ಪ್ರಧಾನ ಸುದ್ದಿ

ಬ್ಲಾಕ್ ಮಾಡಲ್ಪಟ್ಟ 32 ವೆಬ್‌ಸೈಟ್ ಈಗ ಅನ್‌ಬ್ಲಾಕ್

Rashmi Kasaragodu

ನವದೆಹಲಿ: ಕೆಲವೊಂದು ವೆಬ್‌ಸೈಟ್‌ಗಳು ಜಿಹಾದಿ ವಿಷಯಗಳನ್ನು ಹೊಂದಿದೆ ಮತ್ತು ಅವುಗಳನ್ನು ಉಗ್ರರು ಬಳಸುತ್ತಿದ್ದಾರೆ ಎಂದು ಸರ್ಕಾರ 32 ವೆಬ್ ಸೈಟ್‌ಗಳನ್ನು ಬ್ಲಾಕ್ ಮಾಡಿತ್ತು. ಆದರೆ ಈಗ ಆ ವೆಬ್‌ಸೈಟ್‌ಗಳು ಜಿಹಾದಿ ವಿಷಯಗಳನ್ನು ತೆಗೆದು ಹಾಕಿ ಸರ್ಕಾರಕ್ಕೆ ಸಹಕರಿಸುತ್ತೇವೆ ಎಂಬ ವಾಗ್ದಾನ ನೀಡಿರುವುದರಿಂದ ಅವುಗಳನ್ನು ಅನ್‌ಬ್ಲಾಕ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈ ವೆಬ್‌ಸೈಟ್ ಮೂಲಕ ಇಸಿಸ್ ಜಿಹಾದಿ ವಿಷಯಗಳನ್ನು ಪಸರಿಸುತ್ತದೆ ಎಂದು ಮಹಾರಾಷ್ಟ್ರ ಉಗ್ರ ನಿಗ್ರಹದಳ ದೂರು ನೀಡಿರುವ ಹಿನ್ನೆಲೆಯಲ್ಲಿ  32 ವೆಬ್‌ಸೈಟ್ ಗಳನ್ನು ಬ್ಲಾಕ್ ಮಾಡಲು ಸರ್ಕಾರ ಆದೇಶಿಸಿತ್ತು. ಈಗ ಆ ವೆಬ್‌ಸೈಟ್‌ಗಳು ಅಂಥಾ ವಿಷಯಗಳನ್ನು ತಮ್ಮ ವೆಬ್ ಸೈಟ್‌ನಿಂದ ತೆಗೆದು ಹಾಕಿದ್ದು, ಸರ್ಕಾರದ ಜತೆಗೆ ಸಹಕರಿಸುವುದಾಗಿ ಹೇಳಿವೆ. ಆದ್ದರಿಂದ ಬ್ಲಾಕ್ ಮಾಡಲ್ಪಟ್ಟ ಎಲ್ಲ ವೆಬ್‌ಸೈಟ್‌ಗಳನ್ನು ಅನ್‌ಬ್ಲಾಕ್ ಮಾಡಲಾಗುವುದು ಎಂದು ಸರ್ಕಾರ ಗುರುವಾರ ಪ್ರಕಟಣೆ ಹೊರಡಿಸಿದೆ.

dailymotion.com, weebly.com, github.com, pastebin.com, archive.org, heypasteit.com, ipaste.eu, thesnippetapp.com, vimeo.com ಮೊದಲಾದ ವೆಬ್‌ಸೈಟ್‌ಗಳಲ್ಲಿ ದೇಶವಿರೋಧಿ ವಿಷಯಗಳಿವೆ ಎಂಬ ದೂರು ಬಂದ ಹಿನ್ನೆಲೆಯಯಲ್ಲಿ ಕೆಲ ದಿನಗಳ ಹಿಂದೆ ಇವುಗಳನ್ನು ಬ್ಲಾಕ್ ಮಾಡಲಾಗಿತ್ತು.

SCROLL FOR NEXT