ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ 
ಪ್ರಧಾನ ಸುದ್ದಿ

ಉದ್ಯಮಿಗಾಗಿ ಪಾಕ್‍ಗೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹಠಾತ್ ಪ್ರವಾಸ ಕೈಗೊಂಡಿರುವುದು ಪೂರ್ವ ನಿರ್ಧರಿತವಾಗಿತ್ತು. ಜತೆಗೆ ಇದೊಂದು ಖಾಸಗಿ ಉದ್ಯಮಿಗೋಸ್ಕರ ಆಯೋಜಿಸಲಾಗಿರುವ ಭೇಟಿ ಎಂದು ಕಾಂಗ್ರೆಸ್ ಆರೋಪಿಸಿದೆ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹಠಾತ್ ಪ್ರವಾಸ ಕೈಗೊಂಡಿರುವುದು ಪೂರ್ವ ನಿರ್ಧರಿತವಾಗಿತ್ತು. ಜತೆಗೆ ಇದೊಂದು ಖಾಸಗಿ ಉದ್ಯಮಿಗೋಸ್ಕರ  ಆಯೋಜಿಸಲಾಗಿರುವ ಭೇಟಿ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರಧಾನಿ ಮೋದಿ ಲಾಹೋರ್‍ನಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಜತೆಗೆ ಭೇಟಿಯಾಗುತ್ತಿದ್ದಂತೆ ದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಈ ಪ್ರವಾಸ ದೇಶದ  ಹಿತಾಸಕ್ತಿಗೆ ಮಾರಕ, ಊಹಿಸಲಾಗದ್ದು, ನಿಷ್ಪ್ರಯೋಜಕ ಎಂದು ಬಣ್ಣಿಸಿದ್ದಾರೆ. ಮುಂಬೈ ದಾಳಿಯ ರೂವಾರಿ ಝಕಿವುರ್ ರೆಹಮಾನ್ ಲಖ್ವಿಯನ್ನು ಭಾರತಕ್ಕೆ ಗಡಿಪಾರುವ ಬಗ್ಗೆ ಆ ರಾಷ್ಟ್ರದಿಂದ  ಯಾವ ರೀತಿಯ ಭರವಸೆ ದೊರೆತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ``ಪ್ರಧಾನಿ ಭೇಟಿ ರಾಜತಾಂತ್ರಿಕ ವಾದದ್ದು'' ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಒಪ್ಪಲಿಲ್ಲ. ಇದು ನಿಜಕ್ಕೂ ಉದ್ಯಮಿಯೊಬ್ಬರಿಂದಲೇ  ಪೂರ್ವ ನಿಗದಿಯಾಗಿರುವ ಭೇಟಿ ಎಂದು ಶರ್ಮಾ ಬಲವಾಗಿ ಪ್ರತಿಪಾದಿಸಿದ್ದಾರೆ. ``ಪ್ರಧಾನಿ ಮೋದಿ ಕೇವಲ ಉದ್ಯಮಿಯೊಬ್ಬರ ಖಾಸಗಿ ಹಿತಾಸಕ್ತಿ ಉತ್ತೇಜಿಸಲು ಪಾಕಿಸ್ತಾನಕ್ಕೆ  ತೆರಳಿದ್ದಾರೆಯೇ ಹೊರತು ಭಾರತ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲ'' ಎಂದಿದ್ದಾರೆ. ಹೀಗಾಗಿ ಘೋಷಿತವಾಗದ ಪ್ರಧಾನಿ ಪ್ರವಾಸ ರಾಜತಾಂತ್ರಿಕ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಹೇಳಿಕೆ ದುರದೃಷ್ಟಕರ: ಕಾಂಗ್ರೆಸ್ ನಾಯಕ ಆನಂದ ಶರ್ಮಾ ಹೇಳಿಗೆ ಬಿಜೆಪಿ ವಕ್ತಾರ ಶ್ರೀಕಾಂತ ಶರ್ಮಾ ಆಕ್ಷೇಪಿಸಿದ್ದಾರೆ. ಪ್ರಧಾನಿ ಮೋದಿ ಪಾಕ್ ಭೇಟಿ ನಿಜಕ್ಕೂ ಆಶ್ಚರ್ಯಕರವಾಗಿದೆ.  ಎರಡೂ ರಾಷ್ಟ್ರಗಳ ನಡುವೆ ಈ ಭೇಟಿ ಧನಾತ್ಮಕ ಅಂಶಗಳನ್ನು ನೀಡಲಿದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಹ್ವಾನ ನೀಡಿದ ಬಳಿಕವೇ ಪಿಎಂ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿಯ ಲಾಹೋರ್ ಭೇಟಿಯ ಕಾರಣ ಏನೇ ಇರಬಹುದು. ಆದರೆ ಈ ಭೇಟಿಯ ಬಳಿಕವಾದರೂ ಪಾಕಿಸ್ತಾನವು ತನ್ನ ನೆಲದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಿ. ನಮ್ಮ ಡೈನಾಮಿಕ್  ಪ್ರಧಾನಿಯ ಮಧ್ಯಪ್ರವೇಶವು ಬದಲಾವಣೆ ತರಲಿ.
- ಪ್ರವೀಣ್ ತೊಗಾಡಿಯಾ
ವಿಎಚ್‍ಪಿ ನಾಯಕ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT