ನವದೆಹಲಿ: ಕಂದಾಹಾರ್ ವಿಮಾನ ಅಪಹರಣ ಪ್ರಕರಣ ನಿಭಾಯಿಸುವಲ್ಲಿ ಅಂದಿನ ಎನ್ಡಿಎ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿತ್ತು ಎಂದು ಭಾರತೀಯ ಗುಪ್ತಚರ ಸಂಸ್ಥೆ "ರಾ"ದ ಮುಖ್ಯಸ್ಥ ಎ.ಎಸ್.ದುಲಾತ್ ಬಹಿರಂಗ ಪಡಿಸಿದ್ದಾರೆ.
15 ವರ್ಷಗಳ ಹಿಂದೆ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಇಂಡಿಯವ್ ಏರ್ ಲೈನ್ಸ್ ಐಸಿ 814 ವಿಮಾನ ಅಪರಹಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. 1999ರಲ್ಲಿ 1999ರಲ್ಲಿ ವಿಮಾನ ಅಪಹರಣ ಬಿಕಟ್ಟು ನಿವಾರಣ ತಂಡದ ಸದಸ್ಯರೂ ಆಗಿದ್ದ ದುಲಾತ್ ತಮ್ಮ ಕೃತಿ ``ಕಾಶ್ಮೀರ್- ದಿ ವಾಜಪೇಯಿ ಇಯರ್ಸ್'' ಕೃತಿಯಲ್ಲಿ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ. ದುಲಾತ್ ಅವರ ಈ ಕೃತಿ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸ ತಿಕ್ಕಾಟ ತಂದಿಟ್ಟಿದೆ. ಅಪಹರಣಕ್ಕೊಳಗಾದ ವಿಮಾನ ಅಮೃತಸರ ವಿಮಾನ ನಿಲ್ದಾಣದಿಂದ ಹೊರ ಹೋಗದಂತೆ ತಡೆಯುವ ನಿರ್ಧಾರ ಆಗಿನ ಸರ್ಕಾರಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಎಲ್ಲರಿಗೂ ವಿಮಾನದೊಳಗಿದ್ದ ಜನರ ಭದ್ರತೆಯೇ ಮುಖ್ಯವಾಗಿತ್ತು ಎಂದು ದುಲಾತ್ ಹೇಳಿದ್ದಾರೆ.
ಇದೇ ವೇಳೆ, ಆರಂಭದಲ್ಲಿ ಅಪರಹರಣ ಕಾರರು 105 ಉಗ್ರರನ್ನು ಬಿಡುಗಡೆ ಮಾಡುವ ಬೇಡಿಕೆ ಇಟ್ಟಿದ್ದರು. ನಂತರ ಆ ಸಂಖ್ಯೆ 35, 15 ಹೀಗೆ ಇಳಿಯುತ್ತಾ ಹೋಯಿತು. ಆದರೆ, ಉಗ್ರರ ಜತೆಗೆ ಮಾತುಕತೆಗೆ ಹೋಗಿದ್ದ ತಂಡ ಕೊನೆಗೆ ಈ ಸಂಖ್ಯೆಯನ್ನು ಮೂರಕ್ಕಿಳಿಸಿತು. ಜೈಶ್ ಇ ಮೊಹಮ್ಮದ್ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನನ್ನು ಬಿಡುಗಡೆಗೊಳಿಸ ಬೇಕೆಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಕಾಶ್ಮೀರದಲ್ಲಿ ಹಲವು ವಿಧ್ವಂಸಕ ಕೃತ್ಯ ಎಸಗಿದ್ದ, ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಉಗ್ರರ ಬಿಡುಗಡೆ ಮಾತ್ರ ಆಗ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಫರೂಕ್ ಅಬ್ದುಲ್ಲಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ನೀವು ಮತ್ತೆ ಅದೇ ತಪ್ಪು ಮಾಡುತ್ತಿದ್ದೀರಿ. ರುಬಿಯಾ ಅಪಹರಣದ ವೇಳೆಯೂ ನೀವು ಇದೇ ರೀತಿ ನನ್ನ ಬಳಿ ಬಂದಿದ್ರಿ. ಈಗ ಮತ್ತೆ ಹೇಗೆ ಬಂದ್ರಿ. ಆಗಲೂ ನೀವು ಮಾಡುತ್ತಿರುವುದು ತಪ್ಪು ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈ ಬಾರಿ ನಿಮ್ಮ ಮಾತು ಕೇಳುವುದಿಲ್ಲ ಎಂದು ಗುಟುರು ಹಾಕಿದ್ದರು. ದೆಹಲಿ ಎಷ್ಟು ದುರ್ಬಲ ಆಗಿದೆ. ಎಂತಾ ದೊಡ್ಡ ತಪ್ಪು ಮಾಡುತ್ತಿದೆ. ಅಲ್ಲಿರುವವರೆಲ್ಲಾ ಎಂಥಾ ಮೂರ್ಖರು, ಅವಿವೇಕಿಗಳು...ಹೀಗೆ ಬಯ್ಯುತ್ತಲೇ ಇದ್ದರು. ನಂತರ ಜಸ್ವಂತ್ ಸಿಂಗ್ ಗೇ ಕರೆ ಮಾಡಿದರು. ನೀವು ತಪ್ಪು ಮಾಡುತ್ತಿದ್ದೀರಿ ಎಂದು ಎಚ್ಚರಿಸಿದರು. ದೆಹಲಿಯಸಲ್ಲಿದ್ದ ಇತರರಿಗೂ ಕರೆ ಮಾಡಿ ಮಾತನಾಡಿದರು.
ಜೈಶ್ ಇ ಮೊಹದಮದ್ ಮುಖ್ಯಸ್ಥನನ್ನು ಬಿಡುಗಡೆ ಮಾಡಲ್ಲ. ಅವನೊಬ್ಬ ಕೊಲೆಗಡುಕ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅಬ್ದುಲ್ಲಾ ಇದೇ ಸ್ಥಿತಿಯಲ್ಲಿ ಸುಮಾರು 3 ಗಂಟೆ ಇದ್ದರು. ನಂತರ ರಾಜಿನಾಮೆ ನೀಡಲು ರಾಜ್ಯಪಾಲರು ಹಾಗೂ ಮತ್ತೊಬ್ಬ ಮಾಜಿ ರಾ ಮುಖ್ಯಸ್ಥ ಗ್ಯಾರಿ ಸಕ್ಸೇನಾರನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ಘೋಷಿಸಿದರು. ಆಗ ರಾತ್ರಿ 10 ಗಂಟೆಯಾ ಗಿತ್ತು. ಈ ಪರಿಸ್ಥಿತಿಯಲ್ಲಿ ನಮ್ಮ ಮುಂದೆ ಬೇರೇನೂ ಮಾರ್ಗ ಇಲ್ಲ. ಈ ವಿಚಾರವನ್ನು ದೆಹಲಿಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಗ್ಯಾರಿ ಸಕ್ಸೇನಾ ಕೊನೆಗೆ ಕಷ್ಟಪಟ್ಟ ಸಮಾಧಾನ ಪಡಿಸಬೇಕಾಯಿತು. ಇದೇ ವೇಳೆ ವಿಮಾನ ಅಪಹರಣದಲ್ಲಿ ಪಾಕ್ ಮಾಜಿ ಅಧ್ಯಕ್ಷ ಫರ್ವೇದ್ ಮುಷರಫ್ ಕೈವಾಡದ ಶಂಕೆಯನನ್ನೂ ದುಲಾತ್ ವ್ಯಕ್ತಪಡಿಸಿದ್ದಾರೆ.