ಪ್ರಧಾನ ಸುದ್ದಿ

ಜಯಾ ನಿರ್ದೋಷಿ: 1 ಗಂಟೆಯೂ ನನಗೆ ವಾದ ಮಂಡಿಸಲು ಅವಕಾಶ ನೀಡಿಲ್ಲ; ಎಸ್‌ಪಿಪಿ

Lingaraj Badiger

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ನನಗೆ 1 ಗಂಟೆಯೂ ವಾದ ಮಂಡಿಸಲು ಅವಕಾಶ ನೀಡಿಲ್ಲ ಎಂದು ಸರ್ಕಾರಿ ವಿಶೇಷ ಅಭಿಯೋಜಕ(ಎಸ್‌ಪಿಪಿ) ಬಿ.ವಿ.ಆಚಾರ್ಯ ಅವರು ಸೋಮವಾರ ಹೇಳಿದ್ದಾರೆ.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಸೇರಿ ನಾಲ್ವರು ನಿರ್ದೋಷಿ ಎಂದು ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಆಚಾರ್ಯ ಅವರು, ಹೈಕೋರ್ಟ್ ಯಾವ ಆಧಾರದ ಮೇಲೆ ಶಿಕ್ಷೆಯನ್ನು ರದ್ದುಪಡಿಸಿದೆ ಎಂದು ಈಗಲೇ ಹೇಳುವುದು ಅಸಾಧ್ಯ.ತೀರ್ಪಿನ ಪ್ರತಿ ಸಿಗುವವರೆಗೂ ಮತ್ತು ಪೂರ್ತಿ ತೀರ್ಪು ಓದದೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಆರೋಪಿ ಪರ ವಕೀಲರಿಗೆ ವಾದ ಸಲ್ಲಿಕೆಗೆ ಅವಕಾಶವಿತ್ತು. ಆದರೆ ನನಗೆ ಒಂದು ಗಂಟೆಯೂ ವಾದ ಮಂಡಿಸಲು ಅವಕಾಶ ಸಿಗಲಿಲ್ಲ. ನಮಗೆ ಲಿಖಿತ ವಾದ ಸಲ್ಲಿಸಲು ಒಂದು ದಿನ ಮಾತ್ರ ಅವಕಾಶ ಸಿಕ್ಕಿತ್ತು, ಸಿಕ್ಕ ಒಂದು ದಿನದಲ್ಲೇ ಲಿಖಿತ ವಾದ ಸಿದ್ಧಪಡಿಸಿ ಸಲ್ಲಿಸಿದ್ದೆ. ಆದರೆ ಲಿಖಿತ ವಾದ ಸಲ್ಲಿಸಲು ಹೆಚ್ಚು ಕಾಲಾವಕಾಶ ನೀಡಬೇಕಿತ್ತು ಎಂದು ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.

ಕಡಿಮೆ ಸಮಯವಾಗಿದ್ದರಿಂದ ವಾದ ಪ್ರಭಾವ ಬೀರಿಲ್ಲ. ಪ್ರಭಾವ ಬೀರಬೇಕಾದರೆ ವಿಸ್ತೃತ ವಾದ ಮಂಡಿಸಬೇಕು. ನನ್ನ ವಾದಕ್ಕೆ ಕೋರ್ಟ್ ಯಾವ ರೀತಿ ಸ್ಪಂದಿಸಿದೆಯೇ ಗೊತ್ತಿಲ್ಲ ಎಂದು ಬಿ.ವಿ.ಆಚಾರ್ಯ ಅವರು ಹೇಳಿದ್ದಾರೆ.

SCROLL FOR NEXT