ಜಿತೇಂದ್ರ ಸಿಂಗ್ ತೋಮರ್ 
ಪ್ರಧಾನ ಸುದ್ದಿ

ಕಾನೂನು ಪರೀಕ್ಷೆಯಲ್ಲಿ ಪಾಸಾಗಿದ್ದ ತೋಮರ್

ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ಕಾನೂನು ಪರೀಕ್ಷೆಯಲ್ಲಿ ಪಾಸಾಗಿರುವ ವಿಚಾರ ತನಿಖೆಯಿಂದ ಬಹಿರಂಗವಾಗಿದೆ.

ಮುಂಗರ್: ನಕಲಿ ಕಾನೂನು ಪದವಿ ಪ್ರಮಾಣ ಪತ್ರ ಹೊಂದಿದೆ ಆರೋಪದ ಮೇಲೆ ಬಂಧಿತರಾಗಿರುವ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ಕಾನೂನು ಪರೀಕ್ಷೆಯಲ್ಲಿ ಪಾಸಾಗಿರುವ ವಿಚಾರ ತನಿಖೆಯಿಂದ ಬಹಿರಂಗವಾಗಿದೆ.

1998-99ರಲ್ಲಿ ಜಿತೇಂದ್ರ ಸಿಂಗ್ ತೋಮರ್ ಅವರು ಬಿಹಾರದ ಮುಂಗರ್ ಜಿಲ್ಲೆಯಲ್ಲಿರುವ ವಿಶ್ವನಾಥ್ ಕಾನೂನು ವಿದ್ಯಾಲಯದಲ್ಲಿ ಕಾನೂನು ಪರೀಕ್ಷೆ ಬರೆದಿದ್ದು, ಪರೀಕ್ಷೆಯಲ್ಲಿ ಅವರ ಪಾಸಾಗಿದ್ದಾರೆ ಎಂದು ದಾಖಲೆಗಳಿಂದ ತಿಳಿದುಬಂದಿದೆ. ಬಲ್ಲ ಮೂಲಗಳ ಪ್ರಕಾರ ಜಿತೇಂದ್ರ ಸಿಂಗ್ ತೋಮರ್ 10136 ರೋಲ್ ನಂಬರ್ ನಲ್ಲಿ 1994-95ರ ಅವಧಿಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಕಾಲೇಜಿನ ರಿಜಿಸ್ಟರ್ ನಲ್ಲಿ ದಾಖಲಾಗಿದೆ. 1994-95 ಮತ್ತು 95-96 ಅವಧಿಗಳಲ್ಲಿ ತೋಮರ್ ಪರೀಕ್ಷೆಗೆ ಹಾಜರಾಗಿದ್ದು, 1996-97ರ ವಾರ್ಷಿಕ ಪರೀಕ್ಷೆಯಲ್ಲಿ ತೋಮರ್ ಗೈರು ಹಾಜರಾಗಿದ್ದರು ಎಂದು ತಿಳಿದುಬಂದಿದೆ.

ಅಲ್ಲದೆ ಕಾಲೇಜಿಗೆ ಸೇರುವಾಗ ತೋಮರ್ ನೀಡಿದ್ದ ಮನೆಯ ವಿಳಾಸ ಕೂಡ ಸರಿ ಇರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ದಾಖಲೆಗಳಲ್ಲಿ ತೋಮರ್ ತಮ್ಮ ಮನೆಯ ವಿಳಾಸ ಆಗ್ರಹನ್ ಎಂಬ ಗ್ರಾಮದಲ್ಲಿರುವಂತೆ ವಿಳಾಸ ನಮೂದಿಸಿದ್ದರು. ಆದರೆ ಆ ಗ್ರಾಮದಲ್ಲಿ ತೋಮರ್ ನೀಡಿದ್ದ ವಿಳಾಸವೇ ಪತ್ತೆಯಾಗಿಲ್ಲ. ಇನ್ನು ಪ್ರಕರಣ ಸಂಬಂಧ ಇಂದು ಬಿಹಾರದ ಮುಂಗಾರ್ ಜಿಲ್ಲೆಗೆ ತೆರಳಿದ್ದ ತನಿಖಾಧಿಕಾರಿಗಳು ತೋಮರ್ ಅವರ ಸಮ್ಮುಖದಲ್ಲಿಯೇ ವಿಶ್ವನಾಥ್ ಕಾನೂನು ವಿದ್ಯಾಲಯದ ಪ್ರಾಂಶುಪಾಲರಾದ ಆರ್ ಕೆ ಮಿಶ್ರಾ ಅವರನ್ನು ತನಿಖೆಗೊಳಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಅತ್ತ ಕಾಲೇಜಿನಲ್ಲಿ ಪ್ರಾಂಶು ಪಾಲರ ವಿಚಾರಣೆ ನಡೆಯುತ್ತಿದ್ದ ಇತ್ತ ಕಾಲೇಜಿನ ಆವರಣದಲ್ಲಿ ನೆರೆದಿದ್ದ ಕೆಲ ಆಪ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT