ಪ್ರಧಾನ ಸುದ್ದಿ

ಒಂದು ದಿನ ಮುಂಚೆ ಜಂಬೂಸವಾರಿ!

Srinivasamurthy VN

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ದಿನಾಂಕವನ್ನು ರಾಜ್ಯ ಸರ್ಕಾರ ಬದಲಾಯಿಸಿದೆ. ಅ. 23ರಂದು ವಿಜಯದಶಮಿ ಅಂಗವಾಗಿ ನಡೆಯಬೇಕಿದ್ದ ಜಂಬೂ ಸವಾರಿಯನ್ನು ಅ. 22ರಂದೇ ನಡೆಸಲು ತೀರ್ಮಾನಿಸಿದೆ.

ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನ ಮುಂಚಿತವಾಗಿ ದಸರಾ ಉದ್ಘಾಟನೆ ಮತ್ತು ವಿಜಯದಶಮಿ ಆಚರಣೆ ಎರಡೂ ನಡೆಯಲಿದೆ. ಅಂದರೆ, ಅ. 13ರಂದು ಬೆಳಗ್ಗೆ 11.05ರಿಂದ 11.55ರ ವರೆಗಿನ ಧನುರ್ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಪ್ರಗತಿಪರ ರೈತ ಪುಟ್ಟಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಅ. 22ರಂದು ಬೆಳಗ್ಗೆ 11.55ರಿಂದ 12.20ರವರೆಗಿನ ಧನುರ್ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ, ಮಧ್ಯಾಹ್ನ 1.10ರಿಂದ 1.25ರವರೆಗಿನ ಮಕರ ಲಗ್ನದಲ್ಲಿ ನಂದಿ ಪೂಜೆ ಮತ್ತು 3.12ರಿಂದ 4.10ರೊಳಗಿನ ಕುಂಭ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಅಂಬಾರಿಗೆ ಪುಷ್ಪಾರ್ಚನೆ ಮಾಡಲಾಗುವುದು.

ಸಿದ್ದರಾಮಯ್ಯ, ಮೇಯರ್ ಮತ್ತು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳುವರು. 13ರಂದು ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡುವರು. ಅಂದು ವಿಶೇಷವಾಗಿ ಮಳೆ ಬೆಳೆ ಇಳೆ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

SCROLL FOR NEXT