ಎಪಿಜೆ ಅಬ್ದುಲ್ ಕಲಾಂ 
ಪ್ರಧಾನ ಸುದ್ದಿ

ಕಲಾಂಗೆ ಕೊನೆ ಸಲಾಂ

ಜನರ ರಾಷ್ಟ್ರಪತಿ (ಪೀಪಲ್ಸ್ ಪ್ರೆಸಿಡೆಂಟ್), ದೇಶದ 'ಮಿಸೈಲ್ ಮ್ಯಾನ್'', ಭಾರತ ರತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್...

ನವದೆಹಲಿ/ಶಿಲ್ಲಾಂಗ್/ರಾಮೇಶ್ವರಂ: ಜನರ ರಾಷ್ಟ್ರಪತಿ (ಪೀಪಲ್ಸ್ ಪ್ರೆಸಿಡೆಂಟ್), ದೇಶದ 'ಮಿಸೈಲ್ ಮ್ಯಾನ್'', ಭಾರತ ರತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಇನ್ನು ನೆನಪು ಮಾತ್ರ. ದಶಕಗಳ ಕಾಲ ದೇಶದ ಯುವ ಮನಸ್ಸುಗಳ ಸ್ಫೂರ್ತಿಯ ಸೆಲೆಯಾಗಿದ್ದ ಸೋಮವಾರ ಮೇಘಾಲಯ ರಾಜಧಾನಿ ಶಿಲ್ಲಾಂಗ್‍ನಲ್ಲಿ ನಿಧನರಾಗಿದ್ದಾರೆ.

ಶಿಲ್ಲಾಂಗ್‍ನ ಐಐಎಂನಲ್ಲಿ ವಿಶೇಷ ಉಪನ್ಯಾಸ ನೀಡಲು 83 ವರ್ಷದ ಕಲಾಂ ತೆರಳಿದ್ದರು. ಸಂಜೆ 5.40ಕ್ಕೆ ಅವರು ಕೊಂಚ ಕಾಲ ವಿಶ್ರಾಂತಿ ಪಡೆದು, 6.35ರಿಂದ 'ಲಿವಬಲ್ ಪ್ಲಾನೆಟ್' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲು ಆರಂಬಿsಸಿದರು. 6.50ಕ್ಕೆ ಉಪನ್ಯಾಸ ನೀಡುತ್ತಿದ್ದಂತೆ ವೇದಿಕೆಯಲ್ಲೇ ಕುಸಿದರು. ತಕ್ಷಣ ಅವರನ್ನು ನಂಗ್ರಿಮ್ ಹಿಲ್ಸ್‍ನ ಬೆಥನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದರು. ಭಾರತೀಯ ಸೇನೆ, ವಾಯುಪಡೆ ಹಾಗೂ ಇತರ ಪರಿಣತ ವೈದ್ಯರು ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಸಹಾಯದೊಂದಿಗೆ ಅವರನ್ನು ಉಳಿಸಿಕೊಳ್ಳಲು ನಡೆಸಿದ ಯತ್ನ ಕೈಗೂಡಲಿಲ್ಲ. ವೈದ್ಯರು ಸುಮಾರು 45 ನಿಮಿಷ ಅವರನ್ನು ಉಳಿಸಿಕೊಳ್ಳಲು ನಡೆಸಿದ ಯತ್ನ ಫಲಕೊಡಲಿಲ್ಲ. ಹೃದಯಾಘಾತದಿಂದ ಕಲಾಂ ನಿಧನ ಹೊಂದಿರುವುದಾಗಿ ವೈದ್ಯರು ಖಚಿತಪಡಿಸಿದ್ದು, ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಲ್ಲಿ ಇಡಲಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯ ಡಾ.ಖರ್ಬಾಮನ್ ಮಾಜಿ ರಾಷ್ಟ್ರಪತಿ ಕಲಾಂ ಅವರನ್ನು ಆಸ್ಪತ್ರೆಗೆ ಕರೆ ತಂದಾಗಲೇ ಜೀವ ಇರಲಿಲ್ಲ. ಪಲ್ಸ್, ಬಿಪಿ ಯಾವುದೂ ಇರಲಿಲ್ಲ. ರಾತ್ರಿ 7.45ಕ್ಕೆ ಕಲಾಂ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು.

ಹಠಾತ್ತಾಗಿ ಹೃದಯಾಘಾತ ಉಂಟಾಗಿದ್ದರಿಂದ ಈ ರೀತಿಯಾಗಿದೆ'' ಎಂದು ಅವರು ಹೇಳಿದ್ದಾರೆ. ಬೆಥೆನಿ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಶಿಲ್ಲಾಂಗ್‍ನ ಮಿಲಿಟರಿ ಆಸ್ಪತ್ರೆಗೆ ರಾತ್ರಿ ತರಲಾಗಿದ್ದು, ಮಂಗಳವಾರ ಬೆಳಗ್ಗೆ ಗುವಾಹಟಿಗೆ ವಾಯುಪಡೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಕೊಂಡೊಯ್ಯಲಾಗುತ್ತದೆ. ಕೇಂದ್ರ ಸಚಿವ ಸಂಪುಟ ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಸಭೆ ಸೇರಿ ನಿಧನದ ಬಗ್ಗೆ ಸಂತಾಪ ನಿರ್ಣಯಕ್ಕೆ ಅಂಗೀಕಾರ ನೀಡಲಿದೆ. ನಿಧನದ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ, ಬಾಲಿವುಡ್ ಕ್ಷೇತ್ರದ ಗಣ್ಯರು ಸೇರಿದಂತೆ ಕಂಬನಿ ಮಿಡಿದಿದ್ದಾರೆ. ಸಂಸತ್‍ನ ಉಭಯ ಸದನಗಳೂ ಕೂಡ ಮಂಗಳವಾರ ಅಶುತರ್ಪಣ ಸಲ್ಲಿಸಲಿವೆ.

ರಾಮೇಶ್ವರಂನಲ್ಲಿ ಮೌನ: ಕಲಾಂ ಹುಟ್ಟೂರು ತಮಿಳುನಾಡಿನ ರಾಮೇಶ್ವರಂನಲ್ಲಿ ಮೌನ ಆವರಿಸಿದೆ. 99 ವರ್ಷದ ಮೊಹಮ್ಮದ್ ಮೀರಾ ಮರೈಕರ್ ತಮ್ಮನ ನಿಧನದ ಸುದ್ದಿ ಕೇಳಿ ಬಿಕ್ಕಳಿಸಿದರು. ಅಂತ್ಯಕ್ರಿಯೆಯನ್ನು ರಾಮೇಶ್ವರಂನಲ್ಲಿಯೇ ಕೈಗೊಳ್ಳುವ ಬಗ್ಗೆ ಕೇಂದ್ರ ಸರ್ಕಾರದ ಜತೆ ಚರ್ಚಿಸಲಾಗುತ್ತದೆ ಎಂದು ಮೊಹಮ್ಮದ್ ಪುತ್ರ ಜೈನುಲಾಬುದ್ದೀನ್ ತಿಳಿಸಿದ್ದಾರೆ.

ತಮಿಳುನಾಡಿನ ರಾಮೇಶ್ವರದಲ್ಲಿ 1931ರ ಅಕ್ಟೋಬರ್ 15ರಂದು ಜನಿಸಿದ್ದ ಅವುಲು ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಅವರು, 2002ರಿಂದ 2007ರವರೆಗೆ ರಾಷ್ಟ್ರದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಕಲಾಂ, 1998ರಲ್ಲಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ ಫೋಖ್ರಾನ್-2 ಕ್ಷಿಪಣಿ ಪರೀಕ್ಷೆಯ ರೂವಾರಿಯಾಗಿದ್ದರು. ದಶಕಗಳ ಕಾಲ ಭಾರತದ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಗಾಗಿ ಜೀವನ ಸೆವೆಸಿದ್ದ ಕಲಾಂ, ದೇಶದ ಪಾಲಿಗೆ 'ಕ್ಷಿಪಣಿ ತಂತ್ರಜ್ಞಾನದ ಪಿತಾಮಹ' ಎಂದೇ ಹೆಸರಾಗಿದ್ದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ್ದ ಕಲಾಂ ಅವರು, ವಿಕ್ರಂ ಸಾರಾಭಾಯಿ ಅವರೊಂದಿಗೆ ಇಸ್ರೋ ಸಂಸ್ಥೆಯನ್ನು ಕಟ್ಟಲು ದುಡಿದಿದ್ದರು. ನನ್ನ ಕನಸಿನ ಭಾರತ'', 21ನೇ ಶತಮಾನದ ಭಾರತ'', ಸ್ಫೂತಿ ಚಿಮ್ಮುವ ಮನಸ್ಸು'' ಮುಂತಾದ ತಮ್ಮ ಭಾಷಣ ಸರಣಿಗಳ ಮೂಲಕ ರಾಷ್ಟ್ರಪತಿಯಾಗಿ ನಿವೃತ್ತರಾದ ಬಳಿಕವೂ ದೇಶದ ಉದ್ದಗಲಕ್ಕೂ ಸಂಚರಿಸಿ ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತಿದ್ದ ಕಲಾಂ, ಇಡೀ ದೇಶದ ಕಣ್ಮಣಿಯಾಗಿದ್ದರು. ಶಿಲ್ಲಾಂಗ್ ಹೋಗುತ್ತಿದ್ದೇನೆ,.. ಯುವಮನಸ್ಸುಗಳೊಂದಿಗೆ ಬದುಕು ಸಾಧ್ಯವಿರುವ ನಮ್ಮ ಗ್ರಹ ಭೂಮಿ ಬಗ್ಗೆ ಮಾತನಾಡಲು.. ಎಂದು ತಮ್ಮ ಎಂದಿನ ಲವಲವಿಕೆಯ ಶೈಲಿಯಲ್ಲಿ ಶಿಲ್ಲಾಂಗ್ ಪ್ರವಾಸದ ಬಗ್ಗೆ ಟ್ವೀಟ್ ಮಾಡಿದ್ದ ದೇಶದ ಕೋಟಿ- ಕೋಟಿ ಯುವ ಮನಸುಗಳ ನಸಿನ ಕಲಾಂ ಮತ್ತೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸಾವಿರ ಕನಸುಗಳನ್ನು ತುಂಬಿಕೊಂಡ ಎಳೆಯ ಮನಸುಗಳ ಕಣ್ಣ ಮುಂದಿನ ಧ್ರುವ ನಕ್ಷತ್ರವೊಂದು ಕಳಚಿಬಿದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT