ಪ್ರಧಾನ ಸುದ್ದಿ

ಕಲಾಂ ಬಂಗ್ಲೆ ಸ್ಮಾರಕ ಮಾಡಲು ನಿರಾಕರಿಸಿದ ಕೇಂದ್ರ, ಬಿಜೆಪಿ ತೊರೆದ ಕಲಾಂ ಸಂಬಂಧಿ

Lingaraj Badiger

ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ದಿ. ಡಾ.ಎಪಿಜೆ ಅಬ್ದುಲ್ ಕಲಾಂ ಅವರು ವಾಸಿಸುತ್ತಿದ್ದ ಬಂಗ್ಲೆಯನ್ನು ಸ್ಮಾರಕವಾಗಿ ಮಾಡಲು ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಕಲಾಂ ಅವರ ಮೊಮ್ಮಗ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ದೆಹಲಿಯಲ್ಲಿ ಕಲಾಂ ಅವರು ವಾಸವಾಗಿದ್ದ ಮನೆಯನ್ನು ಜನಸ್ನೇಹಿ, ಜ್ಞಾನಭಂಡಾರದ ಸಂಗ್ರಹಾಲಯವನ್ನಾಗಿ ಮಾಡಬೇಕೆಂಬ ಸಾರ್ವಜನಿಕರ ಹಿತಾಸಕ್ತಿಯನ್ನು ನೆರವೇರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಲಾಂ ಮೊಮ್ಮಗ ಸೈಯದ್ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೇಂದ್ರದ ಈ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ತೊರೆದಿದ್ದಾರೆ ಎಂದು ವರದಿ ಮಾಡಲಾಗಿದೆ.

2012ರಲ್ಲಿ ಬಿಜೆಪಿ ಸೇರಿದ್ದ ಸೈಯದ್ ಇಬ್ರಾಹಿಂ ಅವರನ್ನು ತಮಿಳುನಾಡು ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಕಲಾಂ ಅವರು ವಾಸವಿದ್ದ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ 8ನೇ ವರ್ಗದ, 10ನೇ ನಂಬರ್‌ನ ಸರ್ಕಾರಿ ಬಂಗ್ಲೆಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಸಚಿವ ಮಹೇಶ್‌ ಶರ್ಮಾ ಅವರಿಗೆ ನೀಡಿತ್ತು. ಈ ಬಗ್ಗೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿದ್ದವೂ.

ತಮಿಳುನಾಡಿನ ಹಿರಿಯ ಪತ್ರಕರ್ತ ಭಗವಾನ್‌ ಸಿಂಗ್‌ ಅವರು ಚೇಂಜ್‌ ಡಾಟ್‌ ಆರ್ಗ್‌ ನಲ್ಲಿ ಆನ್‌ಲೈನ್‌ ಮನವಿಯನ್ನು ಹರಿಯಬಿಟ್ಟಿದ್ದಾರೆ. ಈ ಮನವಿಯ ಮೂಲಕ ಅವರು ಕಲಾಂ ನಿವಾಸವನ್ನು ಜ್ಞಾನ ಕೇಂದ್ರವನ್ನಾಗಿ ಇಲ್ಲವೇ ಮ್ಯೂಸಿಯಂ ಆಗಿ ಪರಿವರ್ತಿಸುವಂತೆ ಸರಕಾರವನ್ನು ಆಗ್ರಹಿಸಿದ್ದರು.

SCROLL FOR NEXT