ಎಸ್ ಎಲ್ ಬೈರಪ್ಪ ಮತ್ತು ಅನ್ನಭಾಗ್ಯ ಯೋಜನೆ 
ಪ್ರಧಾನ ಸುದ್ದಿ

ಟೀಕಿಸುವವರಿಗೆ ಆಹಾರವಾದ ಅನ್ನಭಾಗ್ಯ!

ಸರ್ಕಾರದ ಮಹಾತ್ವಾಂಕ್ಷಿ `ಭಾಗ್ಯ' ಸರಣಿ ಯೋಜನೆ ರಾಜಕೀಯ ಹಾಗೂ ಸಾಹಿತ್ಯಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ಸರ್ಕಾರದ ಮಹಾತ್ವಾಂಕ್ಷಿ `ಭಾಗ್ಯ' ಸರಣಿ ಯೋಜನೆ ರಾಜಕೀಯ ಹಾಗೂ ಸಾಹಿತ್ಯಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹಿರಿಯ ಕಾದಂಬರಿಕಾರ ಡಾ.ಎಸ್. ಎಲ್.ಭೈರಪ್ಪ ಶನಿವಾರ ಚಿಕ್ಕಮಗಳೂರಿನಲ್ಲಿ ಭಾಗ್ಯ ಯೋಜನೆಯನ್ನು ಟೀಕಿಸಿದ್ದರು. ಭಾನುವಾರ ಬಳ್ಳಾರಿಯಲ್ಲಿ ಇನ್ನೊಬ್ಬ ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರು ಇದನ್ನು ಬೆಂಬಲಿಸಿದ್ದರೆ, ಖುದ್ದು ಮುಖ್ಯಮಂತಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಭಾಗ್ಯ ಯೋಜನೆಗಳನ್ನು ಸಮರ್ಥಿಸಿಕೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಸೋಮವಾರವೂ ಪರ, ವಿರೋಧದ ಧ್ವನಿ ಮೊಳಗಿವೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಾಹಿತಿ ನಾಗತಿಹಳ್ಳಿ ರಮೇಶ್ ಅವರು ಕುಂವೀ ಹಾಗೂ ಭೈರಪ್ಪ ಸಮಾಜಕ್ಕೆ ಅಂಟಿರುವ ಸಾಂಕ್ರಾಮಿಕ ರೋಗ ಎಂದು ಜರೆದಿದ್ದಾರೆ.

ಇದೇ ವೇಳೆ ಮೈಸೂರಿನಲ್ಲಿ ಮಾತನಾಡಿದ ನಾಡೋಜ ಡಾ.ದೇ. ಜವರೇಗೌಡ, ಜನ-ರಲ್ಲಿ ಸ್ವಾವಲಂಬನೆ ಮನಸ್ಥಿತಿ ಮೂಡಿ-ಸುವ ಬದಲು ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ವಸ್ತ್ರ ಭಾಗ್ಯ ಹೀಗೆ ಭಾಗ್ಯದ ಹೆಸರಿನಲ್ಲಿ ಸೋಮಾರಿತನಕ್ಕೆ ಪ್ರಚೋದಿಸುತ್ತಿರುವುದು ನಾಡಿನ ದೌರ್ಭಾಗ್ಯ ಎಂದು ಟೀಕಿಸಿದ್ದಾರೆ. ಇವೆಲ್ಲ ಬೆಳವಣಿಗೆ ನಡುವೆಯೇ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು, ಅನ್ನಭಾಗ್ಯ ವಿರೋಧಿಸುವವರು ಬಡವರ ವಿರೋಧಿಗಳು. ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಗತಿಹಳ್ಳಿ ರಮೇಶ್ ಹೇಳಿದ್ದೇನು?
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ನಾಗತಿಹಳ್ಳಿ ರಮೇಶ್, ಸಂತೆಶಿವರದ ಶೂದ್ರರ ಮನೆಯಲ್ಲಿ ವಾರಾನ್ನ ತಿಂದು ಬೆಳೆದ ಎಸ್.ಎಲ್. ಭೈರಪ್ಪ, ಇಂದು ಬಡವರ ಅನ್ನಭಾಗ್ಯದ ವಿರುದ್ಧ ಮಾತನಾಡಿರುವುದು ವಿಪರ್ಯಾಸ. ವಾರಾನ್ನ ತಿಂದು ಬೆಳೆದವರಿಗೆ ಇಂದು ಹೊಟ್ಟೆ ತುಂಬಿದೆ. ಹಾಗಂತ ಅವರಿಗೆ ಅನ್ನಭಾಗ್ಯ ಯೋಜನೆ ಟೀಕಿಸುವ ಹಕ್ಕಿಲ್ಲ. ತಮ್ಮ ಸಂಶೋಧನಾ ಸಾಹಿತ್ಯದ ಹೆಸರಿನಲ್ಲಿ ಎರಡು ಕೋಮುಗಳ ನಡುವೆ ಕಿಚ್ಚು ಹೊತ್ತಿಸುವ ಕೆಲಸ ಮಾಡುತ್ತಿರುವ ಅವರು, ರಕ್ತಕ್ಕಾಗಿ ಕನವರಿಸುತ್ತಿರುವ ಸಾಹಿತಿಯಾಗಿದ್ದಾರೆ ಎಂದು ಟೀಕಿಸಿದರು. ದೇವರ ಹೆಣ ಎಂಬ ಕತೆಯ ಮೂಲಕ ಹಸಿವಿನ ನೋವನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದ ಕುಂವೀ ಇಂದು ಜ್ಞಾನಪೀಠ ಪ್ರಶಸ್ತಿಗಾಗಿ ಮೋದಿ ಸರ್ಕಾರವನ್ನು ಓಲೈಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಮತ್ತೊಬ್ಬ ಸಾಹಿತಿ ಮತ್ತು ನಮ್ಮ ಊರಿನವರೇ ಆದ ನಾಗತಿಹಳ್ಳಿ ಚಂದ್ರಶೇಖರ್ ಸಹ ಅನ್ನಭಾಗ್ಯದ ಬಗ್ಗೆ ವಿರೋಧ ಮಾಡಿರುವುದು ತೀವ್ರ ಸಣ್ಣತನ. ಈ ತ್ರಿಮೂರ್ತಿಗಳು ಸಾಹಿತಿಗಳಲ್ಲ, ಬದಲಿಗೆ ಸಮಾಜಕ್ಕೆ ಅಂಟಿರುವ ಸಾಂಕ್ರಾಮಿಕ ರೋಗ. ವಿವಿಗಳು ಭ್ರಷ್ಟಾಚಾರದ ಕೂಪಗಳಾಗಿ ಪರಿಣಮಿಸಿರುವ ಕಾರಣ ಇಂತಹ ಕ್ರಿಮಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿರುವುದು ಆ ಪದವಿಗೆ ಅವಮಾನವಾಗಿದೆ ಎಂದರು.

ದೇಜಗೌ ಆರೋಪಿಸಿದ್ದೇನು?
ದಾವಣಗೆರೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೈಸೂರು ವಿವಿ ವಿಶ್ರಾಂತ ಕುಲಪತಿ ನಾಡೋಜ ಡಾ.ದೇ.ಜವರೇಗೌಡ, ಜನರಲ್ಲಿ ಸ್ವಾವಲಂಬನೆ ಮನಸ್ಥಿತಿ ಮೂಡಿಸುವ ಬದಲು ಅನ್ನಭಾಗ್ಯ, ವಸ್ತ್ರಭಾಗ್ಯ ಹೀಗೆ ಭಾಗ್ಯದ ಹೆಸರಿನಲ್ಲಿ ಸೋಮಾರಿತನಕ್ಕೆ ಪ್ರಚೋದಿಸುತ್ತಿರುವುದು ನಾಡಿನ ದೌರ್ಭಾಗ್ಯ. ಸರ್ಕಾರವೇ ಭಾಗ್ಯದ ಹೆಸರಿನಲ್ಲಿ ದೌರ್ಭಾಗ್ಯದ ಕೂಪಕ್ಕೆ ನೂಕುತ್ತಿರುವುದು ಸರಿಯಲ್ಲ. ಜನರಲ್ಲಿ ಜೀವನ ಮೌಲ್ಯ ಬಿತ್ತುವ ನಿಟ್ಟಿನಲ್ಲಿ ಹಿಂದೆ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಸರ್ಕಾ-ರ ಪ್ರವ-ಚನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರೊತ್ಸಾಹಿಸುತ್ತಿತ್ತು. ಇಂತಹ ಕಾರ್ಯದ ಮೂಲಕ ಜನರಲ್ಲಿ ಜೀವನ ಮೌಲ್ಯ ಬಿತ್ತಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದರು.

ಭೈರಪ್ಪ ಹೇಳಿದ್ದೇನು?

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ `ಭಾಗ್ಯ' ಸರಣಿ ಯೋಜನೆಗಳು ದೇಶ ಉದಾಟಛಿರ ಮಾಡುವುದಿಲ್ಲ. ಇವು ದೇಶ ನಾಶ ಮಾಡುವ ಯೋಜನೆಗಳಾಗಿವೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ತಮ್ಮ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಅನ್ನಭಾಗ್ಯ, ಶಾದಿಭಾಗ್ಯ ಇತ್ಯಾದಿ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಅಷ್ಟೆ.

ಅನ್ನಭಾಗ್ಯ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಬಡವರ ವಿರೋಧಿಗಳು. ಕೂಲಿ ನಾಲಿ ಮಾಡಿದವರಿಗೆ, ಹಸಿವಿನಿಂದ ಅ ತ್ತವರಿಗೆ ಮಾತ್ರ ಅನ್ನದ ಮೌಲ್ಯ ಗೊತ್ತಾಗುತ್ತದೆ. ಹಸಿವಿನಿಂದಳುವ ಮಕ್ಕಳನ್ನು ನೋಡಿಯಾದರೂ ಅವರು ಅನ್ನದ ಬೆಲೆ ಅರ್ಥ ಮಾಡಿಕೊಳ್ಳಬೇಕು. ಯಾರೇ ಟೀಕಿಸಿದರೂ ಈ ಯೋಜನೆ ನಿಲ್ಲಿಸುವುದಿಲ್ಲ. ಬಡವರ ಪರ ಇನ್ನಷ್ಟು ಯೋಜನೆ ಹುಡುಕಿ ಮಾಡುತ್ತೇವೆ.
- ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ

ಅಧಿಕಾರಕ್ಕೆ ಬಂದಾಗ ಸಾಹಿತಿಗಳ ವಿಶ್ವಾಸ, ಸಹಕಾರ, ಸಲಹೆ ಪಡೆಯುವುದಾಗಿ ಹೇಳಿದ್ದ ಸಿದ್ದರಾಮಯ್ಯ, ಈಗ ಅವರನ್ನೇ ನಿರ್ಲಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ. ಅನ್ನಭಾಗ್ಯ ಯೋಜನೆ ಬರುವ ಮುನ್ನ ರಾಜ್ಯದ ಜನತೆ ಉಪವಾಸದಿಂದ ಇದ್ದರು ಎನ್ನುವಂತೆ ಬಿಂಬಿಸುತ್ತಿದ್ದಾರೆ. ನೆರೆಯ ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೂ 20 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಅಂದರೆ, ಕರ್ನಾಟಕ ಬಿಟ್ಟರೆ ಬೇರೆಲ್ಲೂ ಇಂಥ ಯೋಜನೆ ಇಲ್ಲ ಎನ್ನುವಂತೆ ಹೇಳುತ್ತಿದ್ದಾರೆ.
-ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ