ಪ್ರಧಾನ ಸುದ್ದಿ

ಪರವಾನಗಿ ಇಲ್ಲದೆ ಉಬರ್ ಟ್ಯಾಕ್ಸಿ ಸೇವೆ ಪುನಾರಂಭಿಸುವಂತಿಲ್ಲ

Rashmi Kasaragodu

ನವದೆಹಲಿ: ಅಮೆರಿಕ ಮೂಲದ ಉಬರ್ ಟ್ಯಾಕ್ಸಿ ಸೇವೆ ಪುನಾರಂಭ ಮಾಡುವುದಾಗಿ ಪ್ರಕಟಣೆ ಹೊರಡಿಸಿ ಬೆನ್ನಲ್ಲೇ, ಪರವಾನಗಿ ಇಲ್ಲದೆ ಸೇವೆ ಪುನಾರಂಭಿಸುವಂತಿಲ್ಲ ಎಂದು ದೆಹಲಿ ಸರ್ಕಾರ ಹೇಳಿದೆ.

ಡಿಸೆಂಬರ್ ನಲ್ಲಿ ಉಬರ್ ಟ್ಯಾಕ್ಸಿ ಚಾಲಕ ತನ್ನ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದನು. ಈ ಹಿನ್ನೆಲೆಯಲ್ಲಿ 2014 ಡಿಸೆಂಬರ್8 ರಂದು ಉಬರ್ ಟ್ಯಾಕ್ಸಿ ಸೇವೆಗೆ ದೆಹಲಿ ಸರ್ಕಾರ ನಿಷೇಧ ಹೇರಿತ್ತು.

ಇದಾದ ನಂತರ ನಿನ್ನೆ ತಾವು ಸೇವೆ ಪುನಾರಂಭಿಸುವುದಾಗಿ ಉಬರ್ ಟ್ಯಾಕ್ಸಿ ಪ್ರಕಟಣೆ ಹೊರಡಿಸಿತ್ತು.

ಆದಾಗ್ಯೂ, ರಸ್ತೆ ಸಾರಿಗೆ ಸಂಚಾರ ಇಲಾಖೆಯಿಂದ ಪರವಾನಗಿ ಪಡೆಯದೆಯೇ ಉಬರ್ ಟ್ಯಾಕ್ಸಿ ಸೇವೆ ಆರಂಭಿಸಿದರೆ ಅದು ಅಕ್ರಮ ಸೇವೆ ನಡೆಸಿದಂತಾಗುತ್ತದೆ ಎಂದು ದೆಹಲಿ ಸರ್ಕಾರ ಹೇಳಿದೆ.

ಉಬರ್ ಟ್ಯಾಕ್ಸಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಸೇವೆ ಪುನಾರಂಭಿಸುವಂತಿಲ್ಲ. ದೆಹಲಿ ಸರ್ಕಾರದ ಪರವಾನಗಿ ಪಡೆಯದೆ ಸೇವೆ ಆರಂಭಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವಿಶೇಷ ಆಯುಕ್ತ (ಟ್ರಾಫಿಕ್) ಮಕ್ತೇಶ್ ಚಂದರ್ ಹೇಳಿದ್ದಾರೆ.

ಆದರೆ, ಪೊಲೀಸರು ಚಾಲಕರ ವಿವರಗಳನ್ನು ಮರು ಪರಿಶೀಲನೆ ನಡೆಸಿದ್ದು, ನಂತರವೇ ತಾವು ಟ್ಯಾಕ್ಸಿ ಸೇವೆ ಪುನಾರಂಭಿಸಿದ್ದೇವೆ ಎಂದು ಉಬರ್ ಸಂಸ್ಥೆ ಹೇಳಿದೆ.

SCROLL FOR NEXT