ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಹಳಿ ತಪ್ಪಿದ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್; ಚಾಲಕನಿಗೆ ಗಾಯ

ಅಸ್ಸಾಮಿನ ಕೋಕ್ರಾಝರ್ ಜಿಲ್ಲೆಯಲ್ಲಿ ಸಲಕಟಿ ಮತ್ತು ಬಸುಗಾಂವ್ ಮಾರ್ಗ ಮಧ್ಯೆ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್ ಶನಿವಾರ ಹಳಿತಪ್ಪಿದ್ದು

ಕೋಕ್ರಾಝರ್: ಅಸ್ಸಾಮಿನ ಕೋಕ್ರಾಝರ್ ಜಿಲ್ಲೆಯಲ್ಲಿ ಸಲಕಟಿ ಮತ್ತು ಬಸುಗಾಂವ್ ಮಾರ್ಗ ಮಧ್ಯೆ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್ ಶನಿವಾರ ಹಳಿತಪ್ಪಿದ್ದು ಕನಿಷ್ಠ ಇಬ್ಬರಿಗೆ ಗಾಯವಾಗಿದೆ.

ಈಶಾನ್ಯ ಸರಹದ್ದಿನ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಂತಶರ್ಮ ೫ ಪ್ರಯಾಣಿಕ ಭೋಗಿಗಳು ಹಳಿ ತಪ್ಪಿದ ವರದಿಯಾಗಿದೆ ಎಂದು ತಿಳಿಸಿದ್ದಾರೆ.

ಸಲಕಟಿ ಮತ್ತು ಬಸುಗಾಂವ್ ಮಾರ್ಗದಲ್ಲಿ ಸುಮಾರು ಬೆಳಗ್ಗೆ ೫:೧೫ಕ್ಕೆ ೫೫೭೫೩ ಯು ಪಿ ಸಿಫಂಗ್ ಪ್ರಯಾಣಿಕ ರೈಲು ಸೇತುವೆಯನ್ನು ದಾಟುವುದಕ್ಕೂ ಮುಂಚೆ ಹಳಿ ತಪ್ಪಿದೆ. ಪಶ್ಚಿಮ ಬಂಗಾಳದ ಅಲಿಪುರದೌರ್ ನಿಂದ ಗೌಹಾಟಿಗೆ ಬರುತ್ತಿದ್ದ ಎಲ್ಲ ಪ್ರಯಾಣಿಕರನ್ನು ವರ್ಗಾಯಿಸಲಾಗಿದೆ ಎಂದು  ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಂತಶರ್ಮ ತಿಳಿಸಿದ್ದಾರೆ.

ರೈಲು ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಸಣ್ಣ ಪುಟ್ಟ ಗಾಯಗಳಾದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. ಈ ಘಟನೆಯಿಂದ ಈ ಸಂಪರ್ಕ ಮಾರ್ಗವನ್ನು ಮುಚ್ಚಲಾಗಿದ್ದು, ಇತರ ರೈಲುಗಳು ತಡವಾಗಿ ಚಲಿಸಲಿವೆ ಎಂದು ಕೂಡ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT