ಪ್ರಧಾನ ಸುದ್ದಿ

ಮಹಿಳಾ ಲೈಂಗಿಕ ಕಿರುಕುಳ: ಮತ್ತೆ ತೊಂದರೆಗೆ ಸಿಲುಕಿದ ಊಬರ್ ಟ್ಯಾಕ್ಸಿ ಸೇವೆ

Guruprasad Narayana

ಹಲವಾರು ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣಗಳು ಊಬರ್ ಕ್ಯಾಬ್ ಸೇವೆಯ ವಿರುದ್ಧ ಈಗಾಗಲೇ ದಾಖಲಾಗಿದ್ದು, ಮತ್ತೀಗ ಗುರಗಾಂವ್ ನಲ್ಲಿ ಊಬರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲೇ ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣ ನೆನ್ನೆ ಬೆಳಕಿಗೆ ಬಂದಿದೆ.

ಮಹಿಳೆಯನ್ನು ಗುರಗಾಂವ್ ಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಚಾಲಕ ಮಹಿಳೆಗೆ ಮುತ್ತಿಡಲು ಪ್ರತ್ನಿಸಿದ ಎಂದು ದೂರಲಾಗಿದೆ. ಸಂತ್ರಸ್ತಳ ಸಹೋದರ ಸಾಮಾಜಿಕ ಜಾಲತಾಣದಲ್ಲಿ ಅಮೇರಿಕಾ ಮೂಲದ ಈ ಕ್ಯಾಬ್ ಆಪ್ ಸೇವೆಯ ಚಾಲಕನ ವಿರುದ್ಧ ದೂರಿದ್ದಾರೆ.

ಇದರ ವಿರುದ್ಧ ಊಬರ್ ಸಂಸ್ಥೆಗೆ ದೂರು ನೀಡಲಾಗಿದ್ದರೂ ಅಧಿಕಾರಿಗಳು ಚಾಲಕನ ವಿರುದ್ದ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಈ ಸಾಮಾಜಿಕ ಜಾಲತಾಣದ ದೂರಿಗೆ ಪ್ರತಿಕ್ರಿಯಿಸಿರುವ ಊಬರ್, "ಈ ದೂರಿನ ಹಿನ್ನಲೆಯಲ್ಲಿ ನಮ್ಮ ತಂಡ ಚಾಲನಕನೊಡನೆ ಕೂಡಲೆ ದೂರವಾಣಿ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದೇವೆ. ಹಾಗು ಇದರ ಬಗ್ಗೆ ಕಂಡುಹಿಡಿಯಲು ಚಾಲಕನ ಜೊತೆ ಹಲವಾರು ತಂಡಗಳು ಮಾತನಾಡಿವೆ.

ಇಂತಹ ತಪ್ಪು ನಡವಳಿಕೆಯನ್ನು ಊಬರ್ ಸಹಿಸುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದೇವೆ. ಇದು ಖಾಸಗಿ ವ್ಯಕ್ತಿಗಳಿಗೆ ಸಂಬಂಧಪಟ್ಟಿರುವುದರಿಂದ ನೇರವಾಗಿ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ವಿಚಾರಣೆ ಮಾಡುತ್ತೇವೆ" ಎಂದು ಊಬರ್ ತಿಳಿಸಿದೆ.

ಈ ರೀತಿ ಭರವಸೆ ನೀಡಿದ್ದರೂ ಊಬರ್ ಅಧಿಕಾರಿಗಳು ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

SCROLL FOR NEXT