ಹೊಸ ವರ್ಷದ ಹಾರ್ದಿಕ ಶುಭಾಶಯಗಳು 
ಪ್ರಧಾನ ಸುದ್ದಿ

ಹೊಸತನದ ಉಡುಗೆ ತೊಟ್ಟು, ಭರಪೂರ ನಿರೀಕ್ಷೆಗಳೊಂದಿಗೆ 2016ಕ್ಕೆ ಸ್ವಾಗತ

ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ 2016 ರ ಆಗಮನವಾಗಿದೆ. ಹಳೆಯ ವರ್ಷದ ಘಟನಾವಳಿಗಳಿಂದ ಪಡೆದ ಅನುಭವ ಹಾಗೂ ಕಲಿತ ಪಾಠಗಳನ್ನು ಮುಂದಿಟ್ಟುಕೊಂಡು ಹೊಸ ವರ್ಷದ ಹೊಸ ಯೋಜನೆಗಳ..

ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ 2016 ರ ಆಗಮನವಾಗಿದೆ. ಹಳೆಯ ವರ್ಷದ ಘಟನಾವಳಿಗಳಿಂದ ಪಡೆದ ಅನುಭವ ಹಾಗೂ ಕಲಿತ ಪಾಠಗಳನ್ನು ಮುಂದಿಟ್ಟುಕೊಂಡು ಹೊಸ ವರ್ಷದ  ಹೊಸ ಯೋಜನೆಗಳ ಕನಸನ್ನು ನನಸು ಮಾಡಲು ಇರುವ ಅವಕಾಶ ಈ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುವುದಕ್ಕೆ ಇರುವ ಕಾರಣಗಳಲ್ಲಿ ಒಂದು.

ಹೊಸ ವರ್ಷದಲ್ಲಿ ಹೊಸ ಹೊಸ ಸಂಕಲ್ಪಗಳಿಗೇನು ಕೊರತೆ ಇರುವುದಿಲ್ಲ. ವರ್ಷದ ಮೊದಲ ದಿನದಿಂದಲೇ ಸಂಕಲ್ಪಗಳನ್ನು ಜಾರಿಗೆ ತರುವ ತವಕವೂ ಇರುತ್ತದೆ. ಆದರೆ ಇದು ಮೊದಲ ದಿನಕ್ಕೆ  ಮಾತ್ರ ಸೀಮಿತವಾಗದೇ ಹೊಸ ವರ್ಷದ ಪ್ರಾರಂಭದಲ್ಲಿ ಯೋಚಿಸಿದ್ದ ಯೋಜನೆಗಳನ್ನು ನನಸಾಗಿಸುವುದಕ್ಕೆ ಅನವರತ ಪ್ರಯತ್ನವೂ ಮುಖ್ಯ.

ಹೊಸ ವರ್ಷಕ್ಕೆ ಮಾಧ್ಯಮಗಳ ಯೋಜನೆಗಳಂತೂ ಆಂಕರ್ಸ್ ನ ಮೇಕಪ್ ನಂತೆಯೇ ಸುಂದರವಾಗಿರುತ್ತದೆ. ದಿನಗಳು ಕಳೆದಂತೆ ಮೇಕಪ್ ಬಣ್ಣದಂತೆಯೇ ಸಂಕಲ್ಪಗಳೂ ಸಹ  ಕಳೆಗುಂದುತ್ತವೆ. ಹಾಗಂತ ವರ್ಷದ ಪ್ರಾರಂಭದಲ್ಲಿ ರೂಪಿಸಿದ್ದ ಯೋಜನೆಗಳನ್ನು ದಿಢೀರ್ ಎಂದು ಜಾರಿಗೆ ತರುವುದೂ ಮಾಧ್ಯಮಗಳಿಗೆ ಸವಾಲಿನ ಸಂಗತಿ. ಇತ್ತೀಚಿನ ದಿನಗಳಲ್ಲಿ  ಮಾಧ್ಯಮಗಳ ಕಾರ್ಯ ವೈಖರಿ ಬಗ್ಗೆ ಚರ್ಚೆ ನಡೆದಿದೆ.

ಆ ಕುರಿತು ಕೆಲವೊಂದು ಮಾಧ್ಯಮಗಳ ಅವಲೋಕನ ನಡೆಸಿದ್ದು ಹಾಗೂ ಬದಲಾವಣೆಗೆ ತೆರೆದುಕೊಳ್ಳುವ ದಿಟ್ಟತನ ಪ್ರದರ್ಶಿಸಿದ್ದು ಹಳೆಯ ವರ್ಷದಿಂದ ಕಲಿತ ಪಾಠ, ಅನುಭವ. ಆ ಅನುಭವ  ಹಾಗೂ ಪಾಠಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷದಲ್ಲಿ ಕೈಗೊಂಡ ಕೆಲವೊಂದು ನಿರ್ಣಯಗಳು ಹೊಸ ವರ್ಷದಲ್ಲಿ ಈಡೇರಲಿ ಎಂದು ನಿರೀಕ್ಷಿಸಿ, ಹೊಸ ವರ್ಷದ ಸಂಭ್ರಮದಲ್ಲಿ ಜೊತೆಯಲ್ಲಿ  ಹೆಜ್ಜೆ ಇಡೋಣ. ಹ್ಯಾಪಿ ನ್ಯೂ ಇಯರ್!.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ