ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಾನೆತ್ತರಕ್ಕೆ ಭತ್ತದ ದರ ಏರಿಕೆ

ನೀರಿನ ಅಭಾವದಿಂದ ಬೇಸಿಗೆ ಭತ್ತ ಉತ್ಪಾದನೆ ಈ ವರ್ಷ ಇಲ್ಲ. ನೆರೆಯ ತಮಿಳುನಾಡು, ಆಂಧ್ರದಲ್ಲಿ ಚಂಡಮಾರುತದಿಂದ ಬತ್ತ ಹಾಳಾಗಿದೆ...

(ಸಾಂದರ್ಭಿಕ ಚಿತ್ರ)
Manjula VN
Updated On : 19 Nov 2015, 7:48 am

ಕೊಪ್ಪಳ: ನೀರಿನ ಅಭಾವದಿಂದ ಬೇಸಿಗೆ ಭತ್ತ ಉತ್ಪಾದನೆ ಈ ವರ್ಷ ಇಲ್ಲ. ನೆರೆಯ ತಮಿಳುನಾಡು, ಆಂಧ್ರದಲ್ಲಿ ಚಂಡಮಾರುತದಿಂದ ಬತ್ತ ಹಾಳಾಗಿದೆ.

ಪರಿಣಾಮ ಮಾರುಕಟ್ಟೆಯಲ್ಲಿ ಭತ್ತದ ದರ ಮೆಲ್ಲಗೆ ಏರಲಾರಂಭಿಸಿದೆ. ರಾಜ್ಯದಲ್ಲಿ ಅತ್ಯಧಿಕ ಭತ್ತ ಉತ್ಪಾದನೆ ಮಾಡುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರಾಜ್ಯದ 8.50 ಲಕ್ಷ ಎಕರೆ ಹಾಗೂ ಆಂಧ್ರದ 4.50 ಲಕ್ಷ ಎಕರೆ ಪ್ರದೇಶದಲ್ಲಿ ಬೇಸಿಗೆಯ ಉತ್ಪಾದನೆ ಕುಂಠಿತವಾಗಿದೆ.

ರಾಜ್ಯದ ಬಹುತೇಕ ಜಲಾಶಲಯಗಳಲ್ಲಿ ನೀರಿನ ಅಭಾವ ಇದ್ದು ಬೇಸಿಗೆ ಬೆಳೆಗೆ ನೀರಿನ ಚಿಂತೆ ಎದುರಾಗಲಿದೆ. ಹೀಗಾಗಿ, ಸೋನಾ ಮಸೂರಿ ಬತ್ತದ ದರ ಪ್ರತಿ ಕ್ವಿಂಟಲ್ ಗೆ ರು.1,800 ಇದ್ದುದು ರು. 2,000ದಿಂದ 2,500ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement