ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ರಾಘವೇಶ್ವರ ಶ್ರೀ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಮಠದಲ್ಲಿ ಎಂದೂ ಅಮಂಗಳ ನಡೆದಿಲ್ಲ: ರಾಘವೇಶ್ವರ ಶ್ರೀ

ತಮ್ಮ ವಿರುದ್ಧದ ಆರೋಪ ಮತ್ತು ಟೀಕೆಗಳಿಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. `...

ಬೆಂಗಳೂರು: ತಮ್ಮ ವಿರುದ್ಧದ ಆರೋಪ ಮತ್ತು ಟೀಕೆಗಳಿಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. `

`ಗುರುಶಿಷ್ಯರನ್ನು ಬೇರೆ ಮಾಡುವುದೇ ನಮ್ಮ ವಿರುದ್ಧದ ಷಡ್ಯಂತ್ರಗಳ ಮುಖ್ಯ ಉದ್ದೇಶ. ಷಡ್ಯಂತ್ರ ರೂಪಿಸುವವರು ಅದನ್ನು ಬಿಟ್ಟು ಜೀವನದಲ್ಲಿ ಉತ್ತಮ ಕೆಲಸ ಮಾಡಲಿ. ಮಠದಲ್ಲಿ ಯಾವುದೇ ತಿಯ  ಅಮಂಗಳಗಳೂ ನಡೆದಿಲ್ಲ, ಮುಂದೆಯೂ ನಡೆಯುವುದಿಲ್ಲ,'' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ `ಬದ್ಧತಾ ಸಮಾವೇಶದಲ್ಲಿ  ಮಾತನಾಡಿ, "ಮಠದಲ್ಲಿ ಎಂದೂ ಅಮಂಗಳ ಸಂಭವಿಸಿಲ್ಲ" ಎಂದರು.ಮುಂದಿನ ದಿನಗಳಲ್ಲಿ ಸಂಭವಿಸುವುದೂ ಇಲ್ಲ. ಮಠದ ವಿರುದ್ಧ ಷಡ್ಯಂತ್ರ ಅಷ್ಟು ಸುಲಭವಲ್ಲ. ತಮ್ಮ ವಿರುದ್ಧ ಯಾವುದೇ ರೀತಿಯ  ಅಪವಾದ ಬಂದರೂ ನಾವೆಲ್ಲಾ ಇಂದಿಗೂ ಒಗ್ಗಟ್ಟಾಗಿಯೇ ಇದ್ದೇವೆ. ಈ ಸನ್ನಿವೇಶದಲ್ಲಿ ನಾವೆಲ್ಲರೂ ತಾಯಿ-ಮಗುವಿನಂತೆ ಭದ್ರವಾಗಿ ಕೈ-ಕೈ ಹಿಡಿದು ಒಗ್ಗಟ್ಟಿನಿಂದ ಸಾಗಬೇಕು.ಸತ್ಯಕ್ಕೆ ಎಂದೂ ಜಯ ಇದ್ದೇ ಇರುತ್ತದೆ,'' ಎಂದು ಸಮರ್ಥಿಸಿಕೊಂಡಿದ್ದಾರೆ.

`ಈ ಮೋಸದ ಬಲೆಯಲ್ಲಿ ಯಾರೆಲ್ಲಾ ಇದ್ದಾರೆ, ಇನ್ನೂ ಯಾರಿದ್ದಾರೆ ಎಂಬುದು ತಿಳಿಯಬೇಕಿದೆ. ಯಾರು ಏನೇ ಷಡ್ಯಂತ್ರ ನಡೆಸಿದರೂ ಸತ್ಯಕ್ಕೆ ಜಯ ಇದ್ದೇ ಇದೆ. ಒಬ್ಬ ವ್ಯಕ್ತಿ ಮಹಾತ್ಮನಾಗಲು ಇಂತಹ  ಸಾಕಷ್ಟು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕು. ಮಹಾಪುರುಷರ ಜೀವನ ಇದಕ್ಕಿಂತ ಹೊರತಲ್ಲ. ಸಾವಿರಾರು ಜನರಿಗೆ ನೆಮ್ಮದಿ ಕೊಡುವ ಶಕ್ತಿ ಇರುವವರು ಎಲ್ಲರ ಕಣ್ಣೀರು ಒರೆಸಬೇಕು. ವಿಷಕಂಠ  ಆಗಬೇಕು. ಈಗ ಆಗಿರುವುದೆಲ್ಲ ಒಳ್ಳೆಯದಕ್ಕೆ, ಇದೊಂದು ರೀತಿ ಸತ್ಯಪರೀಕ್ಷೆ ಇದ್ದಂತೆ. ಅಲ್ಲದೆ ಈ ಪೀಠಕ್ಕೆ ಬರುವ ಮುನ್ನವೂ ಸಾಕಷ್ಟು ಅಗ್ನಿಪರೀಕ್ಷೆ ಎದುರಿಸಿದ್ದೇವೆ' ಎಂದರು.

ಚಂಪಾ ವಿರುದ್ಧ ಆಕ್ರೋಶ: ``ಬ್ರಾಹ್ಮಣ ವರ್ಗ ಮಂತ್ರ ಸುಳ್ಳುಗಳಿಂದ ಹಣ ವಸೂಲಿ ಮಾಡುತ್ತಿದೆ. ಅವರನ್ನು ದೇಶ ಬಿಟ್ಟು ಓಡಿಸಬೇಕು,'' ಎಂಬ ಚಂಪಾ ಅವರ ಇತ್ತೀಚಿನ ಹೇಳಿಕೆಗೆ ಸಮಾರಂಭದಲ್ಲಿ  ತೀವ್ರ ಆಕ್ರೋಶ ವ್ಯಕ್ತವಾಯಿತು. ಪ್ರಮೋದ್ ಹೆಗಡೆ ಎಂಬುವವರು ಮಾತನಾಡಿ, ``ಚಂಪಾ ಅವರ ಹೇಳಿಕೆ ಎಲ್ಲೆಡೆ ಚರ್ಚೆ ಆಗಬೇಕು. ಅವರ ವಿರುದ್ಧ ತಾವು ಹೋರಾಟಕ್ಕೆ ಸಿದ್ಧವಾಗಬೇಕು. ಅಂತಹ  ಮೂರ್ಖರನ್ನು ನಾವು ಸುಮ್ಮನೆ ಬಿಡಬಾರದು,'' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT