ಲಕನೌ: ಶಿಯಾ ಮುಸ್ಲಿಂ ಸಮುದಾಯಕ್ಕೆ ಸೇರಿದವರನ್ನು ಗುರಿಯಾಗಿಸಲಾಗಿದೆ ಎಂದು ದೂರಿ ಶಿಯಾ ಮುಸ್ಲಿಂ ಗುರುಗಳು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಅವರ ದೆಹಲಿಯ ಗೃಹದಲ್ಲಿ ಮುಂದಿನವರ ಭೇಟಿಯಾಗಲಿದ್ದಾರೆ ಎಂದು ವಕ್ತಾರ ಶನಿವಾರ ತಿಳಿಸಿದ್ದಾರೆ.
ದೇಶದೆಲ್ಲೆಡೆಯಿಂದ ಬರಲಿರುವ ಈ ಕ್ಲೆರಿಕ್ ಗಳು ಅಲ್ಪಸಂಖ್ಯಾತ ಸಮುದಾಯದ ತೊಂದರೆಗಳನ್ನು ಕೂಡ ಮುಲಾಯಂ ಅವರೊಂದಿಗೆ ಚರ್ಚಿಸಲಿದ್ದಾರೆ.
ಶಿಯಾ ಕ್ಲೆರಿಕ್ ಮೌಲಾನ ಕಾಲ್ಬೆ ಜವ್ವಡ್ ಅವರ ಮನೆಯಲ್ಲಿ ಶುಕ್ರವಾರ ತಡರಾತ್ರಿ ಆಯೋಜಿಸಲಾಗಿದ್ದ ಸಭೆಯಲ್ಲಿ, ಈ ದೂರಿನ ನಂತರವೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕ್ರಮ ಕೈಗೊಳ್ಳದಿದ್ದರೆ, ಯಾದವ್ ಅವರ ಗೃಹದ ಮುಂದೆ ಧರಣಿ ಕೂರುವುದಾಗಿ ನಿಶ್ಚಯಿಸಲಾಗಿದೆ.
"ಅಗತ್ಯ ಬಿದ್ದರೆ ನಾವು ನ್ಯಾಯಾಂಗ ಬಂಧನಕ್ಕೂ ಸಿದ್ಧ" ಎಂದು ವಕ್ತಾರ ತಿಳಿಸಿದ್ದಾರೆ.
ಜುಲೈ ೨೭ರಂದು ಅಧಿಕಾರಿಗಳು ಲಕನೌನ ಶಾಹಿ ಮಸೀದಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಹಿಳೆಯರು, ಮಕ್ಕಳು ಮತ್ತು ಹಿರಿಯರನ್ನು ಥಳಿಸಿದ್ದನ್ನು ತಿಳಿಸಿದ ಅವರು, ವಕ್ಫ್ ಜಮೀನನ್ನು ಕಬಳಿಸಲು ಪ್ರಯತ್ನಿಸುತ್ತಿರುವ ಕೆಲವು ಪ್ರಭಾವಿ ವ್ಯಕ್ತಿಗಳ ಬೆಂಬಲಕ್ಕೆ ಸರ್ಕಾರ ನಿಂತಿದೆ ಎಂದು ಅವರು ದೂರಿದ್ದಾರೆ.