ಪ್ರಧಾನ ಸುದ್ದಿ

ನಾಲ್ಕು ವರ್ಷದಲ್ಲಿ ಜಯಾ ಆಸ್ತಿ ಡಬಲ್

Lingaraj Badiger

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನಿಂದ ಕ್ಲೀನ್ ಚಿಟ್ ಪಡೆದಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಂಪತ್ತು ನಾಲ್ಕು ವರ್ಷಗಳಲ್ಲಿ ಎರಡು ಪಟ್ಟಿಗಿಂತ ಹೆಚ್ಚಾಗಿದೆ.

ಆರ್.ಕೆ.ನಗರ ಕ್ಷೇತ್ರದಿಂದ ಮರು ಚುನಾವಣೆಗೆ ಸ್ಪರ್ಧಿಸಿರು ಜಯಲಲಿತಾ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದು, ಅವರು ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ತಾವು ಬಳಿ 117.13 ಕೋಟಿ ರುಪಾಯಿ ಮೌಲ್ಯದ ಸಂಪತ್ತು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಆದರೆ 2011ರ ವಿಧಾನಸಭೆ ಚುನಾವಣೆ ವೇಳೆ ಜಯಲಲಿತಾ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಅವರ ಆಸ್ತಿ ಮೌಲ್ಯ 51.40 ಕೋಟಿ ರು. ಎಂದು ತೋರಿಸಲಾಗಿತ್ತು. ಅದರರ್ಥ ಕಳೆದ ನಾಲ್ಕು ವರ್ಷಗಳಲ್ಲಿ ಜಯಾ ಸಂಪತ್ತು ದುಪ್ಪಟ್ಟಾಗಿದೆ.

ಜಯಲಲಿತಾ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಂನಿಂದ ಸ್ಪರ್ಧಿಸಿದ್ದರು. ಆ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮ್ಮ ಸ್ಥಿರ ಹಾಗೂ ಚರ ಆಸ್ತಿ ಮೌಲ್ಯವನ್ನು 51.40 ಕೋಟಿ ರು. ಎಂದು ನಮೂದಿಸಿದ್ದರು.

ಜಯಾ ಅವರ ಈಗಿನ ಚರಾಸ್ತಿ ಮೌಲ್ಯ 45.04 ರೂ. ಕೋಟಿ ಹಾಗೂ ಸ್ಥಿರಾಸ್ತಿ ಮೌಲ್ಯ 72.09 ಕೋಟಿ ರೂ. ಚೆನ್ನೈನ ಪೋಸ್‌ ಗಾರ್ಡನ್ ನಿವಾಸದ ಮೌಲ್ಯ ಅವರು ಘೋಷಿಸಿರುವ ಮೌಲ್ಯದ ಮೂರನೇ ಒಂದು ಪಟ್ಟಿನಷ್ಟಿದೆ. 21,662 ಚದರ ಅಡಿ ಪ್ರದೇಶದಲ್ಲಿರುವ ಈ ಆಸ್ತಿಯ ಮೌಲ್ಯ 43.96 ಕೋಟಿ ಎಂದು ನಮೂದಿಸಲಾಗಿದೆ. ಈ ಆಸ್ತಿಯನ್ನು ಅವರು 1967ರಲ್ಲಿ 1.32 ಲಕ್ಷ ರು.ಗೆ ಖರೀದಿಸಿದ್ದರು.

SCROLL FOR NEXT