ಪ್ರಧಾನ ಸುದ್ದಿ

ಐರ್ಲ್ಯಾಂಡಿನಲ್ಲಿ ಸಲಿಂಗ ಮದುವೆಗೆ ಕಾನೂನು ಮಾನ್ಯತೆಯ ಸಾಧ್ಯತೆ

Guruprasad Narayana

ಡಬ್ಲಿನ್: ಒಂದೆ ಲಿಂಗದ ಮದುವೆಯ ಕಾನೂನು ಮಾನ್ಯತೆಗಾಗಿ ಐರ್ಲ್ಯಾಂಡ್ ಜನತೆ ಮತ ಚಲಾಯಿಸಿದ್ದು ಸಾಂಪ್ರದಾಯಿಕ ಕ್ಯಾಥಲಿಕ್ ರಾಷ್ಟ್ರದಲ್ಲಿ ಈ ವಿಷಯದಲ್ಲಿ ತೀವ್ರ ಒಡಕು ಕಂಡುಬಂದಿದೆ.

೧೯೯೩ ರಲ್ಲಿ ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಈ ರಾಷ್ಟ್ರ ಕಾನೂನು ಮಾಡಿತ್ತು.

ಶುಕ್ರವಾರ ನಡೆದ ಮತದಾನದಲ್ಲಿ ಅತಿ ಹೆಚ್ಚು ಜನರು ಮತ ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಭಾಗಗಳಲ್ಲಿ ಸುಮಾರು ೬೦% ಜನಸಂಖ್ಯೆ ಮತ ಚಲಾಯಿಸಿದ್ದು ಶನಿವಾರ ಮಧ್ಯಾಹ್ನದವರೆಗೆ ಮತದಾನ ಮುಂದುವರೆಯಲಿದೆ ಎನ್ನಲಾಗಿದೆ.

ಈ ಮತದಾನದ ನಂತರ ಸಲಿಂಗ ಮದುವೆಗೆ ಮಾನ್ಯತೆ ಸಿಗುವ ಮುನ್ಸೂಚನೆ ಇದೆ ಎನ್ನಲಾಗಿದ್ದು ಇದೇನಾದರೂ ಸಾಧ್ಯವಾದರೆ ವಿಶ್ವದಲ್ಲಿ ಸಲಿಂಗ ಮದುವೆಯನ್ನು ಮಾನ್ಯ ಮಾಡಿದ ೧೯ ನೆಯ ರಾಷ್ಟ್ರವಾಗಲಿದೆ ಐರ್ಲ್ಯಾಂಡ್. ಯುರೋಪಿನಲ್ಲಿ ೧೪ ನೆಯ ರಾಷ್ಟ್ರವಾಗಲಿದೆ.

ದಕ್ಷಿಣ ಆಫ್ರಿಕಾ, ನ್ಯೂಜೀಲ್ಯಾಂಡ್, ಕೆನಡಾ, ಬ್ರೆಜಿಲ್ ಮತ್ತು ಅರ್ಜೆಂಟೈನಾ ರಾಷ್ಟ್ರಗಳು ಕೂಡ ಸಲಿಂಗ ಮದುವೆಯನ್ನು ಮಾನ್ಯ ಮಾಡಿವೆ. ಈ ಹಿಂದೆ ಕ್ರೊಯೇಶಿಯಾ ಮತ್ತು ಸ್ಲೋವೆನಿಯಾದಲ್ಲಿ ಸಲಿಂಗ ಮದುವೆಯ ವಿರುದ್ಧವೇ ಹೆಚ್ಚು ಮತದಾನವಾಗಿದ್ದರೂ ಸ್ಲೊವೇನಿಯಾ ಸಂಸತ್ತು ಸಲಿಂಗ ಮದುವೆಯನ್ನು ಕಾನೂನು ಮಾನ್ಯ ಮಾಡಿತ್ತು.

SCROLL FOR NEXT