ಪ್ರಧಾನ ಸುದ್ದಿ

ಪರಿಷತ್‍ ಚುನಾವಣೆಗೆ ಬಿಜೆಪಿ ಪಟ್ಟಿ ರಿಲೀಸ್

Manjula VN

ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ 16 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾನುವಾರ ತಡರಾತ್ರಿ ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಚುನಾವಣಾ ಸಮಿತಿ ಮಾಡಿದ್ದ ಶಿಫಾರಸುಗಳಿಗೆ ಅವರು ಒಪ್ಪಿಗೆ ನೀಡಿದ್ದಾರೆ.

ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಪಟ್ಟಿ: ಅರುಣ್ ಷಹಾಪೂರ (ವಾಯವ್ಯ ಶಿಕ್ಷಕರ ಸ್ಥಾನ), ಎಂ ನಾಗರಾಜ (ಪಶ್ಚಿಮ ಶಿಕ್ಷಕರ ಕ್ಷೇತ್ರ), ಎಂ.ವಿ. ರವಿಶಂಕರ (ದಕ್ಷಿಣ ಪದವೀಧರ), ಹನುಮಂತ ರುದ್ರಪ್ಪ ನಿರಾಣಿ (ವಾಯುವ್ಯ ಪದವೀಧರ ಕ್ಷೇತ್ರ).

ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳು: ಆರ್. ರಘು (ಮೈಸೂರು), ಎಂ.ಆರ್. ಕುಶಾಲಪ್ಪ(ಕೊಡಗು), ಕೋಟಾ ಶ್ರೀನಿವಾಸ ಪೂಜಾರಿ(ದಕ್ಷಿಣ ಕನ್ನಡ), ಎಂ.ಕೆ. ಪ್ರಾಣೇಶ್(ಚಿಕ್ಕಮಗಳೂರು), ಆರ್.ಕೆ. ಸಿದ್ದರಾಮಣ್ಣ(ಶಿವಮೊಗ್ಗ), ಗಣಪತಿ ಡಿ ಉಳ್ವೇಕರ್ (ಉತ್ತರ ಕನ್ನಡ), ಪ್ರದೀಪ್ ಶಿವಪ್ಪ ಶೆಟ್ಟರ್ (ಧಾರವಾಡ), ಮಹಾಂತೇಶ ಕಮಟಗಿಮಠ (ಬೆಳಗಾವಿ), ಜಿ.ಎಸ್. ನ್ಯಾಮಗೌಡ (ವಿಜಯಪುರ), ಬಸವರಾಜ ಗಳಂಗಲ್ಲಪ್ಪ ಪಾಟೀಲ್(ಕಲಬುರಗಿ), ಸಿ.ವಿ. ಚಂದ್ರಶೇಖರ್(ರಾಯಚೂರು), ಕೆ.ಎಸ್. ನವೀನ್(ಚಿತ್ರದುರ್ಗ) ಅವರಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ.

SCROLL FOR NEXT