ಪ್ರಧಾನ ಸುದ್ದಿ

ಮೋದಿ ಭೇಟಿ ಮಾಡಿದ ಮಾಂಝಿ, ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆ

Guruprasad Narayana

ನವದೆಹಲಿ: ಜನತಾ ಪರಿವಾರದ ವಿಲೀನದ ಬಗ್ಗೆ ಇನ್ನು ವಿವಾದಗಳು ಬಗೆ ಹರಿಯುವ ಲಕ್ಷಣಗಳು ಕಾಣದಾಗಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಜಾತಿ ಆಧಾರಿತ ಬಿಹಾರ ರಾಜಕಾರಣದಲ್ಲಿ ಪ್ರಮುಖರಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದ್ದಾರೆ.

ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ನವೆಂಬರ್ ನಲ್ಲಿ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಮಣಿಸಲು ತಮ್ಮ ಜೊತೆ ಕೈಜೋಡಿಸುವಂತೆ ಮನವಿ ಮಾಡಿದ ಕೆಲ ದಿನಗಳ ನಂತರ ಈಗ ಮಾಂಝಿ ತಮ್ಮ ಆಟಕ್ಕೆ ಮುಂದಾಗಿದ್ದಾರೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮಾಂಝಿ ರೈತರಿಂದ ಧಾನ್ಯ ಸಂಗ್ರಹ ಪ್ರಕರಣದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಸಿ ಬಿ ಐ ತನಿಖೆಗೆ ಆದೇಶಿಸಲು ಮನವಿ ಮಾಡಿದ್ದಾರೆ.

"ರಾಜ್ಯದಲ್ಲಿ ರೈತರನ್ನು ಕಡೆಗಣಿಸುತ್ತಿರುವ ವಿಷಯವನ್ನು ಪ್ರಧಾನಿಯವರ ಗಮನಕ್ಕೆ ತರಬೇಕಿತ್ತು. ಈ ಪ್ರಕರಣಗಳ ಮೇಲೆ ಸಿ ಬಿ ಐ ತನಿಖೆಗೆ ಆದೇಶಿಸಲು ಸಹಕರಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ" ಎಂದು ಭೇಟಿಯ ನಂತರ ಮಾಂಝಿ ತಿಳಿಸಿದ್ದಾರೆ.

ಜೆಡಿಯು ಮತ್ತು ಆರ್ ಜೆ ಡಿ ಜಂಟಿಯಾಗಿ ಚುನಾವಣೆಗೆ ಹೋಗುತ್ತಿರುವ ಹಿನ್ನಲೆಯಲ್ಲಿ, ಮಹಾದಲಿತ ಸಮುದಾಯವನ್ನು ಓಲೈಸಲು ಮಾಂಝಿ ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎನ್ನುವ ಸುದ್ದಿ ಈಗ ದಟ್ಟವಾಗಿದೆ.



SCROLL FOR NEXT