ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ 
ಪ್ರಧಾನ ಸುದ್ದಿ

ಮುಂದೆ ಚುನಾವಣೆ ಸ್ಪರ್ಧಿಸುವುದಿಲ್ಲ, ಮತ್ತದನ್ನೇ ನುಡಿದ ಮಾಜಿ ಪ್ರಧಾನಿ ಗೌಡ

ಮುಂದೆಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬುಧವಾರ ಮತ್ತೆ ಹೇಳಿದ್ದಾರೆ.

ನವದೆಹಲಿ: ಮುಂದೆಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬುಧವಾರ ಮತ್ತೆ ಹೇಳಿದ್ದಾರೆ.

ರಾಷ್ಟ್ರಪತಿ ಅವರ ಭಾಷಣಕ್ಕೆ ಅಭಿನಂದನೆ ಸಲ್ಲಿಸುವ ಸಮಾರಂಭದಲ್ಲಿ ಭಾಗವಹಿಸಿದ್ದ ೮೨ ವರ್ಷದ ಮಾಜಿ ಪ್ರಧಾನಿ, ತಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ನೆನಪಿಸಿಕೊಂಡದ್ದಲ್ಲದೆ, ತಾವು ಪ್ರಾರಂಭಿಸಿದ ಕೆಲವು ಯೋಜನೆಗಳನ್ನು ಮುಕ್ತಾಯಗೊಳಿಸುವಂತೆ ಪ್ರಧಾನಿ ನರೆಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

"ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಧಾನಿಯವರಿಗೆ ತಿಳಿಸಿದ್ದೇನೆ. ಆದರೆ ಇದೇ ಸಮಯದಲ್ಲಿ ಕೆಲವು ಯೋಜನೆಗಳನ್ನು ಮುಕ್ತಾಯಗೊಳಿಸುವಂತೆ ವೈಯಕ್ತಿಕವಾಗಿ ಮನವಿ ಮಾಡಿದ್ದೇನೆ" ಎಂದು ಗೌಡ ತಿಳಿಸಿದ್ದಾರೆ.

"ಸಾರ್ವಜನಿಕ ಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದೇನೆ. ೧೫ ಚುನಾವಣೆಗಳನ್ನು ಹೆದರಿಸಿದ್ದೇನೆ. ಅವುಗಳಲ್ಲಿ ಎರಡನ್ನು ಸೋತಿದ್ದೇನೆ. ನಮ್ಮ ಕುಟುಂಬದವರಿಂದ ಇಬ್ಬರು ಸದಸ್ಯರು ನಮ್ಮ ಪಕ್ಷದಲ್ಲಿರಬಹುದು, ಆದರೆ ನಾನು ಮುಖ್ಯಮಂತ್ರಿಯಾಗಿದ್ದಾಗ ಸಂಸತ್ ಗೆ ೧೬ ಜನ ಸದಸ್ಯರನ್ನು ಕಳುಹಿಸಿದ್ದೆ" ಎಂದು ಗೌಡ ತಿಳಿಸಿದ್ದಾರೆ.

ಭಾಷಣ ಮುಗಿಸುವಂತೆ ಸಭಾಧ್ಯಕ್ಷರು ಸೂಚಿಸಿದಾಗ "ನಮ್ಮ ಪಕ್ಷದಿಂದ ಬರೀ ಇಬ್ಬರು ಸದಸ್ಯರಿದ್ದಾರೆ. ಅದಕ್ಕೆ ಏನು ಮಾಡಲು ಸಾಧ್ಯ? ನನ್ನನ್ನು ಇಲ್ಲಿಗೆ ಕಳುಹಿಸಿರುವುದು ಜನ. ನನಗೆ ಮಾತನಾಡಲು ಅವಕಾಶ ಕೊಡದೆ ಹೋದರೆ, ನಾನು ರಾಜೀನಾಮೆ ನೀಡುವುದೇ ಸೂಕ್ತ. ೨೦೦೦ ರೂ ಪ್ರಯಾಣ ಭತ್ಯೆ ಪಡೆಯಲು ನಾನಿಲ್ಲಿಗೆ ಬಂದಿಲ್ಲ. ನಿಮ್ಮ ಜೊತೆ ನಾನು ನಿಷ್ಟುರನಾಗಿರಬೇಕು" ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ದೆಹಲಿ ಮೆಟ್ರೋ ಸೇರಿದಂತೆ ತಮ್ಮ ಆಡಳಿತ ಸಮಯದಲ್ಲಿ ಅವರು ಪ್ರಾರಂಭಿಸಿದ ಯೋಜನೆಗಳ ಪಟ್ಟಿ ಮಾಡಿದ್ದಾರೆ ದೇವೇಗೌಡ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NCERT Row: 'ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ': ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

SCROLL FOR NEXT