ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಾಸ್ ಪೋರ್ಟ್: ಆನ್‍ಲೈನ್‍ನಲ್ಲೇ ಪರಿಶೀಲನೆ

ಪಾಸ್‍ಪೋರ್ಟ್‍ಗಾಗಿ ಪೊಲೀಸ್ ಪರಿಶೀಲನೆ ಹಾಗೂ ನವೀಕರಣ ಪ್ರಕ್ರಿಂಯೆ ಇನ್ನು ಮುಂದೆ ಆನ್‍ಲೈನ್ ಸ್ವರೂಪ ಪಡೆಯಲಿದ್ದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೊಳಿಸಲಾಗುತ್ತಿದೆ...

ಪಾಸ್ ಪೋರ್ಟ್
Srinivasa Murthy VN
Updated On : 27 Jul 2015, 9:20 am
ಬೆಂಗಳೂರು: ಪಾಸ್‍ಪೋರ್ಟ್‍ಗಾಗಿ ಪೊಲೀಸ್ ಪರಿಶೀಲನೆ ಹಾಗೂ ನವೀಕರಣ ಪ್ರಕ್ರಿಂಯೆ ಇನ್ನು ಮುಂದೆ ಆನ್‍ಲೈನ್ ಸ್ವರೂಪ ಪಡೆಯಲಿದ್ದು ಮೊದಲ ಬಾರಿಗೆ ಬೆಂಗಳೂರಿನಲ್ಲಿ  ಜಾರಿಗೊಳಿಸಲಾಗುತ್ತಿದೆ.
ಸದ್ಯ ಪಾಸ್‍ಪೋರ್ಟ್ ಪೊಲೀಸ್ ಪರಿಶೀಲನೆ ಪ್ರಕ್ರಿಂಯೆ 20 ದಿನಗಳ ತೆಗೆದುಕೊಳ್ಳುತ್ತಿದ್ದು ಆನ್‍ಲೈನ್ ಸ್ವರೂಪ ಪಡೆದ ನಂತರ 1 ವಾರ ಅಥವಾ ಅದಕ್ಕಿಂತ ಕಡಿಮೆ ದಿನಗಳಲ್ಲಿ  ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಆನ್ ಲೈನ್ ಪರಿಶೀಲನೆ ನವೆಂಬರ್‍ನಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಪರಿಣಾಮಕಾರಿ ಪೊಲೀಸಿಂಗ್‍ಗಾಗಿ ಸಾಮಾಜಿಕ ಜಾಲ ತಾಣಗಳ ಬಳಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಬೆಂಗಳೂರು ಪೊಲೀಸ್ ಘಟಕವನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಪ್ರಧಾನಿ ಮೋದಿಯವರು ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಬೆಂಗಳೂರು ಪೊಲೀಸ್ ಘಟಕವನ್ನು ಆಯ್ಕೆ ಮಾಡಿದ್ದರು. ಪೈಲಟ್ ಯೋಜನೆಯಾ ಗಿ ಬೆಂಗಳೂರಿನಲ್ಲಿ ಇದನ್ನು ಜಾರಿಗೊಳಿಸಿ ನಂತರ ದೇಶಾದ್ಯಂತ ವಿಸ್ತರಿಸುವ ಯೋಜನೆ ಹೊಂದಲಾಗಿದೆ.
ಈ ಉದ್ದೇಶಕ್ಕಾಗಿ ದೇಶದಲ್ಲಿರುವ ಎಲ್ಲಾ ಎಸ್ಪಿ ದರ್ಜೆಯ ಅಧಿಕಾರಿಗಳಿಗೆ ಅರ್ಜಿದಾರರ ರಾಷ್ಟ್ರೀಯ ಜನಸಂಖ್ಯೆ ದಾಖಲಾತಿ (ಎನ್‍ಪಿಆರ್), ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿ ಮಾಹಿತಿ ಪಡೆದುಕೊಳ್ಳಲು ಗೃಹ ಇಲಾಖೆ ಅವಕಾಶ ಕಲ್ಪಿಸಲಿದೆ. ಇದೇ ವೇಳೆ `ಅಪರಾಧ ಮತ್ತು ಅಪರಾಧಿಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆ' (ಸಿಸಿಟಿಎನ್‍ಎಸ್) ಸಹಾಯದಿಂದ ಅರ್ಜಿದಾರನ ಗುರುತು, ವಿಳಾಸ, ಅಪರಾಧ ಹಿನ್ನೆಲೆ ಹಾಗೂ ಇತರ ಮಾಹಿತಿಯನ್ನು ಆನ್‍ಲೈನ್ ಮೂಲಕ ಪರಿಶೀಲನೆ ನಡೆಸಲಾಗುತ್ತದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement