ಪ್ರಧಾನ ಸುದ್ದಿ

ಎನ್ ಸಿ ಪಿ ಖಂಡನಾ ನಿರ್ಣಯ ಬೆಂಬಲಿಸಿ ಬಿಜೆಪಿ ದ್ರೋಹ ಬಗೆದಿದೆ: ಶಿವಸೇನೆ

Guruprasad Narayana

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದೊಂದಿಗೆ ಆಡಳಿತ ನಡೆಸುತ್ತಿರುವ ಶಿವಸೇನೆ, ಎನ್ ಸಿ ಪಿ ಪಕ್ಷ ವಿಧಾನ ಪರಿಷತ್ ಸಭಾಧ್ಯಕ್ಷ ಶಿವಾಜಿರಾವ್ ದೇಶಮುಖ್ ವಿರುದ್ಧ ಮಂಡಿಸಿದ್ದ ಖಂಡನಾ ನಿರ್ಣಯಕ್ಕೆ ಬಿಜೆಪಿ ಬೆಂಬಲ ನೀಡೀದ್ದಕ್ಕೆ ತೀವ್ರವಾಗಿ ಟೀಕಿಸಿದ್ದು ಇದು ಬಿಜೆಪಿ ಪಕ್ಷ ರಾಜ್ಯದ ಜನರಿಗೆ ಬಗೆದ ದ್ರೋಹ ಎಂದಿದೆ.

ಎನ್ ಸಿ ಪಿ ಪಕ್ಷವನ್ನು ಮಹಾರಾಷ್ಟ್ರವನ್ನು ದೋಚಿದ "ನ್ಯಾಚುರಲ್ಲಿ ಕರಪ್ಟ್ ಪಾರ್ಟಿ" (ಸ್ವಾಭಾವಿಕವಾಗಿ ಭ್ರಷ್ಟ ಪಕ್ಷ) ಎಂದು ಬಣ್ಣಿಸಿದ್ದ ಮೋದಿ ಅವರ ಹೇಳಿಕೆಯನ್ನು ಉದಾಹರಿಸಿ ಬಿಜೆಪಿ ಪಕ್ಷದ ಈ ನಡೆ ರಾಜಕೀಯದಲ್ಲಿ ಯಾರು ಶಾಶ್ವತ ಗೆಳೆಯರಲ್ಲಿ ಅಥವಾ ಶತ್ರುಗಳಲ್ಲ ಎಂಬುದನ್ನು ತೋರಿಸಿದೆ ಎಂದಿದ್ದಾರೆ.

"ನಾವು ಪ್ರತಿಭಾ ಪಾಟಿಲ್ ಮತ್ತು ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬೆಂಬಲಿಸಿದಾಗ, ಕಾಂಗ್ರೆಸ್ ಜೊತೆ ನಮ್ಮ ಸಖ್ಯ ಇದೆ ಎಂದು ನಮ್ಮನ್ನು ದೂಷಿಸಿದವರು ಇಂದು ಭ್ರಷ್ಟ ಪಕ್ಷದ ಜೊತೆ ಕೈಜೋಡಿಸಿ ಕೈ ಕೆಸರು ಮಾಡಿಕೊಂಡಿದ್ದಾರೆ. ಇದು ಜನರಿಗೆ ದ್ರೋಹ ಬಗೆಯುವುದಕ್ಕೆ ಕಾರಣವಾಗಿದೆ" ಎಂದು ಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಿದೆ.

SCROLL FOR NEXT