ಪ್ರಧಾನ ಸುದ್ದಿ

ಭಾರತ ಜಾಗತಿಕ ನಿರ್ಮಾಣ ತಾಣವಾಗಿ ಬೆಳೆಯುತ್ತಿದೆ : ಮೋದಿ

Rashmi Kasaragodu
ಕೌಲಾಲಾಂಪುರ್:  ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಆಸಿಯಾನ್ ಮತ್ತು ಈಸ್ಟ್ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.
ಇಂದು ಆಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಭಾರತ ಅವಕಾಶಗಳ ಕೇಂದ್ರ ಸ್ಥಾನವಾಗಿದೆ. ಉದಾಹರಣೆಗೆ ನಮ್ಮ 50 ನಗರಗಳು ಮೆಟ್ರೋ ರೈಲು ಸೇವೆಗೆ ಸಜ್ಜಾಗಿವೆ. ನವೀಕರಣಗೊಳಿಸಲ್ಪಡುವ ಶಕ್ತಿಗಳತ್ತ ನಾವು ಮುನ್ನಡೆಯುತ್ತಿದ್ದೇವೆ. ನಮ್ಮ  ಪ್ರಜಾಪ್ರಭುತ್ವ ಮತ್ತು ಕಾನೂನು ವ್ಯವಸ್ಥೆ ನಿಮ್ಮ ಹೂಡಿಕೆಗೆ ಭದ್ರತೆಯನ್ನು ನೀಡುತ್ತದೆ.  ನಮ್ಮಲ್ಲಿ ವ್ಯವಹಾರ ನಡೆಸಲು ಪೂರಕವಾಗುವಂತೆ ನಾವು ಭಾರತವನ್ನು ರೂಪಿಸುತ್ತಿದ್ದೇವೆ ಎಂದಿದ್ದಾರೆ.
ನಮ್ಮಲ್ಲೀಗ ಜಿಡಿಪಿ ಏರಿಕೆಯಾಗಿದೆ, ಹಣದುಬ್ಬರ ಇಳಿಕೆಯಾಗಿದೆ, ಎಫ್‌ಡಿಐ ಏರಿದ್ದು, ಅರ್ಥಿಕ ಕೊರತೆ ಕಡಿಮೆಯಾಗಿದೆ. ಬಡ್ಡಿದರ ಕಡಿಮೆಯಾಗಿದ್ದು, ಆದಾಯ ತೆರಿಗೆ ಏರಿಕೆಯಾಗಿದೆ ಮತ್ತು ರುಪಾಯಿ ಸ್ಥಿರವಾಗಿದೆ.
ಅದೇ ವೇಳೆ 65 ವರ್ಷಗಳ ಸಾಂಪ್ರದಾಯಿಕತೆಯಿಂದ ಹೊರಬಂದು ನಾವೀಗ ವಿದೇಶೀ ನೀತಿಗಳಿಗೆ ಸ್ವಾಗತ ನೀಡಿದ್ದೇವೆ. ನಾವೀಗ ಭಾರತವನ್ನು ಜಾಗತಿಕ ನಿರ್ಮಾಣ ತಾಣವನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
SCROLL FOR NEXT