ವಿಧಾನ ಪರಿಷತ್ ಚುನಾವಣೆ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಮತಪತ್ರ ಹೊರ ತಂದ ಮಹಿಳಾ ಸದಸ್ಯರು, ಫೋಟೋ ಕ್ಲಿಕ್ಕಿಸಿದ ನಗರಸಭೆ ಸದಸ್ಯರು

ಭಾನುವಾರ ನಡೆದ ವಿಧಾನಪರಿಷತ್ ಚುನಾವಣೆ ವೇಳೆ ಗ್ರಾಮ ಪಂಚಾಯಿತಿ 8 ಮಹಿಳಾ ಸದಸ್ಯರು ಮತಪತ್ರಗಳನ್ನೇ ಹೊರ ತಂದ ಘಟನೆ ನಡೆಯಿತು...

ಬೆಂಗಳೂರು: ಭಾನುವಾರ ನಡೆದ ವಿಧಾನಪರಿಷತ್ ಚುನಾವಣೆ ವೇಳೆ ಗ್ರಾಮ ಪಂಚಾಯಿತಿ 8 ಮಹಿಳಾ ಸದಸ್ಯರು ಮತಪತ್ರಗಳನ್ನೇ ಹೊರ ತಂದ ಘಟನೆ ನಡೆಯಿತು.

ಆನೇಕಲ್ ತಾಲೂಕಿನ ಮುಗಳೂರು ಗ್ರಾಮ ಪಂಚಾಯತ್​ನ 8 ಮಂದಿ ಮಹಿಳಾ ಸದಸ್ಯರು ಮತದಾನ ಪ್ರಕ್ರಿಯೆ ವೇಳೆ ಮತಪತ್ರಗಳನ್ನು ಮತಗಟ್ಟೆಯಿಂದ ಹೊರತಂದರು. ಇದರಿಂದ ಅಲ್ಲಿ  ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಚುನಾವಣಾಧಿಕಾರಿಗಳು ತಕ್ಷಣ ಮತಪತ್ರಗಳನ್ನು ವಾಪಸ್​ ಪಡೆದುಕೊಂಡರು. ಈ ವಿಚಾರ  ತಿಳಿಯುತ್ತಿದ್ದಂತೆಯೇ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳ ಬೇಜವಾಬ್ದಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ  ಏಕ ಕಾಲಕ್ಕೆ 8 ಮಂದಿ ಸದಸ್ಯರು ಮತಪತ್ರಗಳನ್ನು ಹೊರ ತೆಗೆದುಕೊಂಡು ಹೋಗಿದ್ದು ಹೇಗೆ? ಅದರ ಹಿಂದಿನ ಉದ್ದೇಶವೇನು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ  ತೆಗೆದುಕೊಂಡರು.

ಮತಗಟ್ಟೆಯಲ್ಲಿ ಫೋಟೋ ಕ್ಲಿಕ್ಕಿಸಿ ಪರದಾಡಿದ ನಗರಸಭೆ ಸದಸ್ಯರು
ಮತ್ತೊಂದೆಡೆ ಮತದಾನ ಪ್ರಕ್ರಿಯೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ನಗರಸಭೆ ಸದಸ್ಯರು ಮತಗಟ್ಟೆಯೊಳಗೆ ಮೊಬೈಲ್​ ತಗೆದುಕೊಂಡು ಹೋಗಿ ಮತ ಚಲಾವಣೆ ಮಾಡುವುದನ್ನು ಫೋಟೋ  ಕ್ಲಿಕ್ಕಿಸಿಕೊಂಡು, ಅಧಿಕಾರಿಗಳ ಕೈಗೆ ಸಿಕ್ಕಿ ಪರದಾಡಿದ ಘಟನೆ ನಡೆಯಿತು. ನಗರಸಭೆ ಸದಸ್ಯರಾದ ಗಜೇಂದ್ರ ಮತ್ತು ಮಂಜುನಾಥ್ ಇಲ್ಲಿನ ನಗರಸಭೆ ಮತಗಟ್ಟೆಯ 101ರಲ್ಲಿ ಮತ ಚಲಾವಣೆ  ಮಾಡುವ ವೇಳೆ ಫೋಟೋ ಕ್ಲಿಕ್ಕಿಸಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಮೊಬೈಲ್​ ತಗೆದುಕೊಂಡು ಹೋಗಿರುವುದನ್ನು ಪ್ರಶ್ನೆಸಿದಾಗ ಪೋಟೋ ಡಿಲೀಟ್​ ಮಾಡಿ ಮತಗಟ್ಟೆಯಿಂದ ಇಬ್ಬರು  ಸದಸ್ಯರು ಹೊರ ನಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!