ಪ್ರಧಾನ ಸುದ್ದಿ

ದಯನೀಯ ಸೋಲು: ವಿಮರ್ಶಾ ಸಭೆಯಿಂದ ಕಿರಣ್ ಬೇಡಿ ಹೊರಗಿಟ್ಟ ಬಿಜೆಪಿ

Guruprasad Narayana

ನವದೆಹಲಿ: ದೆಹಲಿ ಚುನಾವಣೆಗಳಲ್ಲಿ ಎಎಪಿ ಪಕ್ಷದ ಎದುರು ಅವಮಾನಕಾರಿ ಸೋಲು ಕಂಡ ಬಿಜೆಪಿ, ಸೋಲಿಗೆ ಕಾರಣಗಳನ್ನು ಹುಡುಕುವ ವಿಮರ್ಶಾ ಸಭೆಗೆ ಕಿರಣ್ ಬೇಡಿ ಅವರನ್ನು ಆಹ್ವಾನಿಸಿರಲಿಲ್ಲ.

ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ೪ ಘಂಟೆಗಳ ಈ ಸಭೆಯಲ್ಲಿ ಬಹುತೇಕ ನಾಯಕರು ಹೊರಗಿನವರಾದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಕೊನೆಯ ಕ್ಷಣದಲ್ಲಿ ಪಕ್ಷಕ್ಕೆ ಕರೆತಂದದ್ದು 'ತಪ್ಪು ನಡೆ' ಎಂದು ಅಭಿಪ್ರಾಯ ಪಟ್ಟರು ಎಂದು ತಿಳಿದುಬಂದಿದೆ.

ಕಿರಣ್ ಬೇಡಿ ಅವರನ್ನು ಈ ಸಭೆಗೆ ಏಕೆ ಕರೆದಿರಲಿಲ್ಲ ಎಂದು ವಿವರಿಸಿದ ಪಕ್ಷದ ಹಿರಿಯ ನಾಯಕರೊಬ್ಬರು, ದೆಹಲಿ ಬಿಜೆಪಿ ಕಚೇರಿಯ ಪದಾಧಿಕಾರಿಗಳನ್ನಷ್ಟೆ ಸಭೆಗೆ ಕರೆಯಲಾಗಿತ್ತು. ಆದುದರಿಂದ ಕಿರಣ್ ಬೇಡಿ ಅವರಿಗೆ ಆಹ್ವಾನ ಮಾಡಲಿಲ್ಲ ಎಂದಿದ್ದಾರೆ.

ಸಭೆಯಲ್ಲಿ ೨೨ ಕಚೇರಿ ಪದಾಧಿಕಾರಿಗಳು ಮತ್ತು ೧೪ ಜನ ಜಿಲ್ಲ ಅಧ್ಯಕ್ಷರನ್ನು ಸೋಲಿನ  ಕಾರಣಗಳನ್ನು ಚರ್ಚಿಸಲು ಆಹ್ವಾನಿಸಲಾಗಿತ್ತು.

ಅಭ್ಯರ್ಥಿಗಳನ್ನು ಹೆಸರುಗಳನ್ನು ಘೋಷಿಸುವುದಕ್ಕೆ ಮಾಡಿದ ವಿಳಂಬ ಮತ್ತು ತಳಮಟ್ಟದ ಕಾರ್ಯಕರ್ತರಿಗೆ ಉತ್ಸಾಹ ತುಂಬದಿರುವುದೆ ಸೋಲಿಗೆ ಮುಖ್ಯ ಕಾರಣ ಎಂದು ಚರ್ಚಿಸಲಾಯಿತು ಎನ್ನಲಾಗಿದೆ.

SCROLL FOR NEXT