ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಉತ್ತರಪ್ರದೇಶದಲ್ಲಿ ಐ ಎ ಎಫ್ ಯುದ್ಧ ವಿಮಾನ ಪತನ

ಭಾರತೀಯ ವೈಮಾನಿಕ ದಳಕ್ಕೆ ಸೇರಿದ ಜಾಗ್ವಾರ್ ಯುದ್ಧ ವಿಮಾನವೊಂದು, ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಮಂಗಳವಾರ ಪತನಗೊಂಡಿದೆ.

ಲಕನೌ: ಭಾರತೀಯ ವೈಮಾನಿಕ ದಳಕ್ಕೆ ಸೇರಿದ ಜಾಗ್ವಾರ್ ಯುದ್ಧ ವಿಮಾನವೊಂದು, ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಮಂಗಳವಾರ ಪತನಗೊಂಡಿದೆ. ದಿನನಿತ್ಯದ ಹಾರಾಟವನ್ನು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನ ಕೆಳಕ್ಕೆ ಉರುಳಿದೆ. ಇಬ್ಬರೂ ವಿಮಾನಚಾಲಕರು ಸುರಕ್ಷಿತವಾಗಿದ್ದಾರೆ.

ಬಮ್ರೌಲಿ ವಿಮಾನ ಅಡ್ಡೆಯಿಂದ ಹಾರಿದ ಕೆಲವೇ ಕ್ಷಣಗಳ ನಂತರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದಾಗಿ ಚಾಲಕರು ಸಂದೇಶ ಕಳುಹಿಸಿದ್ದಾರೆ. ವಿಮಾನ ನಿಯಂತ್ರಣ ತಪ್ಪಿದ ನಂತರ ವಿಮಾನದಿಂದ ಚಾಲಕರು ಹೊರಬಂದಿದ್ದಾರೆ. ನಂತರ ನೈನಾ ಪ್ರದೇಶದ ಭಾರತೀಯ ಆಹಾರ ಸಂಸ್ಥೆಯ ಬಳಿ ವಿಮಾ ಪತನಗೊಂಡಿದೆ.

ಇಬ್ಬರೂ ಪೈಲಟ್ ಗಳು ಸುರಕ್ಷಿತವಾಗಿದ್ದು ವಿಮಾನ ನಾಶವಾಗಿದೆ.

ಯುದ್ಧ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕ ದಳ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಪ್ರದೇಶಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ಪತನದಿಂದಾಗಿ ಯಾವುದೇ ಸಾವು ನೋವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Chhattisgarh: ಭೀಕರ ರೈಲು ಅಪಘಾತ; ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 6 ಮಂದಿ ಸಾವು!

ಬೆಳಗಾವಿ: ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ; 3,500 ರೂ ಬೆಂಬಲ ಬೆಲೆ ನಿಗದಿಗೆ ಒತ್ತಾಯ; ಬಿಜೆಪಿ ಬೆಂಬಲ; Video

ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ: ಹೊಟ್ಟೆಗೆ ಒದ್ದು ಭ್ರೂಣ ಹೊರತೆಗೆದು ಬಾಲಕನಿಂದ ಭೀಕರ ಕೃತ್ಯ!

Bihar Poll: ಈ ಬಾರಿ 'ಎನ್ ಡಿಎ'ಗೆ ದಾಖಲೆಯ ಗೆಲುವು, ಜಂಗಲ್ ರಾಜ್ ಗೆ ಹೀನಾಯ ಸೋಲು ನಿಶ್ಚಿತ- ಪ್ರಧಾನಿ ಮೋದಿ

"Why Acting Superior?"ಕೆನಡಾದಲ್ಲಿ ಮತ್ತೊಂದು ಜನಾಂಗೀಯ ದಾಳಿ, ಭಾರತೀಯ ಯುವಕನ ಕುತ್ತಿಗೆಗೆ ಕೈ ಹಾಕಿ ಹಲ್ಲೆ, video ವೈರಲ್

SCROLL FOR NEXT