ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚೀನಾದಲ್ಲಿ ಭೀಕರ ದುರಂತ: ಪ್ರಯಾಣಿಕ ಬೋಟ್ ಮುಳುಗಿ 450 ಮಂದಿ ಕಣ್ಮರೆ

ದಕ್ಷಿಣ ಚೀನಾದ ಯಂಗೆಟ್ಜ್ ನದಿಯಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿ ಸುಮಾರು 450 ಪ್ರಯಾಣಿಕರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹಡುಗು ಮುಳುಗಿದ ಯಂಗಟ್ಜ್ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ (ಚಿತ್ರಕೃಪೆ: ಟೆಲಿಗ್ರಾಫ್)
Srinivasa Murthy VN
Updated On : 2 Jun 2015, 11:37 am

ಬೀಜಿಂಗ್: ದಕ್ಷಿಣ ಚೀನಾದ ಯಂಗೆಟ್ಜ್ ನದಿಯಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿ ಸುಮಾರು 450 ಪ್ರಯಾಣಿಕರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

"ಈಸ್ಟರ್ನ್ ಸ್ಟಾರ್" ಎಂಬ ಹೆಸರಿನ ಪ್ರಯಾಣಿಕ ಹಡಗು ಚೀನಾದ ನಾನ್ ಜಿಂಗ್ ನಿಂದ ಚಾಂಗ್ ಕಿಂಗ್ ನತ್ತ ಪ್ರಯಾಣ ಬೆಳೆಸಿತ್ತು. ಹಡಗಿನಲ್ಲಿ ಸಿಬ್ಬಂದಿಗಳು ಸೇರಿದಂತೆ ಸುಮಾರು 458 ಮಂದಿ ಪ್ರಯಾಣಿಕರು ಇದ್ದರು. ಯಂಗೆಟ್ಜ್ ನದಿಯಲ್ಲಿ ಉಂಟಾದ ಸುಂಟರಗಾಳಿಗೆ ಸಿಲುಕಿ ಜಿಲಾನಿ ಪ್ರದೇಶದಲ್ಲಿ ಹಡಗು ಮುಳುಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement