ಪ್ರಧಾನ ಸುದ್ದಿ

ಧರ್ಮನಿಂದನೆ: ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬನಿಗೆ ೨೫ ವರ್ಷ ಜೈಲುಸಜೆ

Guruprasad Narayana

ಇಸ್ಲಾಮಾಬಾದ್: ಪವಿತ್ರ ಗ್ರಂಥಗಳಿಗೆ ಅವಮಾನ ಮಾಡಿದ ಎಂಬ ಆರೋಪದ ಮೇಲೆ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ಪಾಕಿಸ್ತಾನದ ಕೋರ್ಟ್ ಅವನನ್ನು ೨೫ ವರ್ಷದ ಜೈಲುಸಜೆಗೆ ಗುರಿ ಮಾಡಿದೆ.

ಈ ಪ್ರಕರಣದ ವಿಚಾರಣೆ ಲಾಹೋರಿನ ಸೆಶನ್ ಕೋರ್ಟ್ ನಲ್ಲಿ ನಡೆಯಿತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕೋರ್ಟ್ ಪ್ರತ್ಯಕ್ಷದರ್ಶಿಗಳು ಮತ್ತು ವಕೀಲರ ಹೇಳಿಕೆಗಳನ್ನು ವಿಚಾರಿಸಿದ ಮೇಲೆ ಜುಲ್ಫಿಕರ್ ನನ್ನು ಪವಿತ್ರ ಗ್ರಂಥಗಳಿಗೆ ಅವಮಾನ ಮಾಡಿದ ಎಂಬ ಆರೋಪದ ಮೇಲೆ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಧರ್ಮನಿಂದನೆ ಅಪರಾಧವನ್ನು ಜುಲ್ಫಿಕರ್ ಮೇಲೆ ಕೋರ್ಟ್ ಹೊರಿಸಿದೆ.

ಜುಲ್ಫಿಕರ್ ಅವರ ಎಲ್ಲ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆ ಕೋರ್ಟ್ ಆದೇಶಿದೆ.

೨೦೦೬ರಲ್ಲಿ ರೇಸ್ ಕೋರ್ಸ್ ಪೊಲೀಸ್ ಠಾಣೆಯಲ್ಲಿ ಜುಲ್ಫಿಕರ್ ವಿರುದ್ಧ ಕೇಸು ದಾಖಲಾಗಿತ್ತು.

SCROLL FOR NEXT