ಪ್ರಧಾನ ಸುದ್ದಿ

ಏರ್‌ಏಷ್ಯಾ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆ

Rashmi Kasaragodu

ಜಕಾರ್ತ: ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ ಪತನವಾಗಿರುವ ಏರ್ ಏಷ್ಯಾ ವಿಮಾನದ ಬ್ಲಾಕ್ ಬಾಕ್ಸ್ ಭಾನುವಾರ ಪತ್ತೆಯಾಗಿದೆ. ವಿಮಾನದ ಅವಶೇಷಗಳಡಿಯಲ್ಲಿ ಬ್ಲಾಕ್‌ಬಾಕ್ಸ್ ಸಿಕ್ಕಿಹಾಕಿಕೊಂಡಿರುವುದರಿಂದ ಅದನ್ನು ಸೋಮವಾರವೇ ಹೊರತೆಗೆಯಲು ಸಾಧ್ಯವಾಗುವುದು.

ಇದೀಗ ಪತ್ತೆಯಾಗಿರುವ ಬ್ಲಾಕ್ ಬಾಕ್ಸ್ ಏರ್ ಏಷ್ಯಾ ವಿಮಾನ QZ8501 ದ್ದೇ ಎಂದು ಇಂಡೋನೇಷ್ಯಾ ಸಮುದ್ರಯಾನದ ಡೈರೆಕ್ಟರೇಟ್ ಜನರಲ್ ಹೇಳಿದ್ದಾರೆ.

162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ ಸುರಬಯಾದಿಂದ ಸಿಂಗಾಪೂರ್‌ಗೆ ಹೋಗುತ್ತಿದ್ದ ವೇಳೆ ಪತನಗೊಂಡು 162 ಜನರನ್ನು ಬಲಿತೆಗೆದುಕೊಂಡಿತ್ತು. ವಿಮಾನ ಅವಘಡ ಸಂಭವಿಸಿ 2 ವಾರಗಳ ನಂತರ ಬ್ಲಾಕ್‌ಬಾಕ್ಸ್ ಪತ್ತೆಯಾಗಿದೆ. ವಿಮಾನ ಅವಘಡ ಹೇಗೆ ಸಂಭವಿಸಿತು ಎಂಬ ನಿಖರ ಮಾಹಿತಿ ಈ ಬ್ಲಾಕ್ ಬಾಕ್ಸ್ ನಿಂದ ಸಿಗಲಿದೆ.


ವಿಮಾನದ ಬ್ಲಾಕ್‌ಬಾಕ್ಸ್ ಅವಶೇಷಗಳೆಡೆಯಲ್ಲಿ ಸಿಲುಕಿಕೊಂಡಿರುವುದರಿಂದ ಈಗಲೇ ಅದನ್ನು ತೆಗೆಯುವುದು ಕಷ್ಟ. ಆದ್ದರಿಂದ ಅದನ್ನು ಸೋಮೆವಾರ ಬೆಳಗ್ಗೆ ತೆಗೆಯಲಾಗುವುದು ಎಂದು ಸಮುದ್ರಯಾನದ ಡೈರೆಕ್ಟರ್ ಜನರಲ್ ಕಾರ್ಯನಿರ್ವಾಹಕ ಟಾನಿ ಬಿದಿಯಾನೋ ಹೇಳಿದ್ದಾರೆ.

SCROLL FOR NEXT