿತ್ತು, ಇನ್ನು ಕಾಲ ಬದಲಾಗಲಿದೆ ಎಂದು ವೋಲ್ವೊ ಇಂಡಿಯಾ ಆಡಳಿತ ನಿರ್ದೇಶಕ ಕಮಲ್ ಬಾಲಿ ಅಭಿಪ್ರಾಯಪಟ್ಟಿದ್ದಾರೆ...

ಬೆಂಗಳೂರು: ಮುಂದುವರಿದ ದೇಶಗಳೂ ಸಹ ಭಾರತದಲ್ಲಿ ತಯಾರಾಗುವ ಉತ್ಪನ್ನಗಳನ್ನು ಬಳಸುವ ಕಾಲ ದೂರವಿಲ್ಲ. ಇಷ್ಟು ದಿನ ಭಾರತ ಬೇರೆ ದೇಶಗಳತ್ತ ನೋಡುತ್ತಿತ್ತು, ಇನ್ನು ಕಾಲ  ಬದಲಾಗಲಿದೆ ಎಂದು ವೋಲ್ವೊ ಇಂಡಿಯಾ ಆಡಳಿತ ನಿರ್ದೇಶಕ ಕಮಲ್ ಬಾಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಹಮ್ಮಿಕೊಂಡ ಎರಡು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಯಾರಾಗುವ ವೋಲ್ವೊ ಬಸ್‍ಗಳು ಯೂರೋಪ್‍ನಲ್ಲಿ  ಸಂಚರಿಸುತ್ತಿವೆ. ಇದೇ ರೀತಿ ಭಾರತದಲ್ಲಿ ತಯಾರಾಗುವ ಉತ್ಪನ್ನಗಳು ವಿದೇಶಗಳಲ್ಲಿ ಬಳಕೆಯಾಗುವ ಸಂದರ್ಭಗಳು ಇನ್ನು ಹೆಚ್ಚುತ್ತವೆ ಎಂದು ತಮ್ಮದೇ ಸಂಸ್ಥೆಯ ಉದಾಹರಣೆ ನೀಡಿದರು.  ದೇಶದ ಉತ್ಪಾದನಾ ಕ್ಷೇತ್ರ ಹೊಸ ಮಗ್ಗುಲಿಗೆ ಹೊರಳುವ ಕಾಲ ಸನ್ನಿಹಿತವಾಗಿದೆ. ಈ ವಿಚಾರದಲ್ಲಿ ಧನಾತ್ಮಕ ಸೂಚನೆಗಳು ಕಂಡುಬರುತ್ತಿವೆ. ಉತ್ಪಾದನಾ ಕ್ಷೇತ್ರ ಬೆಳೆದರೆ ದೇಶದ ಕೃಷಿ,  ಸೇವಾ ಕ್ಷೇತ್ರಕ್ಕೂ ಸಾಕಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇನ್ನೊಂದೆಡೆ ಡಿಜಿಟಲೀಕರಣ ಕಾರ್ಯ ಭರದಿಂದ ಸಾಗಿರುವುದು ಉತ್ಪಾದನಾ ಕ್ಷೇತ್ರಕ್ಕೆ ಸಾಕಷ್ಟು ಬೆಂಬಲ ನೀಡಿದಂತಾಗುತ್ತಿದೆ ಎಂದರು. ಜಿಎಸ್‍ಟಿ ಅನುಷ್ಠಾನಗೊಂಡರೆ ಉತ್ಪಾದನೆ ಮತ್ತು ಸರಕು ಸಾಗಾಣೆ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಬಿಇಎಲ್ ಆಡಳಿತ ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ, ಮೇಕ್ ಇನ್ ಇಂಡಿಯ ಪರಿಕಲ್ಪನೆಯಡಿ ಭಾರತದ ರಕ್ಷಣಾ  ಕ್ಷೇತ್ರ ಹೊಸ ದಿಕ್ಕಿನತ್ತ ಸಾಗುತ್ತಿದೆ. ದೇಶೀ ರಕ್ಷಣಾ ಸಾಧನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಒಂದೂವರೆ ವರ್ಷದಲ್ಲಿ ನಿರೀಕ್ಷೆ ಮೀರಿದ ಸ್ಪಂದನೆ ಸಿಕ್ಕಿದೆ ಎಂದರು.  ನಿಯಮಗಳ ಸಡಿಲಿಕೆಯಿಂದ ರಕ್ಷಣಾ ಉತ್ಪನ್ನಗಳ ಸಂಶೋಧನೆಗೆ ಒತ್ತು ಸಿಕ್ಕಿದೆ. ಖಾಸಗಿ ಸಹಭಾಗಿತ್ವದಿಂದ ದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ನೆರವಾಗಿದೆ.

ಇದಲ್ಲದೆ ರಕ್ಷಣಾ ಕ್ಷೇತ್ರದಲ್ಲಿ ರಫ್ತು ಮಾಡುವಷ್ಟು ಬದಲಾವಣೆ ಕಾಣುತ್ತಿದೆ ಎಂದರು. ಜಿಇ ಇಂಡಿಯಾ ಆಡಳಿತ ನಿರ್ದೇಶಕ ಮನೀಶ್ ಮುಖರ್ಜಿ ಸೇರಿದಂತೆ ವಿವಿಧ ಕಂಪನಿಗಳ ಪ್ರಮುಖರು  ಮಾತನಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್