ದೇರಾ ಇಸ್ಮಾಯಿಲ್ ಖಾನ್: ಈಶಾನ್ಯ ಆಫ್ಘಾನಿಸ್ಥಾನದಲ್ಲಿ ಅಮೆರಿಕಾ ಡ್ರೋನ್ ದಾಳಿಗೆ ೧೧ ಜನ ಪಾಕಿಸ್ತಾನಿ ತಾಲಿಬಾನ್ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಗುಪ್ತಚರ ಮೂಲಗಳ ಬುಧವಾರ ತಿಳಿಸಿವೆ. ಇದರಲ್ಲಿ ಆರರಿಂದ ಏಳು ಜನ ಹಿರಿಯ ಕಾಮ್ಯಾಂಡರ್ ಗಳು ಕೂಡ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ತಡವಾಗಿ, ಕುನಾರ ಪ್ರಾಂತ್ಯದಲ್ಲಿ ಈ ಡ್ರೋನ್ ದಾಳಿ ನಡೆದಿದೆ.
ಪಾಕಿಸ್ತಾನದ ಖೈಬರ್ ಪ್ರದೇಶದಲ್ಲಿನ ತಿರಾಹ್ ಕಣಿವೆಯಲ್ಲಿ ಫೈಟರ್ ವಿಮಾನಗಳು ಬಹಳಷ್ಟು ಉಗ್ರಗಾಮಿಗಳನ್ನು ಹತ್ಯೆ ಮಾಡಿವೆ ಎಂದು ಕೂಡ ತಿಳಿದು ಬಂದಿದೆ.
ಇದಕ್ಕೂ ಮುಂಚೆ ಆಪ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದ ನಾಜ್ಯಾನ್ ಪ್ರದೇಶದಲ್ಲಿ ಡ್ರೋನ್ ದಾಳಿಗೆ ಒಂಬತ್ತು ಜನ ಉಗ್ರಗಾಮಿಗಳು ಮೃತಪಟ್ಟಿದ್ದು ವರದಿಯಾಗಿತ್ತು. ಈ ಒಂಭತ್ತು ಜನ ಉಗ್ರಗಾಮಿಗಳು, ಪಾಕಿಸ್ತಾನ ತಾಲಿಬಾನ್ ಮತ್ತು ಲಷ್ಕರ್ ಎ ಇಸ್ಲಾಂ ಸಂಘಟನೆಗೆ ಸೇರಿದವರು ಎಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ.