ಬೆಂಗಳೂರು ಅಭಿವೃದ್ಧಿಗೆಂದೇ ಪ್ರತ್ಯೇಕ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ. ಅಲ್ಲದೆ, ಇದರ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ.ಆದರೆ, ಇಲ್ಲಿ
ಜನತೆಯನ್ನು ನಾನಾ ಬಗೆಯ ಸಮಸ್ಯೆಗಳು ಕಾಡುತ್ತಲೇ ಇವೆ. ಅದರಲ್ಲಿ ಪ್ರಮುಖವಾದ ಹತ್ತು ಸಮಸ್ಯೆಗಳನ್ನು ಪಟ್ಟಿ ಮಾಡಿ ಈ ನೂತನ ಸಚಿವರ ಮುಂದೆ ನೀಡುವ ಯತ್ನ ಇಲ್ಲಿದೆ.
ಬೆಂಗಳೂರು: ಬೆಂಗಳೂರಿಗೆ ಪ್ರತ್ಯೇಕ ಸಚಿವರು ನೇಮಕಗೊಂಡು ಎರಡು ವಾರ ಕಳೆದಿದೆ. ಬೆಂಗಳೂರು ಉಸ್ತುವಾರಿಯು ಸಚಿವರಿಗೆ ಹೊಸದಿರಬಹುದು. ಆದರೆ, ಇಲ್ಲಿರುವ ಹಳೇ ಸಮಸ್ಯೆಗಳು ಮಾತ್ರ ಸಚಿವರನ್ನು ಮುತ್ತಿಕೊಳ್ಳಲು ಸಜ್ಜಾಗಿ ನಿಂತಿವೆ. ಹೊಸ ಉಸ್ತುವಾರಿ ಸಚಿವರಾದರೂ ಸಮಸ್ಯೆಗೆ ಒಂದು ಪರಿಹಾರ ಕೊಟ್ಟಾರು ಎಂಬ ನಂಬಿಕೆ ನಗರವಾಸಿಗಳದ್ದು. ದೇಶ ವಿದೇಶಗಳಲ್ಲಿ ಸಿಲಿಕಾನ್ ಸಿಟಿ ಎಂದು ಎಷ್ಟು ಖ್ಯಾತಿಗಳಿಸಿದೆಯೋ ಅಷ್ಟೇ ಪ್ರಮಾಣದಲ್ಲಿ ಕುಖ್ಯಾತಿಯನ್ನೂಗಳಿಸಿದೆ.
ನಗರದ ಕಸ ಸಮಸ್ಯೆ, ಸಂಚಾರ ದಟ್ಟಣೆ, ಗುಂಡಿ ಬಿದ್ದ ರಸ್ತೆಗಳು, ವಾಯುಮಾಲಿನ್ಯ ಹೀಗೆ ರಾಶಿರಾಶಿ ಸಮಸ್ಯೆಗಳು ಬೆಳೆಯುತ್ತಲೇ ಇವೆ. ಆಳುವವರು ಇದಕ್ಕೆ ತಾತ್ಕಾಲಿಕ ತೇಪೆ ಹಚ್ಚುತ್ತಿದ್ದಾರೆ ವಿನಃ ದೂರದೃಷ್ಟಿಯ ಕೆಲಸಗಳಾಗುತ್ತಿಲ್ಲ ಎಂಬ ಕೊರಗು ನಾಗರಿಕರದ್ದು. ಏಳೆಂಟು ವರ್ಷಗಳ ಹಿಂದೆ ಮೂಲಸೌಕರ್ಯ ವಿಚಾರದಲ್ಲಿ ಕಣ್ಣಿಗೆ ಕಾಣುವ ಒಂದಿಷ್ಟು ಕೆಲಸಗಳು ನಡೆದಿದ್ದವು. ನಂತರದ ದಿನಗಳಲ್ಲಿ ಪರಿಣಾಮ ಕಾರಿಯಾದ ಬದಲಾವಣೆಗಳು ಕಂಡುಬಂದಿಲ್ಲ ಎಂಬುದನ್ನು ಜನ ಗುರುತಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಂತೂ ಗುಂಡಿ ಬಿದ್ದ ರಸ್ತೆಗಳು ಹಾಗೂ ವಿಲೇವಾರಿಯಾಗದ ಕಸ ಹೆಚ್ಚಿದೆ. ಇವೆರಡಕ್ಕೂ ಹೊಸ ಉಸ್ತುವಾರಿ ಸಚಿವರು ಪರಿಹಾರ ನೀಡಿಯಾರೇ? ಎಂಬ ನಿರೀಕ್ಷೆ ಜನರದು. ಈಗ ಬೆಂಗಳೂರು ಅಬಿsವೃದಿಟಛಿ ಹಾಗೂ ಅದರ ಉಸ್ತುವಾರಿ ಹೊತ್ತಿರುವ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಬೆಂಗಳೂರೇನು ಹೊಸತಲ್ಲ. ಅವರು ಬೆಂಗಳೂರಿನಿಂದಲೇ ಆರಿಸಿಬಂದಿದ್ದು. ಇಲ್ಲಿನ ಸಮಸ್ಯೆಗಳೆಲ್ಲವೂ ಅವರಿಗೆ ಗೊತ್ತಿರುವಂಥದ್ದೇ. ಈಗ ತಾವು ಪ್ರತಿನಿ„ಸುವ ನಗರವನ್ನು ಸಮಸ್ಯೆ ಗಳಿಂದ ಮುಕ್ತ ಮಾಡುವ ಜವಾಬ್ದಾರಿ ಅವರಿಗಿದೆ. ಜನ ಸಹ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಕನ್ನಡಪ್ರಭವು ಬೆಂಗಳೂರು ಅಬಿsವೃದಿಟಛಿ, ಉಸ್ತುವಾರಿ ಸಚಿವರಿಗೆ ಪ್ರಮುಖ ಹತ್ತು ಸಮಸ್ಯೆಗಳನ್ನು ಮುಂದಿಟ್ಟು, ಸಮಸ್ಯೆಗಳಿಗೆ ಪರಿಹಾರ ನಿರೀಕ್ಷಿಸುತ್ತಿದೆ.
ನಾಗರಿಕರೇ ನಿಮ್ಮ ವ್ಯಾಪ್ತಿಯಲ್ಲೇ ಏನೇ ಸಮಸ್ಯೆಗಳಿದ್ದರೂ ಈ 9538733555 ನಂಬರ್‍ಗೆ ವಾಟ್ಸ್ ಆ್ಯಪ್ ಮಾಡಿ ಸಚಿವರ ಮುಂದೆ ಹಂಚಿಕೊಳ್ಳಬಹುದು.
ಕಸ ವಿಲೇವಾರಿ
ನಗರದಲ್ಲಿ ಪದೇ ಪದೇ ಹೆಚ್ಚು ಕಾಡುತ್ತಿರುವ ಸಮಸ್ಯೆ ಕಸ ವಿಲೇವಾರಿ. ಇದು ಆಗಾಗ ತಲೆ ದೋರುತ್ತಲೇ ಇದೆ. ಇದೇ ತಿಂಗಳು ದೊಡ್ಡಬಳ್ಳಾಪುರ ತಾಲೂಕಿನ ಘಟಕಕ್ಕೆ ಕಸ ಸುರಿಯದಂತೆ ದೊಡ್ಡಮಂಕಲಾಳ ಸಮೀಪ ಅಲ್ಲಿನ ಜನತೆ ಪ್ರತಿಭಟನೆ ನಡೆಸಿದರು. ಪರಿಣಾಮ ಬೆಂಗಳೂರಿನ ಪಶ್ಚಿಮ ವಿಭಾಗದ ಕಸ ರಸ್ತೆಯಲ್ಲೇ ಉಳಿಯಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮೂವರು ಸಚಿವರು ಸ್ಥಳಕ್ಕೆ ಭೇಟಿಕೊಟ್ಟು ಭರವಸೆ ನೀಡಬೇಕಾಯಿತು. ಇದೊಂದು ಉದಾಹರಣೆಯಷ್ಟೇ.
ಪ್ರತಿ 23 ತಿಂಗಳಿಗೆ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಅಧಿಕಾರಿಗಳನ್ನು ಕೇಳಿದರೆ, ಬೆಂಗಳೂರಿನ ಸುತ್ತ ಏಳು ಕಸ ವಿಲೇವಾರಿ ಘಟಕಗಳಿಗೆ ಸ್ಥಳ ಗುರುತಿಸಿ ಕೆಲಸ ಪ್ರಗತಿಯಲ್ಲಿದೆ ಎಂದೇ ಹೇಳುತ್ತಿದ್ದಾರೆ. ಇವು ಕಾರ್ಯಾರಂಭ ಆಗುವುದು ಯಾವಾಗ? ಶೀಘ್ರ ಆರಂಭವಾಗಲು ನೀವೇನು ಮಾಡುತ್ತೀರಾ? ಇದನ್ನು ಹೊರತುಪಡಿಸಿ ಬೇರೆ ಪರಿಹಾರಗಳೇನಿವೆ?
ವರುಣ ಬಂದರೆ ರಾಮಾಯಣ
ಒಂದು ಸಣ್ಣ ಮಳೆಯಾದರೂ ಬೆಂಗಳೂರು ಉಸಿರು ಬಿಗಿಹಿಡಿದು ಸ್ತಬಟಛಿಗೊಳ್ಳುತ್ತದೆ. ಮಳೆ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗಲು ಸೂಕ್ತ ವ್ಯವಸ್ಥೆಗಳಾಗದ ಪರಿಣಾಮ ಅದುವೇ ಸಮಸ್ಯೆಯಾಗುತ್ತಿದೆ. ಮೊದಲು ಸಂಚಾರದ ಮೇಲೆ ಪರಿಣಾಮವಾಗುತ್ತದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ, ಕಾಲುವೆ ಉಕ್ಕಿ ಹರಿಯುತ್ತವೆ. ಈ ಸಮಸ್ಯೆಗೆ ಪರಿಹಾರಕಂಡುಕೊಳ್ಳಲು ಸಾಧ್ಯವೇ?
ಕುಡಿಯುವ ನೀರು
ಕುಡಿಯುವ ನೀರಿಗೆ ಪರದಾಟ ನಿಂತಿಲ್ಲ. ಕಾವೇರಿ ನೀರು ಸರಬರಾಜು ಮಾಡುವ ವ್ಯವಸ್ಥೆ ಪೂರ್ಣವಾಗಿಲ್ಲ. ಬಿಬಿಎಂಪಿ ರಚನೆಯಾಗುವಾಗ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಅಲ್ಲಿನ ಜನರು ನೀರಿಗಾಗಿ ಕಣ್ಣೀರು ಹಾಕುತ್ತಲೇ ಇದ್ದಾರೆ. ಅವರ ಸಮಸ್ಯೆ ಪರಿಹಾರಕ್ಕೆ ಏನು ಕಾರ್ಯಕ್ರಮ ಎಂಬುದು ಸ್ಪಷ್ಟವಿಲ್ಲ.
ಟ್ರಾಫಿಕ್ ಜಾಮ್
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ಪಷ್ಟ ಕಾರ್ಯಸೂಚಿ ಕಾಣುತ್ತಿಲ್ಲ. ಅವೈಜ್ಞಾನಿಕ ಯೋಜನೆಗಳು ಸಂಚಾರ ಸಮಸ್ಯೆಯನ್ನು ಹೆಚ್ಚು ಮಾಡುತ್ತಿವೆ. ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಕಿಕೊಂಡ ಅನೇಕ ಕಾರ್ಯಕ್ರಮಗಳು ಪೂರ್ಣವಾಗಿ ಅನುಷ್ಠಾನಕ್ಕೆ ಬಾರದೇ ಹೋದವು. ಹೊಸ ಸರ್ಕಾರ ಬಂದ ಮೇಲೆ ಅಂತಹ ಸ್ಪಷ್ಟ ಕಾರ್ಯಸೂಚಿಗಳನ್ನು ಹಾಕಿಕೊಳ್ಳಲೇ ಇಲ್ಲ. ಸಿಗ್ನಲ್ ಫ್ರೀ ಸಂಚಾರಕ್ಕಾಗಿ ಫ್ಲೈಓವರ್, ಮಾ್ಯಜಿಕ್ ಬಾಕ್ಸ್, ಅಂಡರ್ ಪಾಸ್‍ಗಳಂತಹ ಹೊಸ ಉಪಕ್ರಮಗಳ ಅಗತ್ಯವಿದೆ.
ಗುಂಡಿಯಾದ ರಸ್ತೆಗಳು
ನಗರದ ತುಂಬೆಲ್ಲಾ ಗುಂಡಿಯಿಂದಲೇ ತುಂಬಿಹೋದ ರಸ್ತೆಗಳೇ ಕಾಣಸಿಗುತ್ತವೆ. ಇದರಿಂದ ಇಬ್ಬರು ಜೀವವನ್ನೂ ತೆತ್ತರು. ಇದರಿಂದ ಸರಾಗ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಜೀವಕ್ಕೆ ಕಂಟಕವಾಗಿರುವ ಈ ಗುಂಡಿಗಳನ್ನು ಮುಚ್ಚುವ ಕೆಲಸ ಮೊದಲಾಗಬೇಕಾಗಿದೆ. ಜೊತೆಗೆ ರಸ್ತೆ ವಿಸ್ತರಣೆ ನಡೆದರೆ ಸಂಚಾರ ಸರಾಗವಾದೀತು.
ಬ್ಯಾನರ್ ಹಾವಳಿ
ನಗರದಲ್ಲಿ ಪೋಸ್ಟರ್, ಬ್ಯಾನರ್ ಹಾವಳಿ ಮಿತಿ ಮೀರಿದ್ದು, ಜನರಿಗೆ ಕಿರಿಕಿರಿಯಾಗುತ್ತಿದೆ. ಬಿಬಿಎಂಪಿಯಲ್ಲಿ ನೀತಿ ರೂಪಿಸುವವರೇ ಅನ„ಕೃತವಾಗಿ ತಮ್ಮ ಭಾವಚಿತ್ರವಿರುವ ಫ್ಲೆಕ್ಸ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಅದೇ ರೀತಿ ಅನಧಿಕೃತ ಜಾಹಿರಾತು ಹಾವಳಿಯೂ ಮಿತಿಮೀರಿದ್ದು, ಇದಕ್ಕೊಂದು ಸ್ಪಷ್ಟ ಪರಿಹಾರ ಸಿಗಬೇಕು.
ಮೆಟ್ರೋ ಸಿಗೋದು?
ಮೆಟ್ರೊ ಮೇಲೆ ಬೆಂಗಳೂರಿಗರಿಗೆ ಹೆಚ್ಚಿನ ನಿರೀಕ್ಷೆ ಇದೆ. ಕಾಮಗಾರಿಗಳು ಆದಷ್ಟು ಶೀಘ್ರ ಮುಗಿದರೆ ಮತ್ತು ಹೆಚ್ಚಿನ ಸ್ಥಳಗಳಿಗೆ ಮೆಟ್ರೊ ತಲುಪುವಂತಾದರೆ ಸಂಚಾರ ದಟ್ಟಣೆಯಿಂದ ಪಾರಾಗಬಹುದೆಂಬ ಆಸೆ ಅವರಿಗಿದೆ. ಆದರೆ, ಇತ್ತೀಚೆಗೆ ರೈಲ್ವೆ ಯಾತ್ರಿ ಡಾಟ್ ಇನ್ ನಡೆಸಿದ ಸಮೀಕ್ಷೆಯ ಪ್ರಕಾರ, ಈಗಿನ ವೇಗದಲ್ಲಿ ಕಾಮಗಾರಿ ನಡೆದರೆ ಎರಡನೇ ಹಂತದ ಕಾಮಗಾರಿ ಮುಗಿದು ಮೆಟ್ರೋ ಓಡಾಡಲು ಇನ್ನೂ 17 ವರ್ಷ ಬೇಕಾಗುತ್ತಂತೆ. ಹೊಸದೆಹಲಿಮೆಟ್ರೋ ಮೊದಲ ಹಂತದಲ್ಲಿ ವಾರ್ಷಿಕ 8.06 ಕಿ.ಮೀ.ನಂತೆ ಕಾಮಗಾರಿ ಪೂರ್ಣಗೊಳಿಸಿದ್ದು, ಎರಡನೇ ಹಂತದಲ್ಲಿ 198 ಕಿ.ಮೀ. ಪೂರ್ಣಗೊಳಿಸಲು 12.8 ವರ್ಷ ಕಾಲ ತೆಗೆದುಕೊಂಡಿತ್ತು. ಆದರೆ, ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಆರಂಭಗೊಂಡು 8 ವರ್ಷಗಳು ಕಳೆದರೂ 22.7 ಕಿ.ಮೀ ಕಾಮಗಾರಿ ಪೂರ್ಣಗೊಳಿಸಲೂ ಹೆಣಗಾಡುತ್ತಿದೆ.
ಬಸ್ ಸಂಚಾರ
ನಗರ ಸಾರಿಗೆ ಬಸ್‍ಗಳೇನೋ ವಿಪರೀತವಾಗಿ ಸಂಚರಿಸುತ್ತಿವೆ. ಆದರೆ, ಹೊಸ ಬಡಾವಣೆಗಳು ಮತ್ತು ಒಳ ಪ್ರದೇಶಗಳಿಗೆ ಅವುಗಳ ಓಡಾಟ ಅಷ್ಟಕ್ಕಷ್ಟೇ.
ಪಾದಚಾರಿ ಮಾರ್ಗ
ಅವೈಜ್ಞಾನಿಕವಾಗಿ ನಿರ್ಮಿಸಿರುವ ಪಾದಚಾರಿ ಸುರಂಗ ಮಾರ್ಗಗಳು ಬಳಕೆಯಾಗದೇ ನೂರಾರು ಕೋಟಿ ಹಣ ವ್ಯರ್ಥವಾಗಿದೆ. ಪಾದಚಾರಿ ಮಾರ್ಗಗಳ ಒತ್ತುವರಿಯಿಂದಾಗಿಯೂ ಜನ ಪರದಾಡುವಂತಾಗಿದೆ. ಈ ಬಗ್ಗೆ ಸ್ಪಷ್ಟ ನೀತಿ, ನಿರ್ದೇಶನ ಬೇಕು.
ಮರಗಿಡಗಳ ರಕ್ಷಣೆ
ಉದ್ಯಾನ ನಗರಿ ಖ್ಯಾತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮರಗಳ ಸಂರಕ್ಷಣೆಯಾಗಬೇಕಾಗಿದೆ. ಆದರೆ, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಹಾಲಿ ಇರುವ ಮರಗಳು ಇಲ್ಲವಾಗುತ್ತಿವೆ. ಮರ ಸಂರಕ್ಷಣೆ ಮತ್ತು ಹೊಸ ಸಸಿ ನೆಡುವ ಬಗ್ಗೆ ಹೆಚ್ಚಿನ ಗಮನದ ಅವಶ್ಯಕತೆ ಇದೆ. ಹಾಲಿ ಬೆಳವಣಿಗೆ ವಾತಾವರಣದ ಮೇಲೂ ಪರಿಣಾಮ ಬೀರುತ್ತಿದೆ.