ಎನ್ ಆರ್ ನಾರಾಯಣ ಮೂರ್ತಿ 
ಪ್ರಧಾನ ಸುದ್ದಿ

ಮೋದಿಗೆ ಮೂರ್ತಿ ಪ್ರಶಂಸೆ; ಪ್ರಧಾನಿ ಕಾರ್ಯಕ್ರಮಗಳಿಗೆ ಜನರಿಂದ ಸಹಕಾರ ಕೋರಿಕೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಧೀಮಂತ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಬಿಚ್ಚು

ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಧೀಮಂತ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಬಿಚ್ಚು ಪ್ರಶಂಸೆ ವ್ಯಕ್ತಪಡಿಸಿದ್ದು  ಒಂದು ವರ್ಷದಲ್ಲಿ ಬಹಳಷ್ಟು ಕೆಲಸಗಳಾಗಿದೆ ಹಾಗು ಪ್ರಧಾನಿ ಅವರ ಮುಂದಿನ ಸಾಹಸಗಳಿಗೆ ಜನರು ಸಹಕಾರ ನೀಡಬೇಕು ಎಂದಿದ್ದಾರೆ.

"ಬಹಳ ಉತ್ಸಾಹಭರಿತ ಹಾಗು ಕಷ್ಟ ಬೀಳುವ ಪ್ರಧಾನಿಯನ್ನು ನಾವು ಹೊಂದಿದ್ದೇವೆ. ಜನ, ಎಲ್ಲ ಪಕ್ಷಗಳು ಮತ್ತು ವಿಪಕ್ಷಗಳು ಅವರನ್ನು ಹಿಂಬಾಲಿಸಬೇಕು. ಬಹಳಷ್ಟು ಒಳ್ಳೆಯ ಕೆಲಸಗಳಾಗಿವೆ ಎಂದೆನಿಸುತ್ತದೆ ನನಗೆ. ಆದರೆ ಇದಿನ್ನೂ ಆರಂಭದ ಕಾಲ. ಆದುದರಿಂದ ನಾವೆಲ್ಲರೂ ಪ್ರಧಾನಿಯವರನ್ನು ಬೆಂಬಲಿಸಿ ದಕ್ಷತೆಯಿಂದ ನಮ್ಮ ಕೆಲಸ ಮುಂದುವರೆಸಬೇಕು. ಆಗ ಪ್ರಗತಿಯನ್ನು ಕಾಣಬಲ್ಲೆವು" ಎಂದು ಮೂರ್ತಿ ಹೇಳಿದ್ದಾರೆ.

ಪಾರದರ್ಶಕ ತೆರಿಗೆಗಳಿಗೆ ಕರೆಕೊಟ್ಟ ಮೂರ್ತಿ ತೆರಿಗೆ ನೀತಿಗಳು ಪಾರದರ್ಶಕತೆ, ಸ್ಥಿರತೆಯಿಂದ ಕೂಡಿ ಸುಲಭವಾಗಿ ಸಂವಹನ ಮಾಡುವಂತೆ ಹಾಗು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತಿರಬೇಕು. ಆಗ ಸರ್ಕಾರದ ಮೇಲೆ ಜನಕ್ಕೆ ನಂಬಿಕೆ ಬೆಳೆದು ಅತಿ ಹೆಚ್ಚಿನ ತೆರಿಗೆ ಸಂಗ್ರಹಿಸಲು ಸಾಧ್ಯವಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ಸಿಸಿಐ ನಲ್ಲಿ ನೀಡಿದ ಉಪನ್ಯಾಸದ ವೇಳೆ ಮಾತನಾಡಿದ ಅವರು ಸರಿಯಾದ ಭೂ ಹಂಚಿಕೆಯಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದಿದ್ದಾರೆ. ಹಾಗು ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿ ಸಂಸ್ಥೆಗಳು ನಿರ್ವಹಿಸಬೇಕು ಎಂದಿದ್ದಾರೆ.

ಸಂಸ್ಥೆಗಳ ಮಧ್ಯೆ ಸ್ಪರ್ಧಾತ್ಮಕ ಪರಿಸರ ಇರಬೇಕು ಎಂದಿರುವ ಆವರು ಸ್ಪರ್ಧೆಯಿಂದ ಸಂಸ್ಥೆಗಳಲ್ಲಿ ಹೊಸ ಹೊಳಹುಗಳು, ಒಳ್ಳೆಯ ಸೇವೆ, ಒಳ್ಳೆಯ ಉತ್ಪನ್ನಗಳು ಮತ್ತು ಸಂಶೋಧನೆ ಹೊರಬರುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT