ಟಾಮ್ ಮೂಡಿ 
ಪ್ರಧಾನ ಸುದ್ದಿ

ಟಾಮ್ ಮೂಡಿ ಅಸಮಾಧಾನ

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲು ಕಂಡ ಸನ್‍ರೈಸರ್ಸ್ ತಂಡದ ವಿರುದ್ಧ ಆ ತಂಡದ ತರಬೇತುದಾರ ಟಾಮ್ ಮೂಡಿ...

ಮುಂಬೈ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲು ಕಂಡ ಸನ್‍ರೈಸರ್ಸ್ ತಂಡದ ವಿರುದ್ಧ ಆ ತಂಡದ ತರಬೇತುದಾರ ಟಾಮ್ ಮೂಡಿ
ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳಪೆ ಬ್ಯಾಟಿಂಗ್‍ನಿಂದಾಗಿ ಹೈದರಾಬಾದ್ ತಂಡ ಸೋಲು ಕಾಣಬೇಕಾಯಿತು ಎಂದು ಅವರು ಹೇಳಿದ್ದಾರೆ. ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕೋಲ್ಕತಾ ತಂಡವನ್ನು 167 ರನ್‍ಗಳ ಮೊತ್ತಕ್ಕೆ ಕಟ್ಟಿಹಾಕಿದ್ದು ಸರಿ. ಆದರೆ, ಪಂದ್ಯ ಗೆಲ್ಲಲು ಬೇಕಿದ್ದ 168 ರನ್‍ಗಳ ಗುರಿ ಅಸಾಧ್ಯವಾಗಿರಲಿಲ್ಲ. ಆದರೆ, ನಮ್ಮ ಆಟಗಾರರು ಈ ಗುರಿಯನ್ನು ಮೆಟ್ಟುವಲ್ಲಿ ವಿಫಲರಾದರು' ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಮೊದಲ ಓವರ್‍ನಲ್ಲೇ ನಾಯಕ ಹಾಗೂ ಆರಂಭಿಕ ಡೇವಿಡ್ ವಾರ್ನರ್ ಹಾಗೂ ಮೂರನೇ ಕ್ರಮಾಂಕದ ನಮನ್ ಓಜಾ ಅವರು ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಶಾಕ್ ನೀಡಿತು' ಎಂದ ಅವರು, ಮಧ್ಯಮ ಕ್ರಮಾಂಕದ ಹೆನ್ರಿಕ್ಸ್ ಬಿಟ್ಟರೆ ಮಿಕ್ಕವರ್ಯಾರೂ ಹೆಚ್ಚು ಆಡದಿದ್ದುದು ತಂಡ ಪರಾಭವ ಹೊಂದಲು ಪ್ರಮುಖ ಕಾರಣವಾಯಿತು' ಎಂದು ಅವರು ವಿಶ್ಲೇಷಿಸಿದರು. ಸನ್‍ರೈಸರ್ಸ್ ತಂಡದ ಕೈಯ್ಯಲ್ಲಿ ಇನ್ನೂ ಐದು ಪಂದ್ಯಗಳಿದ್ದು, ಆ ಪಂದ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶ ನೀಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT