ನವದೆಹಲಿ: ಇಂಡಿಯನ್ ಓಶನ್ ನ ಮೂರು ದ್ವೀಪಗಳು, ಸೇಷೆಲ್ಜ್, ಮಾರಿಷಸ್ ಮತ್ತು ಶ್ರೀಲಂಕಾ ಪ್ರವಾಸಕ್ಕೆ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಿಂದ ಹೊರಟರು.
ಐದು ದಿವಸಗಳ ಈ ಪ್ರವಾಸದಲ್ಲಿ ಮೋದಿ ಮೊದಲಿಗೆ ಸೇಷೆಲ್ಜ್ ನಂತರ ಮಾರಿಷಸ್ ಮತ್ತು ಶ್ರೀಲಂಕಾ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ.
೧೯೮೧ ರ ನಂತರ ಇದೇ ಮೊದಲ ಬಾರಿಗೆ ಭಾರತೀಯ ಪ್ರಧಾನಮಂತ್ರಿ ಸೇಷೆಲ್ಜ್ ಗೆ ಭೇಟಿ ನೀಡುತ್ತಿರುವುದು. ನಂತರ ಮಾರ್ಚ್ ೧೧-೧೨ ರಂದು ಮಾರಿಷಸ್ ತಲುಪಲಿರುವ ಪ್ರಧಾನಿ, ಮಾರ್ಚ್ ೧೨ ರಂದು ಮಾರಿಷಸ್ ಸ್ವಾತಂತ್ರ್ಯ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಂತರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅಧಿಕಾರ ಸ್ವೀಕರಿಸಿದ ನಂತರ ಇದು ಎರಡನೆ ಭೇಟಿಯಾಗಲಿದೆ. ಈ ಹಿಂದೆ ರನಿಲ್ ವಿಕ್ರಮಸಿಂಘೆ ಅವರು ಭಾರತಕ್ಕೆ ಬಂದು ಪ್ರಧಾನಿಯವರನ್ನು ಭೇಟಿಯಾಗಿದ್ದರು.
ಮೀನುಗಾರರ ಸಮಸ್ಯೆಯೂ ಸೇರಿದಂತೆ, ಶ್ರೀಲಂಕಾದ ಜೊತೆ ಹಲವಾರು ದ್ವಿಪಕ್ಷೀಯ ಮಾತುಕತೆಗಳು ನಡೆದು ಸಂಬಂಧ ವೃದ್ಧಿಸುವುದಕ್ಕೆ ಗಮನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.