ಗೋಧ್ರಾ ಗಲಭೆಯ ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಗುಜರಾತ್ ಗಲಭೆ ವರದಿ ಕೂಡಲೆ ಮಂಡಿಸಲು ಕಾಂಗ್ರೆಸ್ ಆಗ್ರಹ

೨೦೦೨ರ ಗುಜರಾತ್ ಗಲಭೆಯ ಬಗ್ಗೆ ತನಿಖೆ ನಡೆಸಿ ವರದಿ ಸಿದ್ಧಪಡಿಸಿರುವ ನ್ಯಾಯಾಧೀಶ ನಾನಾವತಿ ಆಯೋಗದ ಅಂತಿಮ ವರದಿಯನ್ನು ಈಗ

ಅಹಮದಾಬಾದ್: ೨೦೦೨ರ ಗುಜರಾತ್ ಗಲಭೆಯ ಬಗ್ಗೆ ತನಿಖೆ ನಡೆಸಿ ವರದಿ ಸಿದ್ಧಪಡಿಸಿರುವ ನ್ಯಾಯಾಧೀಶ ನಾನಾವತಿ ಆಯೋಗದ ಅಂತಿಮ ವರದಿಯನ್ನು ಈಗ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಗುಜರಾತಿನ ಬಿಜೆಪಿ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಕೂಡಲೆ ವರದಿ ಮಂಡಿಸುವಂತೆ ಆಗ್ರಹಿಸಿ ಸ್ಪೀಕರ್ ಅವರಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಅಧಿವೇಶನದ ಕೊನೆಯ ದಿನ ವರದಿಯನ್ನು ಮಂಡಿಸಿ, ಅದರ ಬಗ್ಗೆ ಚರ್ಚೆಯನ್ನು ತಳ್ಳಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಶಕ ಶೈಲೇಶ್ ಪರ್ಮಾರ್ ಆರೋಪಿಸಿದ್ದಾರೆ.

"ಬಿಜೆಪಿ ಸರ್ಕಾರ ಈ ವರದಿಯನ್ನು ಕೊನೆಯ ದಿನವೇ ಮಂಡಿಸುವುದು ಎಂಬುದ ನಮಗೆ ೧೦೦% ಖಾತ್ರಿಯಾಗಿದೆ. ಆದುದರಿಂದ ಇದರ ಬಗೆಗಿನ ಚರ್ಚೆಯನ್ನು ತಪ್ಪಿಸುವ ಹುನ್ನಾರ. ಸಿಎಜಿ ವರದಿಯ ಜೊತೆಯೂ ಇದೆ ತಂತ್ರ ಬಳಸಿದ್ದರು" ಎಂದಿದ್ದಾರೆ.

ಬಹುತೇಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ೧೦೦೦ ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ ಗೋಧ್ರಾ ನಂತರದ ೨೦೦೨ರ ಗಲಭೆಯನ್ನು ನಾನಾವತಿ ಆಯೋಗ ತನಿಖೆ ಮಾಡಿತ್ತು. ಈ ಸಮಿತಿ ಕಳೆದ ವರ್ಷ ನವೆಂಬರ್ ೧೮ ರಂದು ಎರಡನೆ ಮತ್ತು ಅಂತಿಮ ವರದಿಯನ್ನು ಗುಜರಾತ್ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಆವರಿಗೆ ಸಲ್ಲಿಸಿತ್ತು. ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಅಧಿವೇಶನ ಇದು.

೨೦೦೮ ರಲ್ಲಿ ಸಲಿಸಿದ್ದ ಸಮಿತಿಯ ಮೊದಲ ವರದಿಯಲ್ಲಿ ಗೋಧ್ರಾದಲ್ಲಿ ರೈಲನ್ನು ಸುಟ್ಟಿದ್ದು ಪೂರ್ವ ನಿಯೋಜಿತ ಕೃತ್ಯ ಅಪಘಾತವಲ್ಲ ಎಂದಿದ್ದಲ್ಲದೆ ನರೇಂದ್ರ ಮೋದಿ ಮತ್ತು ಅವರ ಮಂತ್ರಿಗಳನ್ನು ಆರೋಪಮುಕ್ತಗೊಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT