ಪ್ರಧಾನ ಸುದ್ದಿ

ಸರ್ಕಾರಿ ಅಭಿಯೋಜಕ ಬದಲಿಗೆ ಅರ್ಜಿ; ಪ್ರತಿಕ್ರಿಯಿಸುವಂತೆ ಜಯಲಲಿತಾಗೆ ಸುಪ್ರೀಮ್ ಕೋರ್ಟ್ ಸೂಚನೆ

Guruprasad Narayana

ನವದೆಹಲಿ: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಜಯಲಲಿತಾ ಅವರ ಅನಧಿಕೃತ ಆಸ್ತಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರನ್ನು ಬದಲಾಯಿಸುವಂತೆ ಡಿಎಂಕೆ ಮುಖಂಡ ಕೆ ಅನ್ಬಜ್ಹಾಗನ್ ಸಲ್ಲಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.

ಕರ್ನಾಟಕ ಉಚ್ಚ ನ್ಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಾಧೀಶ ಮದನ್ ಬಿ ಲೋಕೂರ್ ನೇತೃತ್ವದ ಪೀಠ, ಡಿಎಂಕೆ ನಾಯಕನನ ಅರ್ಜಿಯನ್ನು ಮಾರ್ಚ್ ೧೮ ರಂದು ವಿಚಾರಣೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಎಐಡಿಎಂಕೆ ಅಧ್ಯಕ್ಷೆಯೂ ಅಲ್ಲದೆ, ಈ ಪೀಠ ಇತರ ತಪ್ಪಿತಸ್ಥರಾದ ಜಯಲಲಿತಾ ಆಪ್ಟೆ ಶಶಿಕಲಾ, ಮ ತ್ತು ಇನ್ನಿತರ ಇಬ್ಬರು ಬಂಧುಗಳಿಗೂ ಹಾಗೂ ಕರ್ನಾಟಕ ಸರ್ಕಾರಕ್ಕೂ ಈ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಿದೆ.

ಡಿಎಂಕೆ ಮುಖಂಡನ ಅರ್ಜಿಯಲ್ಲಿ, ಸರ್ಕಾರಿ ಅಭಿಯೋಜಕ ನಿಷ್ಪಕ್ಷಪಾತದಿಂದ ಕೆಲಸ ಮಾಡುತ್ತಿಲ್ಲ ಎಂದು ದೂರಿ ಅವರನ್ನು ಈ ಪ್ರಕರಣದಿಂದ ಹೊರಹಾಕಲು ಕೋರಲಾಗಿದೆ.

ಇದಕ್ಕೂ ಮುಂಚೆ ಡಿಸೆಂಬರ್ ೨೧೦೪ ರಲ್ಲಿ ನಾಲ್ಕು ತಿಂಗಳವರೆಗೆ ಜಯಲಲಿತಾ ಅವರಿಗೆ ಜಾಮೀನು ನೀಡಿ, ಜಯಲಲಿತಾ ಪ್ರಕರಣವನ್ನು ಶೀಘ್ರ ಇತ್ಯರ್ಥ ಮಾಡಲು ಹೊಸ ಪೀಠವೊಂದನ್ನು ರಚಿಸಲು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ, ಸುಪ್ರೀಮ್ ಕೋರ್ಟ್ ಸೂಚಿಸಿತ್ತು.

SCROLL FOR NEXT