ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಉಳ್ಳವರು ಎಲ್ ಪಿ ಜಿ ಸಬ್ಸಿಡಿಯನ್ನು ಕೈಬಿಡುವಂತೆ ಪ್ರಧಾನಿ ಮೋದಿ ಮನವಿ

ಉಳ್ಳವರು-ಉತ್ತಮ ಜೀವನ ನಡೆಸುತ್ತಿರುವವರು ಎಲ್ ಪಿ ಜಿ ಸಬ್ಸಿಡಿ ತೆಗೆದುಕೊಳ್ಳುವುದನ್ನು ಕೈಬಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ನವದೆಹಲಿ: ಉಳ್ಳವರು-ಉತ್ತಮ ಜೀವನ ನಡೆಸುತ್ತಿರುವವರು ಎಲ್ ಪಿ ಜಿ ಸಬ್ಸಿಡಿ ತೆಗೆದುಕೊಳ್ಳುವುದನ್ನು ಕೈಬಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದು ೨೦೨೨ರ ವೇಳೆಗೆ ಇಂಧನ ಆಮದನ್ನು ಶೇಕಡಾ ೧೦ ರಷ್ಟು ಕಡಿತಗೊಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಸದ್ಯದ ೨೭ ಲಕ್ಷ ಜನರ ಮನೆಗಳಿಗೆ ಎಲ್ ಪಿ ಜಿ ಪೈಪ್ ಸಂಪರ್ಕ ಕೊಟ್ಟಿದ್ದು ಇದನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ೧ ಕೋಟಿ ಮನೆಗಳಿಗೆ ಇದನ್ನು ವಿಸ್ತರಿಸುವ ಇಂಧನ ಸಂಸ್ಥೆಗಳ ಯೋಜನೆಯನ್ನು ಹಂಚಿಕೊಂಡ ಅವರು ಮುಂದಿನ ದಿನಗಳಲ್ಲಿ ೨.೮ ಲಕ್ಷ ಜನರು ಎಲ್ ಪಿ ಜಿ ಸಬ್ಸಿಡಿ ಬೇಡ ಎಂದರೆ ೧೦೦ ಕೋಟಿ ಉಳಿತಾಯವಾಗುತ್ತದೆ ಎಂದಿದ್ದಾರೆ.

ಸ್ವದೇಶದಲ್ಲೇ ಉತ್ಪತ್ತಿಯಾಗುವ ಇಂಧನಕ್ಕೆ ಸೀಮಿತವಾಗಿ ಆಮದಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ನಮ್ಮ ಗುರಿ ದೊಡ್ಡದಿರಬೇಕು, ಆಗಷ್ಟೇ ನಮ್ಮ ಆಮದಿನ ಪ್ರಮಾಣ ಕಡಿತಗೊಳಿಸಿಕೊಳ್ಳಬಹುದು.. ಅದಕ್ಕಾಗಿ ನಾವು ಶ್ರಮಿಸಬೇಕು" ಎಂದಿರುವ ಅವರು ಸ್ವದೇಶಿ ಇಂಧನ ಸಂಸ್ಥೆಗಳು ಬಹುರಾಷ್ಟ್ರೀಯ ಸಂಸ್ಥೆಗಳಾಗುವತ್ತ ಗುರಿ ನೆಡಬೇಕು ಎಂದು ಸೇರಿಸಿದ್ದಾರೆ.

ಹಾಗೆಯೆ ಮುಂದಿನ ದಿನಗಳಲ್ಲಿ ಇಂಧನ ಕ್ಷೇತ್ರದ ತೊಂದರೆಗಳನ್ನು ನಿವಾರಿಸಲು ಸಾಂಸ್ಥಿಕ ಪರಿಹಾರಗಳನ್ನು ಕಂಡುಕೊಳ್ಳುವತ್ತ ಗಮನ ಹರಿಸಬೇಕು ಎಂದಿದ್ದಾರೆ.

ರಾಷ್ಟ್ರದ ಯುವ ಸಮುದಾಯ ಹಾಗು ಕೌಶಲ್ಯ ಅಭಿವೃದ್ಧಿಯ ಮೇಲೆ ಸರ್ಕಾರದ ಗಮನ ಮುಂದಿನ ದಿನಗಳಲ್ಲಿ ಇಂಧನ ಕೊರತೆಯ ತೊಂದರೆಗಳನ್ನು ನಿವಾರಿಸಲು ಸಹಕಾರಿಯಾಗಲಿದೆ ಎಂದು ನಂಬಿದ್ದೇನೆ ಎಂದಿದ್ದಾರೆ.

ಇಂಧನ ಕ್ಷೇತ್ರದಲ್ಲಿ ತಮ್ಮ ಸರ್ಕಾರ ತಂದಿರುವ ಸುಧಾರಣೆಗಳ ಬಗ್ಗೆ ತಿಳಿಸಿದ ಮೋದಿ ಡಿಸೇಲ್ ದರಗಳನ್ನು ಸರ್ಕಾರಿ ನಿಯಂತ್ರಣದಿಂದ ಹೊರ ತಂದಿದ್ದೇವೆ ಹಾಗೆಯೇ ಬಡ ಮತ್ತು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಐದು ಕೆಜಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗಳನ್ನು ಕೂಡ ಪರಿಚಯಿಸಿದ್ದೇವೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT