ಪೊಲ್ಲಾಚಿಯಲ್ಲಿ ನಡೆದ ಬೃಹತ್ ಘರ್ ವಾಪಸಿ 
ಪ್ರಧಾನ ಸುದ್ದಿ

ಘರ್ ವಾಪಸಿ: ಪೊಲ್ಲಾಚಿಯಲ್ಲಿ ೫೫ ಜನ ಮರು ಮತಾಂತರ

ಭಾನುವಾರ ಬೆಳಗ್ಗೆ ತಮಿಳುನಾಡಿನ ಪೋಲ್ಲಾಚಿಯ ಸುತ್ತಮುತ್ತ ಸುಮಾರು ೫೫ ಜನರನ್ನು ಹಿಂದು ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ.

ಕೊಯಂಬತ್ತೂರು: ಭಾನುವಾರ ಬೆಳಗ್ಗೆ ತಮಿಳುನಾಡಿನ ಪೋಲ್ಲಾಚಿಯ ಸುತ್ತಮುತ್ತ ಸುಮಾರು ೫೫ ಜನರನ್ನು ಹಿಂದು ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ. ಮದುವೆ ಛತ್ರವೊಂದರಲ್ಲಿ ಹಿಂದು ಮುನ್ನನಿ ಸಂಘಟನೆ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಈ ಮರು ಮತಾಂತರ ನಡೆಸಲಾಗಿದೆ.

ತಮಿಳುನಾಡಿನಲ್ಲಿ ನಡೆದ ಅತಿ ದೊಡ್ಡ 'ಘರ್ ವಾಪಸಿ' ಇದು ಎಂದು ಬಣ್ಣಿಸಲಾಗಿದೆ.

ಮೂಲಗಳ ಪ್ರಕಾರ ಮರುಮತಾಂತರವಾದ ೫೫ ಜನರಲ್ಲಿ ೧೦ ಜನ ಮುಸ್ಲಿಮರು ಹಾಗೂ ೪೫ ಜನ ಕ್ರಿಶ್ಚಿಯನ್ನರು. ವಿವಿಧ ಮಂದಿರಗಳ ಪುರೋಹಿತರ ಸಮ್ಮುಖದಲ್ಲಿ ಸುದರ್ಶನ, ಮಹಾಲಕ್ಷ್ಮಿ ಮತ್ತು ಗಣಪತಿ ಹೋಮ ಮಾಡುವ ಮೂಲಕ ಹಿಂದು ಧರ್ಮದ ತೆಕ್ಕೆಗೆ ಅವರನ್ನು ತೆಗೆದುಕೊಳ್ಳಲಾಗಿದೆ.

ಅವರೆಲ್ಲರಿಗೂ ಹಣೆಯ ಮೇಲೆ ಕುಂಕುಮ ತಿಲಕವನ್ನಿಟ್ಟು, ಭಗವದ್ಗೀತೆಯ ಪ್ರತಿಯನ್ನು ನೀಡುವುದರ ಮೂಲಕ ಬರಮಾಡಿಕೊಳ್ಳಲಾಗಿದೆ. ಸಂಘಟಕರು ಬೆಳ್ಳಿ ನಾಣ್ಯ, ಅಂಗಿಯನ್ನು ಪುರುಷರಿಗೂ ಮತ್ತು ಮಹಿಳೆಯರಿಗೆ ಸೀರೆಯನ್ನು ನೀಡುವ ಮೂಲಕ ಮರುಮತಾಂತರಕ್ಕೆ ಚಾಲನೆ ನೀಡಿದ್ದಾರೆ. ಆದಾಗ್ಯೂ ಈ ಮತಾಂತರಕ್ಕೆ ಯಾವುದೇ ಆಮಿಷ ಒಡ್ಡಿಲ್ಲ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.

ಮತಾಂತರದ ಬಗ್ಗೆ ಅರಿವು ಮೂಡಿಸಲು ನಾವು ನಗರಾದ್ಯಂತ ಫ್ಲೆಕ್ಸ್ ಗಳನ್ನು ಹಾಕಿದ್ದೆವು. ಹಿಂದು ಧರ್ಮಕ್ಕೆ ಮತಾಂತರಗೊಳ್ಳಲು ಆಸಕ್ತರಿದ್ದವರು ಸ್ವಇಚ್ಛೆಯಿಂದ ಬಂದಿದ್ದರು ಎಂದು ಸಂಘಟಕರಲ್ಲಿ ಒಬ್ಬರಾದ ಆರ್ ಶ್ರೀನಿವಾಸನ್ ತಿಳಿಸಿದ್ದಾರೆ.

ಈ ಹಿಂದೆ ತನ್ನ ಪತ್ನಿಗೆ ಆರೋಗ್ಯ ಸರಿಲ್ಲದಿದ್ದಾಗ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ನಟರಾಜನ್ "ನಾವು ಮತಾಂತರಗೊಂಡ ಕೆಲವು ವರ್ಷಗಳ ನಂತರ ನನ್ನ ಪತ್ನಿ ತೀರಿಕೊಂಡಳು. ಆದುದರಿಂದ ನಾನು ಚರ್ಚ್ಗಳನ್ನು ಹಾಗೂ ಬಂಧುಗಳನ್ನು ಭೇಟಿ ಮಾಡುವುದನ್ನು ನಿಲ್ಲಿಸಿದೆ. ಈಗ ಹಿಂದು ಧರ್ಮಕ್ಕೆ ಹಿಂದಿರುಗುವ ಅವಕಾಶ ನೀಡಿದ ಹಿಂದು ಮುನ್ನನಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ" ಎಂದಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT