ಪ್ರಧಾನ ಸುದ್ದಿ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ರು.200 ಕೋಟಿ ಬರಪರಿಹಾರ

Srinivasamurthy VN

ನವದೆಹಲಿ: ಕರ್ನಾಟಕದ ಬರಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕೈಗೊಳ್ಳಲು ಕೇಂದ್ರ ಸರ್ಕಾರ 2014-15ನೇ ಸಾಲಿನಲ್ಲಿ ರು.200.35 ಕೋಟಿ ಮಂಜೂರು ಮಾಡಿದೆ.

ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಕೇಂದ್ರದ ಸಚಿವರ ತಂಡವು ರಾಜ್ಯಕ್ಕೆ ಭೇಟಿ ನೀಡಿ ಬರದಿಂದಾಗಿರುವ ಬೆಳೆ ಹಾನಿ ಅಂದಾಜು  ಮಾಡಿದ್ದು, ರಾಷ್ಟ್ರೀಯ ಪ್ರಕೋಪ ಪರಿಹಾರ ನಿಧಿಯಿಂದ (ಎನ್ ಡಿಆರ್‍ಎಫ್ ) ರು.200.35 ಕೋಟಿ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವ ಮೋಹನ್ ಭಾಯ್ ಕುಂಡಾರಿಯಾ ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಅಂದರೆ, ರು.1962.99 ಕೋಟಿ, ಉತ್ತರಪ್ರದೇಶಕ್ಕೆ ರು.777.34 ಕೋಟಿ, ಆಂಧ್ರಪ್ರದೇಶಕ್ಕೆ ರು.237. 51 ಕೋಟಿ ಮಂಜೂರು ಮಾಡಲಾಗಿದೆ. ಪ್ರಕೃತಿ ವಿಕೋಪ, ರೋಗ  ಮತ್ತಿತರ ಕಾರಣಗಳಿಂದ ಬೆಳೆ ಹಾನಿಯಾದರೆ ರೈತರಿಗೆ ಪರಿಹಾರ ಒದಗಿಸಲು ರಾಷ್ಟ್ರೀಯ ಬೆಳೆ ವಿಮಾ ಯೋಜನೆ, ಮಾರ್ಪಡಿತ ರಾಷ್ಟ್ರೀಯ ಕೃಷಿ ವಿಮಾ ಯೋಜನೆ, ಹವಾಮಾನ ಆಧರಿತ  ಬೆಳೆ ವಿಮೆ ಯೋಜನೆ, ತೆಂಗು ವಿಮೆ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

SCROLL FOR NEXT